'ಜಾವಾ'ದಲ್ಲಿ ಡೇರಿಂಗ್, ಬೋಲ್ಡ್ ಅವತಾರದಲ್ಲಿ ರಾಗಿಣಿ ದ್ವಿವೇದಿ

Ragini Dwivedi in a daring, bold avatar in 'Java'

ರಾಗಿಣಿ ದ್ವಿವೇದಿ ಅವರ ಮುಂದಿನ ಚಿತ್ರ 'ಜಾವಾ'ದಲ್ಲಿ ರಾಗಿಣಿ ದ್ವಿವೇದಿ ಹಿಂದೆಂದೂ ಕಾಣದ ಡೇರಿಂಗ್ ಹಾಗೂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.

ದೇವಾ ಚಕ್ರವರ್ತಿ ನಿರ್ದೇಶನದ, ಜಾವಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಇಷ್ಟಪಡಿಸುವ ನಿರೀಕ್ಷೆಯಿದೆ.

ಜಾವಾದಲ್ಲಿ ರಾಗಿಣಿ ದ್ವಿವೇದಿಯದು ಪ್ರಮುಖ ಪಾತ್ರವಾಗಿದೆ. ಪ್ರತಿ ಫ್ರೇಮ್‌ನಲ್ಲಿಯೂ ಕಮಾಂಡಿಂಗ್ ಮಾಡುವ ದಿಟ್ಟ ಮಹಿಳಾ ನಾಯಕಿಯಾಗಿದ್ದಾರೆ.

'ಜಾವಾ' ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜುಲೈ ಅಂತ್ಯದ ವೇಳೆಗೆ ಶೂಟಿಂಗ್ ಆರಂಭವಾಗಲಿದೆ.