ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನಔಷಧಿಗಳ ಮಾರಾಟ ಬಂದ: ಸರ್ಕಾರದಿಂದಲೇ ಸಂಪೂರ್ಣ ಉಚಿತ ಔಷಧಿ ಪೂರೈಕೆ

Sale of generic medicines has begun on the premises of government hospitals: Completely free supply

ಗದಗ 24: ಬಡತನ ರೇಖೆಯಿಂದ ಕೆಳಗಿರುವ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಘನ್ ರಾಜ್ಯ ಸರಕಾರವು ಪ್ರತಿಯೊಂದು ಗ್ರಾಮ ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಆಸ್ಪತ್ರೆ ಎಂದೇ ಖ್ಯಾತವಾದ ರಾಜ್ಯಾದ್ಯೇಂತ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳು ಸಮಸ್ತ ಬಡ ಕುಟುಂಬಗಳಿಗೆ ಅರೋಗ್ಯ ರಕ್ಷಣೆಯ ಹೊಣೆ ಹೊತ್ತು ಉಚಿತ ಚೀಕಿತ್ಸೆ ಹಾಗೂ ಓಷಧಿಗಳನ್ನು ಪೂರೈಕೆ ಮಾಡುತ್ತಿರುವದು ಸಮಸ್ತ ನಾಗರಿಕರ ಅರೋಗ್ಯವನ್ನು ಕಾದುಕೊಳ್ಳುವಲ್ಲಿ ನೆರವುದಾಯಕವಾಗಿರುತ್ತದೆ.                     

ಇಂತಹದರಲ್ಲಿ ಘನ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಜನಓಷಧಿ ಕೇಂದ್ರದ ಮೂಲಕ ಸಮಸ್ತ ರಾಷ್ಟ್ರವ್ಯಾಪ್ತಿ ಪ್ರತಿಯೊಂದು ನಗರ ಪಟ್ಟಣಗಳಲ್ಲಿ ನಾಗರಿಕರ ಆರೋಗ್ಯ ಕಾಯ್ದುಕೊಳ್ಳಲು ಅಗತ್ಯವಿರುವ ಪ್ರಮುಖ ಓಷಧಗಳನ್ನು ರಿಯಾಯತಿ ದರದಲ್ಲಿ ಬಡವರ ಕೈಗೆಟಕುವಂತಾಗಲು ಜನಓಷಧಿ ಕೇಂದ್ರಗಳಿಂದ ಜನ ಆರೋಗ್ಯಕ್ಕೆ ಮುನ್ನುಡಿಯಾಗಿದೆ.ಆದರೆ ಕೇಂದ್ರ ಸರಕಾರದ ಈ ಒಂದು ಮಹಾತ್ವಾಕಾಂಕ್ಷಿ ಜನಓಷಧಿ ಕೇಂದ್ರದ ಯೋಜನೆಯು ಜನಸಂಪರ್ಕ ಇರುವಂತಹ ಸ್ಥಳಗಳಾದ ಮಾರುಕಟ್ಟೆ, ಶಾಪಿಂಗ್ ಮಾಲ್, ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಪ್ರಮುಖ ಜನನಿಬಿಡು ಸ್ಥಳಗಳಲ್ಲಿ ತೆರೆದರೆ ಅಗತ್ಯವಿರುವ ನಾಗರಿಕರಿಗೆ ತಮ್ಮ ಓಷಧೀಯನ್ನು ಪಡೆಯಲು ಸುರಳಿತವಾಗುತ್ತದೆ.  

