ಲೋಕದರ್ಶನ ವರದಿ
ರಾ.ಹ. ದೇಶಪಾಂಡೆ 95ನೇ ಪುಣ್ಯಸ್ಮರಣೆ
ಧಾರವಾಡ, 27 : ಕನ್ನಡ, ಕನ್ನಡಿಗರಿಗಾಗಿ, ಹರಿದು ಹಂಚಿ ಹೋಗಿದ್ದ ಕರ್ನಾಟಕದ ಪ್ರದೇಶಗಳ ಒಂದುಗೂಡಿಸಲು ಸತತವಾಗಿ ಪ್ರಯತ್ನಿಸಲು ಒಂದು ಸಂಘ ಬೇಕೆಂಬುದನ್ನು ಮನಗಂಡು ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ ಸಂಸ್ಥಾಪಕರು ಮತ್ತು ಅದರ ಮೊದಲ ಕಾರ್ಯದರ್ಶಿಗಳಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾ.ಹ. ದೇಶಪಾಂಡೆ ಅವರ ಮೂರ್ತಿಗೆ 95ನೇ ಪುಣ್ಯಸ್ಮರಣೆ ನಿಮಿತ್ತ (ಸಂಘದಲ್ಲಿ) ಮಾಲಾರೆ್ಣ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗು. ಬೆಲ್ಲದ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಮಹೇಶ ಧ. ಹೊರಕೇರಿ, ಡಾ. ಶೈಲಜಾ ತ. ಅಮರಶೆಟ್ಟಿ, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಬ. ಹಿರೇಮಠ, ಶಿವಾನಂದ ಭಾವಿಕಟ್ಟಿ, ಪ್ರಕಾಶ ಮಲ್ಲಿಗವಾಡ, ಈರಣ್ಣ ನವಲಗುಂದ, ಸಿದ್ಧಯ್ಯ ಹಿರೇಮಠ ಹಾಗೂ ಸಂಘದ ಸಕಲ ಸಿಬ್ಬಂದಿವರ್ಗ ಸೇರಿದಂತೆ ಮುಂತಾದವರಿದ್ದರು.