ಎಸ್‌.,ಪೋಕ್ಸೊ ಕಾಯ್ದೆ, 2012 ರ ಮಹತ್ವ: ಕುಮಾರಿ. ರಂಜಿತಾ.

S., Significance of POCSO Act, 2012: Kumari. Ranjitha.

ಎಸ್‌.,ಪೋಕ್ಸೊ ಕಾಯ್ದೆ, 2012 ರ ಮಹತ್ವ: ಕುಮಾರಿ. ರಂಜಿತಾ. 

ಬೆಳಗಾವಿ 21: ನಗರದ ಪ್ರತಿಷ್ಠತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿನಾಂಕ 20-05-2025 ಮಂಗಳವಾರ ರಂದು ಗದಗ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿನಿಲಯದಲ್ಲಿ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಯಿತು ನಾಡಿದ ಎನ್‌. ಎಸ್‌. ಎಸ್‌. ತಂಡ 04 ರ ನಾಯಕಿ ಕುಮಾರಿ. ರಂಜಿತಾ. ಎಸ್‌.,ಪೋಕ್ಸೊ ಕಾಯ್ದೆ, 2012 ರ ಮಹತ್ವ, ಪ್ರಕರಣ ಅಧ್ಯಯನ ಮತ್ತು ಸವಾಲುಗಳು, ಸಾಂವಿಧಾನಿಕ ನಿಬಂಧನೆ, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ರಕ್ಷಿಸಲು ಭಾರತೀಯ ಕ್ರಿಮಿನಲ್ ಕಾನೂನಿನ ವಿಶ್ಲೇಷಣೆ, ನ್ಯಾಯ ವ್ಯವಸ್ಥೆ, ಶಿಕ್ಷೆಗಳು ಮತ್ತು ಇತ್ಯಾದಿವಿಷಯಗಳನ್ನು ತಿಳಿಸಿದರು. ನಂತರ ಮಾತನಾಡಿದ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಸಮಾಜದಲ್ಲಿ ಕಾಯ್ದೆಗಳ ಮಹತ್ವ, ಕಾನೂನಿನ ಅವಶ್ಯಕಗಳು, ಕಾನೂನು ಶಿಕ್ಷಣ, ಸಾಮಾಜಿಕ ಮತ್ತು ಕಾನೂನಾತ್ಮಕ ಜೀವನ, ಕಾನೂನುನ ಅರಿವು ಮತ್ತು ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು.   

ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿನಿಲಯದ, ಗದಗ, ಇಲ್ಲಿಯ. ಶೋಭಾ ಪೂಜಾರ, ವಸತಿ ನಿಲಯದ ಪ್ರಮುಖರು, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕಿಯಾದ ಕುಮಾರಿ. ಸಾಕ್ಷಿ ಹೊಸಮಠ, ಕಾರ್ಯದರ್ಶಿಯಾದ ಕುಮಾರಿ. ಮೇಘಾ ಮುದ್ದಿ, ಎನ್‌. ಎಸ್‌. ಎಸ್‌. ತಂಡ 04 ರ ನಾಯಕಿ ಕುಮಾರಿ. ರಂಜಿತಾ ಎಸ್‌. ಮತ್ತು ವಸತಿ ನಿಲಯದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.