ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಒದಗಿಸುವಂತೆ ಒತ್ತಾಯಿಸಿ ಮನವಿ

ಹಾವೇರಿ : ಹಾಸ್ಟಲ್ ಅಂತಸ್ತಿನಿಂದ ಬಿದ್ದು ಸಾವಿನಪ್ಪಿದ ಕಾವ್ಯ ಬೆನ್ನೂರ ವಿದ್ಯಾಥರ್ಿನಿ ಕುಟುಂಬಕ್ಕೆ ಪರಿಹಾರ ಹಾಗೂ ಸರಕಾರಿ ಉದ್ಯೋಗ ಒದಗಿಸುವಂತೆ ಒತ್ತಾಯಿಸಿ ಎಸ್ಎಫ್ಐ ಹಾಗೂ ಕುಟುಂಬ ವರ್ಗದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

   ಜಿಲ್ಲೆಯ ರಾಣೇಬೆನ್ನೂರ ನಗರದ ಹೊರ ವಲಯದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾಥರ್ಿನಿಯರ ಹಾಸ್ಟ್ಲಿನಲ್ಲಿ ಸೆಪ್ಟಂಬರ್-2019 ರಂದು  ಶನಿವಾರ ಬೆಳಿಗ್ಗೆ ವಿದ್ಯಾಭ್ಯಾಸ ಮಾಡಲು ಬೇಗನೆ ಎದ್ದು ಹೊರಗಡೆ ಬರುವಾಗ ಮೂರು ಅಂತಸ್ತಿನ ಕಟ್ಟಡದಿಂದ 12 ನೇ ತರಗತಿ ಓದುತ್ತಿರುವ ವಿದ್ಯಾಥರ್ಿನಿ ಕಾವ್ಯಾ ಬೆನ್ನೂರ ಕೆಳಗಡೆ ಬಿದ್ದು ಸಾವನಪ್ಪಿದ್ದು, ಈ ಘಟನೆಗೆ ಭದ್ರತೆ ಇಲ್ಲದೇ ಕಟ್ಟಡದಲ್ಲಿ ಹಾಸ್ಟ್ಲಿನಲ್ಲಿ ನಡೆಸುತ್ತುರುವುದೇ ಕಾರಣವಾಗಿದ್ದು ಘಟನೆ ನಡೆದು 3 ತಿಂಗಳು ಕಳೆದರೂ ಸಾವನ್ನಪ್ಪಿದ ವಿದ್ಯಾಥರ್ಿನಿಗೆ ನ್ಯಾಯ ಸಿಕ್ಕಿಲ್ಲ. ಅದೇ ರೀತಿ ವಿದ್ಯಾಥರ್ಿನಿ ಅವಲಂಬಿತವಾಗಿದ ಬಡ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ರಾಜ್ಯ ಸಕರ್ಾರ ಐದು ಲಕ್ಷ ರೂಪಾಯಿ ಘೋಷಣೆ ಮಾಡಿತು ಆದರೆ ಇದುವರೆಗೂ ಕೂಡ ಸಕರ್ಾರದಿಂದ ಸಂದಾಯ ಆಗಿಲ್ಲ ತಲುಪಿಸಬೇಕಾದ ಪರಿಹಾರ ಆದಷ್ಟು ಬೇಗ ನೀಡಬೇಕು.

   ಅದೇ ರೀತಿ ವಿದ್ಯಾಥರ್ಿನಿಯ ಕುಟುಂಬ ಕಡು ಬಡತನದಲ್ಲಿದ್ದು ತುಂಬಾ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ.ವಿದ್ಯಾಥರ್ಿನಿ ಕಾವ್ಯ ಬೆನ್ನೂರ ಕುಟುಂಬದ ಸದಸ್ಯರ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಕುಟುಂಬದ ಹಿತ ಕಾಪಾಡಬೇಕೇಂದು ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ಮನವಿ ಮಾಡಿಕೊಳ್ಳತ್ತದೆ.ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಒದಗಿಸಬೇಕು. ಜಿಲ್ಲೆಯಲ್ಲಿ ಅನೇಕ ಹಾಸ್ಟೆಲ್ ಗಳು ಮೂಲಭೂತ ಸೌಲಭ್ಯ ಭದ್ರತೆ ಇಲ್ಲದೇ ಇರುವ ಅಂಶವನ್ನು ಎಸ್ಎಫ್ಐ ಸಂಘಟನೆ ಅಧಿಕಾರಿಗಳಿಗೆ ತಿಳಿಸುತ್ತಾ ಬರುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೆತೆಯನ್ನು ಸಹಿಸುವುದಿಲ್ಲ ಎಲ್ಲ ವಿದ್ಯಾಥರ್ಿ ನಿಲಯಗಳಿಗೆ ಸೂಕ್ತ ಭದ್ರತೆ ಒದಗಿಸಲು ಮುಂದಾಗಬೇಕೇಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ   ಬಸವರಾಜ ಭೋವಿ.ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ದೊಡ್ಡಮನಿ.ಕುಟುಂಬ ವರ್ಗದ ಪಾಲಕರಾದ ಅಶೋಕಪ್ಪ ಬೆನ್ನೂರ.ಲಕ್ಷ್ಮವ್ವ ಬೆನ್ನೂರ.ವಿದ್ಯಾ ಬೆನ್ನೂರ.ನಿಂಗಪ್ಪ ಬೆನ್ನೂರ.ಶಿವಬಸಪ್ಪ ಕಾಟ್ಟೆನಹಳ್ಳಿ.ಬೀರಪ್ಪ ಬೆನ್ನೂರ ಇದ್ದರು. ಬಸವರಾಜ ಭೋವಿ.ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ದೊಡ್ಡಮನಿ.ಕುಟುಂಬ ವರ್ಗದ  ಪಾಲಕರಾದ ಅಶೋಕಪ್ಪ ಬೆನ್ನೂರ.ಲಕ್ಷ್ಮವ್ವ ಬೆನ್ನೂರ.ವಿದ್ಯಾ ಬೆನ್ನೂರ.ನಿಂಗಪ್ಪ ಬೆನ್ನೂರ.ಶಿವಬಸಪ್ಪ ಕಾಟ್ಟೆನಹಳ್ಳಿ.ಬೀರಪ್ಪ ಬೆನ್ನೂರ ಇದ್ದರು.