ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿ ಸಾಧನಾ ಸಮಾವೇಶ

Sadhana conference puts the state in a debt trap

ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿ ಸಾಧನಾ ಸಮಾವೇಶ  

ಹೂವಿನಹಡಗಲಿ  21: ಸಿದ್ದರಾಮಯ್ಯ ಸರ್ಕಾರ ಅಧಿಕಾರದ ಆಸೆಯಿಂದ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಇತಿಹಾಸದಲ್ಲೇ ಕಳೆದ ಎರಡು ವರ್ಷಗಳಿಂದ ಸುಮಾರು 2.5 ಸಾವಿರ ಕೋಟಿ ಸಾಲ ಪಡೆದು ರಾಜ್ಯವನ್ನು ದೀವಾಳಿ ಮಾಡಿ ಸಾಲದ ಸುಳಿಗೆ ಸಿಲುಕಿಸಿದೆ ಎಂದು ವಿಜಯನಗರ ಬಿಜೆಪಿ ಪಕ್ಷದ ಮುಖಂಡ ಎಂ.ಬಿ. ಬಸವರಾಜ ಹೇಳಿದರು.  ಪತ್ರಿಕಾ ಪ್ರತಿನಿಧಿಯೊಂದಿಗೆ ಮಂಗಳವಾರ ಮಾತನಾಡಿ,  

ಪ್ರಸ್ತುತ ವರ್ಷದಲ್ಲಿ 60 ಸಾವಿರ ಕೋಟಿ ಹೊಸ ತೆರಿಗೆ ಭಾರವನ್ನು ರಾಜ್ಯದ ಜನರ ಮೇಲೆ ಹಾಕಿ. ಅಭಿವೃದ್ಧಿ ಜಪ ಮಾಡುತ್ತಿದೆ. ರಾಜ್ಯ ಸರಕಾರ ಸಾಲಕ್ಕೆ ವಾರ್ಷಿಕ ಬಡ್ಡಿ ರೂಪದಲ್ಲಿ ಸರಕಾರ 37,324 ಕೋಟಿ ರೂ. ಪಾವತಿಸಿ ಖಜಾನೆ ಖಾಲಿ ಮಾಡಿ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ. ವಿದ್ಯುತ್ ದರ, ವೈದ್ಯಕೀಯ ಸೌಲಭ್ಯಗಳು ಏರಿಕೆಯಾಗಿವೆ ಎಂದರು.