ಎಚ್ಚರಿಕೆ ನೀಡಿದ ದಲಿತ ಬಾಂಧವರು..!!!
ಕಾಗವಾಡ 21: ಕಳೆದ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ಜುಗೂಳ ಗ್ರಾಮದ ಪರಿಶಿಷ್ಟ ಜಾತಿಯ ಸ್ಮಶಾನ ಭೂಮಿ ವಿವಾದವನ್ನು ಕೂಡಲೇ ಪರಿಹರಿಸಿ, ಇಲ್ಲವಾದಲ್ಲಿ ಜೂನ್ 4 ರಿಂದ ತಹಶೀಲ್ದಾರ ಕಾರ್ಯಾಲಯದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮಂಗಳವಾರ ದಿ. 20 ರಂದು ಜುಗೂಳ ಗ್ರಾಮದ ದಲಿತ ಬಾಂಧವರು, ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ್ ಶಿಂಗೆ ನೇತೃತ್ವದಲ್ಲಿ ತಹಶೀಲಾರ ರಾಜೇಶ ಬುರ್ಲಿ, ತಾ.ಪಂ. ಇಓ ವೀರಣ್ಣಾ ವಾಲಿ ಮತ್ತು ಕಾಗವಾಡ ಪೋಲಿಸ್ ಠಾಣೆಯ ಪಿಎಸ್ಐ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಅವಧಿಯಲ್ಲಿ ನಮ್ಮ ಸಮುದಾಯದ ಯಾರಾದರೂ ಮೃತಪಟ್ಟರೇ, ಶಾಂತಿಯುತ ಅಂತ್ಯಕ್ರಿಯೆಗೆ ಅವಕಾಶ ಸಿಗದಿದ್ದರೇ, ಜುಗೂಳ ಗ್ರಾಮ ಪಂಚಾಯತ್ ಆವರಣದಲ್ಲಿ ಅಂತ್ಯಸಂಸ್ಕಾರ ನೆರೆವೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಮಯದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಸಂಘಟನಾ ಸಂಚಾಲಕ ಸಂಜು ಕಾಂಬಳೆ, ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ್ ಕಾಂಬಳೆ, ತಾಲೂಕಾ ಸಂಚಾಲಕ ವಿಶಾಲ್ ದೊಂಡಾರೆ, ಪ್ರಮೋದ್ ಕಾಂಬಳೆ, ರಾಹುಲ್ ಕಾಂಬಳೆ, ಜುಗೂಳ ಗ್ರಾಮದ ಮುಖಂಡರಾದ ಪ್ರತಾಪ್ ಕಾಂಬಳೆ, ಮಹಾದೇವ ಕಾಂಬಳೆ, ರವಿ ಐಹೊಳೆ, ದೀಪಕ್ ಪಾಖರೆ, ಅರ್ಜುನ್ ಅಧೋಕೆ, ತುಕಾರಾಮ ಕಾಂಬಳೆ, ಸಾಗರ ಕಾಂಬಳೆ, ನಾರಾಯಣ ಮಾನೆ, ಪೋಪಟ್ ಕಾಂಬಳೆ, ಗೋಪಾಲ ಕಾಂಬಳೆ, ವಿಜಯ್ ಹಿರೇಮಣಿ, ವಿದ್ಯಾಧರ್ ಕಾಂಬಳೆ ಸೇರಿದಂತೆ ಇನ್ನುಳಿದ ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಗೂ ಸಮುದಾಯದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.