ರಾಣೇಬೆನ್ನೂರು23: ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುವ ನೂರಾರು ವಕೀಲರು ಗುರುವಾರ ಮಧ್ಯಾಹ್ನ ಲೋಕಸಭೆ ಚುನಾವಣೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಿವಕುಮಾರ ಉದಾಸಿ ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಬಸ್ಟ್ಯಾಂಡ್ ಬಳಿ ಭಾರಿ ಪಟಾಕಿ ಸಿಡಿಸಿ, ಸಾರ್ವಜನಿಕವಾಗಿ ಸಿಹಿ ಹಂಚಿ ಸಂಭ್ರಮಿಸಿದರು.
ಕುಮಾರ ಎಳೆಹೊಳೆ, ಸುರೇಶ ಬೆಣ್ಣಿ, ಸುರೇಶ ದ್ಯಾವಕ್ಕಳವರ, ಟಿ.ಬಿ.ಚನ್ನಗೌಡ್ರ, ಪ್ರಕಾಶ ಸಾಸಲವಾಡ, ಶಶಿಧರ ಕುಬಸದ, ವೀರೇಶ್ ಹಳ್ಳಳ್ಳಿ, ಸಿದ್ಧು ಸಣ್ಣಗೌಡ್ರ, ರಂಗನಾಥ ದೊಡ್ಡದ್ಯಾವಣ್ಣನವರ, ಎಸ್.ವಿ.ಮರಿಗೌಡ್ರ, ಪ್ರಭು ಗೌರಕ್ಕಳವರ, ಟಿ.ಜೆ.ಮಠದ, ಪ್ರಕಾಶ ಎಚ್.ಆರ್., ಸೂರ್ಯಕಾಂತ, ಸೇರಿದಂತೆ ನೂರಾರು ವಕೀಲರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.