ಜಿಲ್ಲಾ ಆಡಳಿತ ಕಟ್ಟಡ ನಿರ್ಮಿಸಲು ಸಚಿವ ಜಮೀರ್ ಅಹಮದ್‌ಖಾನ್ ಅವರಿಗೆ ಮನವಿ

Request to Minister Zameer Ahmed Khan to construct a district administration building

ಜಿಲ್ಲಾ ಆಡಳಿತ ಕಟ್ಟಡ ನಿರ್ಮಿಸಲು ಸಚಿವ ಜಮೀರ್ ಅಹಮದ್‌ಖಾನ್ ಅವರಿಗೆ ಮನವಿ  

ಕೊಪ್ಪಳ   21:  ಬಳ್ಳಾರಿಯಿಂದ ಬೇರ​‍್ಪಟಟ ಹೊಸಪೇಟೆ ನೂತನ ವಿಜಯನಗರ ಜಿಲ್ಲೆಯಾಗಿ ಪರಿವರ್ತನೆಗೊಂಡಿದ್ದು ಜಿಲ್ಲೆಯಲ್ಲಿ ಸುಸಜ್ಜಿತ ವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನೂತನ ಜಿಲ್ಲಾ ಆಡಳಿತ ಭವನ್ ಕಚೇರಿ ಕಟ್ಟಡ ನಿರ್ಮಾಣ ಆಗಬೇಕು ಅದಕ್ಕೆ ಸುಮಾರು 100 ಕೋಟಿಅನುದಾನ ನೀಡಲುರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದು ಶೀಘ್ರ ಕಟ್ಟಡ ನಿರ್ಮಾಣಕಾಮಗಾರಿ ಪ್ರಾರಂಭಿಸಬೇಕೆಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವಜಮೀರ್ ಅಹ್ಮದ್‌ಖಾನ್ ರವರು ಮನವಿ ಮಾಡಿಕೊಂಡರು, ಅವರು ಮಂಗಳವಾರ ಹೊಸಪೇಟೆ ನಗರದಡಾ. ಪುನೀತ್ ರಾಜಕುಮಾರ್ ಕ್ರೀಡಾ ಮೈದಾನದಲ್ಲಿ ಸರಕಾರ ಏರಿ​‍್ಡಸಿದ ಎರಡು ವರ್ಷಗಳ ಸಾಧನ ಸಮರ​‍್ಣ ಸಂಕಲ್ಪ ಬೃಹತ್ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಶೀಘ್ರ ನೂತನ ಜಿಲ್ಲಾಧಿಕಾರಿಗಳ ಕಚೇರಿಕಟ್ಟಡ ನಿರ್ಮಾಣಕಾರ್ಯ ಆರಂಭಗೊಳ್ಳಬೇಕು ಆಸ್ಪತ್ರೆ ಕಾಮಗಾರಿಕೂಡ ಪ್ರಾರಂಭಿಸಬೇಕು ಮತ್ತು ಬಹುದಿನದ ಬೇಡಿಕೆಯಾಗಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಇಲ್ಲಿನ ಸಕ್ಕರೆ ಕಾರ್ಖಾನೆ, ಪುನರ್ ಪ್ರಾರಂಭಿಸಬೇಕೆಂದು ಮನವಿ ಮಾಡಿದ ಅವರು ಕೂಡಲೇ ಎಲ್ಲಾ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡಿ ಕಾರ್ಯ ಪ್ರಾರಂಭಿಸಬೇಕೆಂದು ಮನವಿ ಮಾಡಿದರು, ಇದರಿಂದ ಈ ಜಿಲ್ಲೆಯ ಜನತೆಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿ ಇವೆಲ್ಲ ಕಾಮಗಾರಿಗಳಿಗೆ ನಮ್ಮರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಕೊಂಡು ಸೂಚನೆ ನೀಡಿದ್ದಾರೆ ಶೀಘ್ರ ಎಲ್ಲಾ ಕಾಮಗಾರಿಗಳು ಅನುಷ್ಠಾನ ಗೊಳಿಸುವ ಭರವಸೆಅವರು ನೀಡಿರುವುದಕ್ಕೆ ವಿಜಯನಗರಜಿಲ್ಲಾಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೆ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್‌ರವರು ಅಭಿನಂದಿಸಿದರು, ಈ ಸಂದರ್ಭದಲ್ಲಿ ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಜ್ಯ ಸಭೆಯ ವಿರೋದ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಉಸ್ತುವಾರಿಯಾಗಿರುವ ರಣಧೀಪ್ ಸಿಂಗ್ ಸುರ್ಜಿವಾಲ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಸಚಿವರು ಸಂಸದರು ಶಾಸಕರು ಇತರ ಜನ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು