ಮೇ. 1 ರಂದು ರಾಜ್ಯಾಧ್ಯಂತ ಪಪ್ಪಿ ಚಲನಚಿತ್ರ ಬಿಡುಗಡೆ : ಆಯುಷ ಮಲ್ಲಿ
ಗದಗ : ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಹೊಂದಿರುವ ಪಪ್ಪಿ ಚಲನಚಿತ್ರವು ಇದೇ ಮೇ. 1 ರಂದು ನಗರದ ಕೃಷ್ಣ ಟಾಕೀಸ್ ಸೇರಿದಂತೆ ರಾಜ್ಯಾಧ್ಯಂತ 65 ರಿಂದ 75 ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಆಯುಷ ಮಲ್ಲಿ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರದಲ್ಲಿ ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದ ಜಗದೀಶ, ಸಿಂದನೂರಿನ ಆದಿತ್ಯ ಬಾಲನಟರು ಸೇರಿದಂತೆ ರೇಣುಕಾ ದೇಸಾಯಿ, ದುರಗಪ್ಪ ಕಾಂಬಳೆ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯ ಚಲನಚಿತ್ರವನ್ನು ಜಗತ್ತಿಗೆ ತೋರಿಸಬೇಕು ಮತ್ತು ಬೆಂಗಳೂರಿಗೆ ವಲಸೆ ಹೋಗಿ ಜೀವನ ನಡೆಸುವ ಕುಟುಂಬ ಮತ್ತು ಶ್ರೀಮಂತರ ಮನೆಯಲ್ಲಿ ಬೆಳೆದ ನಾಯಿಯ ಜೊತೆಗಿನ ಪ್ರೀತಿ ವಾತ್ಸಲ್ಯ ಜೀವನ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಖ್ಯಾತ ನಟರಾದ ದೃವ ಸರ್ಜಾ ಹಾಗೂ ರಮ್ಯಾ ಸೇರಿದಂತೆ ತೆಲುಗಿನ ರಾಣಾ ದಗಪಟಿ ಅವರು ಚಿತ್ರದ ಟ್ರೇಲರನ್ನು ಪ್ರಶಂಸಿಸಿದ್ದಾರೆ.
ಈ ಚಿತ್ರವನ್ನು ಬೆಂಗಳೂರು, ಗದಗ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶೋಟಿಂಗ್ ಮಾಡಲಾಗಿದೆ. ಉತ್ತರ ಕರ್ನಾಟಕದ ಕಲಾವಿದರಿಂದ ನಿರ್ಮಾಣವಾದ ಈ ಚಿತ್ರವನ್ನು ಎಲ್ಲರೂ ಪ್ರೋತ್ಸಾಹಿಸಿ ಬೆಂಬಲಿಸಬೇಕೆಂದು ನಿರ್ಮಾಪಕ ಆಯುಷ ಮಲ್ಲಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲನಟರುಗಳಾದ ಜಗದೀಶ ಮತ್ತು ಆದಿತ್ಯ ಅವರು ಪಪ್ಪಿ ಚಿತ್ರದಲ್ಲಿನ ಕೆಲವೊಂದು ಸನ್ನಿವೇಶಗಳ ನಟನೆ ಮಾಡಿ ನಂತರ ಮಾತನಾಡಿ, ರೀಲ್ಸ್ ಗಳನ್ನು ಮಾಡುತ್ತಿದ್ದ ನಮಗೆ ಮೊದಲ ಬಾರಿಗೆ ಅವಕಾಶ ನೀಡಿ ನಮ್ಮ ಪ್ರತಿಭೆಯನ್ನು ಗುರುತಿಸಿದ ಪಪ್ಪಿ ಚಿತ್ರ ತಂಡಕ್ಕೆ ಅಭಿನಂಧನೆಗಳು ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ನೋಡಿ ನಮಗೆ ಆಶೀರ್ವಧಿಸಬೇಕು ಎಂದು ಮನವಿ ಮಾಡಿದರು.