ಆದರೆ ಇಂತಹದೊಂದು ಜನ ಆರೋಗ್ಯಕ್ಕೆ ಸಹಾಯಕಾರಿಯಾಗಬೇಕಾದ ಪ್ರಧಾನ ಮಂತ್ರಿ ಜನಓಷಧಿ ಕೇಂದ್ರಗಳನ್ನು ಘನ್ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಸ್ಪತ್ರೆಗಳ ಮೂಲಕ ಸಮಸ್ತ ನಾಗರಿಕರಿಗೆ ಸಂಪೂರ್ಣ ಉಚಿತವಾಗಿ ಚೀಕಿತ್ಸೆ ಮತ್ತು ಉಚಿತ ಓಷಧೀಗಳು ದೊರಕುತ್ತಿರುವಾಗ ಅದರ ಆಸುಪಾಸಿನಲ್ಲಿಯೇ ರಿಯಾಯತಿ ದರದಲ್ಲಿ ನೀಡುವ ಪ್ರಧಾನ ಮಂತ್ರಿ ಜನಓಷಧಿ ಕೇಂದ್ರದ ಮೂಲಕ ಓಷಧೀಗಳನ್ನು ಮಾರಾಟ ಮಳಿಗೆ ತೆರೆಯುವದು *ಉಚಿತ ಅನ್ನ ಪ್ರಸಾದ್ ನಿಲಯದ ಆವರಣದಲ್ಲಿ ರಿಯಾಯತಿ ದರದಲ್ಲಿನ ಕ್ಯಾಂಟಿನ್ ತೆರೆದಂತಾಗುತ್ತದೆ. ಸಾರ್ವಜನಿಕ "ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಓಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಸರ್ಕಾರವೇ ಉಚಿತವಾಗಿ ಓಷಧಿಗಳನ್ನು ನೀಡುವಾಗ, ಆಸ್ಪತ್ರೆಗಳ ಆವರಣದಲ್ಲಿ ಓಷಧಿಗಳ ಮಾರಾಟ ಮಾಡುವ ಮೆಡಿಕಲ್ ಶಾಪ್ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಘನ್ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯು ಜಂಟಿಯಾಗಿ ಕ್ರಮಕೈಗೊಳ್ಳಲು ಮುಂದಾಗಬೇಕು.ಅದರಂತೆ ಸಾರ್ವಜನಿಕರು ಅನಾರೋಗ್ಯ ಪೀಡಿತರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಓಷಧಗಳನ್ನು ಪಡೆಯುವಂತಾಗಲು ವೈದ್ಯರು ಚೀಟಿ ಕೊಟ್ಟು ಹೊರಗಡೆಯಿಂದ ಓಷಧಗಳನ್ನು ತರಿಸುವ ಪದ್ಧತಿಗೆ ಸರಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಡಿವಾಣ ಹಾಕಬೇಕಾಗಿರುತ್ತದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.  

ಉಚಿತ ಅನ್ನ ಪ್ರಸಾದ್ ನಿಲಯದ ಆವರಣದಲ್ಲಿಯೇ ಕ್ಯಾಂಟಿನ್ ತೆರೆದಂತೆ *ಸರ್ಕಾರದಿಂದಲೇ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ಓಷಧಿ ಪೂರೈಕೆಯಾಗುತ್ತಿರುವಾಗ ಸಾರ್ವಜನಿಕ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಓಷಧ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು. ಇದು *ಉಚಿತ ಅನ್ನ ಪ್ರಸಾದ್ ನಿಲಯದ ಆವರಣದಲ್ಲಿಯೇ ಕ್ಯಾಂಟಿನ್ ತೆರೆದಂತಾಗುತ್ತದೆ.* ಜನೌಷಧಿ ಕೇಂದ್ರಗಳಲ್ಲಿ ಜನರಿಕ್ ಮೆಡಿಸಿನ್ ಮಾತ್ರ ಮಾರಾಟ ಮಾಡುವಂತಾಗಬೇಕು. ಈ ಕುರಿತು ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಓಷಧ ನಿಯಂತ್ರಣ ಮಂಡಳಿಯವರು ಅಗತ್ಯ ಕ್ರಮಕೈಗೊಳ್ಳಬೇಕಾಗಿರುತ್ತದೆ. ರಾಘವೇಂದ್ರ ಪಾಲನಕರನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರು ಗದಗ.