ಸುಶ್ಮಿತಾ ಸೇನ್ ರ “ಆರ್ಯ” ಚಿತ್ರ ಮೆಚ್ಚಿದ ಶಿಲ್ಪಾ ಶೆಟ್ಟಿ

ಮುಂಬೈ, ಜೂನ್ 29: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಸುಶ್ಮಿತಾ ಸೇನ್ ಅವರ ವೆಬ್ ಸಿರೀಸ್ ಚಿತ್ರ 'ಆರ್ಯ' ಇಷ್ಟಪಟ್ಟಿದ್ದಾರೆ.'ಆರ್ಯ' ಎಂಬ ವೆಬ್ ಸರಣಿಯೊಂದಿಗೆ ಸುಶ್ಮಿತಾ ಸೇನ್ ನಟನಾ ಜಗತ್ತಿಗೆ ಪುನರಾಗಮನ ಮಾಡಿದ್ದಾರೆ. ಈ ಚಿತ್ರ ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಶಿಲ್ಪಾ ಶೆಟ್ಟಿ 'ಆರ್ಯ' ಚಿತ್ರ ಇಷ್ಟಪಟ್ಟಿದ್ದಾರೆ. ಶಿಲ್ಪಾ ಅವರು ಸುಷ್ಮಿತಾ ಅವರನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ.

“ಈ ಲಾಕ್‌ಡೌನ್ ನನಗೆ ಕೆಲವು ವಿಷಯಗಳನ್ನು ಕಲಿಸಿದೆ. ಮೊದಲನೆಯದು ಯಾರನ್ನಾದರೂ ಪ್ರಶಂಸಿಸುವುದು ಎಷ್ಟು ಮುಖ್ಯ. ನೀವು ಏನನ್ನಾದರೂ ಅನುಮೋದಿಸಿದರೆ, ಅದನ್ನೂ ಪ್ರಶಂಸಿಸಿ. ಮೆಚ್ಚುಗೆಯ ವಿಷಯದಲ್ಲಿ ನಾವು ಸಾಕಷ್ಟು ಸಂಶಯ ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ . ನಾನು ಭಾನುವಾರ 'ಆರ್ಯ'ವನ್ನು ನೋಡಿದೆ ಮತ್ತು ನಿಮ್ಮ ದೊಡ್ಡ ಬ್ಯಾಂಗ್ ಅನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ" ಎಂದು ಶಿಲ್ಪಾ ಬರೆದಿದ್ದಾರೆ. “ಪ್ರತಿಯೊಂದು ಪ್ರಯತ್ನದಲ್ಲೂ ನೀವು ಯಶಸ್ಸನ್ನು ಕಾಣುವಂತೆ ಬಯಸುತ್ತೇನೆ ಏಕೆಂದರೆ ನೀವು ಅದಕ್ಕೆ ಅರ್ಹರು. ನೀವು ಗೆದ್ದಿದ್ದೀರಿ. ನನ್ನ ಸ್ನೇಹಿತೆ ನಿಮಗೆ ಶುಭಾಶಯಗಳು" ಎಂದಿದ್ದಾರೆ. ಶಿಲ್ಪಾ ಅವರ ಈ ಪೋಸ್ಟ್‌ಗೆ ಉತ್ತರಿಸಿದ ಸುಷ್ಮಿತಾ, “ನೀವು ನಿಜವಾಗಿಯೂ ಸುಂದರ ಮಹಿಳೆ. ಯಾವಾಗಲೂ ತುಂಬಾ ಉದಾರ ಮತ್ತು ದಯೆಯಿಂದ ಇರುವುದಕ್ಕೆ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.