ಎಸ್‌.ಎಸ್‌.ಎಲ್‌.ಸಿ.ಮರುಮೌಲ್ಯಮಾಪನ: ಸಿಂಚನಾ ಪಾಟೀಲ ರಾಜ್ಯಕ್ಕೆ ದ್ವಿತೀಯ

SSLC revaluation: Sinchana Patil comes second for the state

ತಾಳಿಕೋಟೆ 24: ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿರುವ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಚನಾ ಶಿವನಗೌಡ ಪಾಟೀಲ, 2024-25ನೇ ಸಾಲಿನ ಎಸ್‌. ಎಸ್‌.ಎಲ್‌.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯಕ್ಕೆ 9 ಅಂಕಗಳು ಹೆಚ್ಚು ಪಡೆಯುವುದರೊಂದಿಗೆ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಎಲ್ಲ ವಿಷಯಗಳಲ್ಲಿಯೂ ಶೇ.100 ಅಂಕ ಗಳಿಸಿದ್ದ ವಿದ್ಯಾರ್ಥಿನಿ ಇಂಗ್ಲೀಷ್‌ನಲ್ಲಿ 90 ಅಂಕಗಳನ್ನು ಪಡೆದಿದ್ದಳು.  

ಮರುಮೌಲ್ಯಮಾಪನದಲ್ಲಿ 99 ಅಂಕ ಗಳಿಸಿದ್ದು ವಿದ್ಯಾರ್ಥಿನಿಯ ಸಾಧನೆಗೆ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಎಲ್ಲ ಪದಾಧಿಕಾರಿಗಳು, ಮುಖ್ಯಶಿಕ್ಷಕ, ಸಹಶಿಕ್ಷಕರು ಶುಭ ಹಾರೈಸಿದ್ದಾರೆ.