ಮಕ್ಕಳಿಗೆ ಸಾಮಾಜಿಕ ಅರಿವು ಮನೆಯಿಂದಲೇ ಆರಂಭವಾಗಬೇಕು

ಹಾವೇರಿ:  ಮಕ್ಕಳಿಗೆ ಪಠ್ಯತದ ಜೊತೆಗೆ ಸಾಮಾಜಿಕ ಅರಿವು ಮನೆಯಿಂದಲೇ ಆರಂಭವಾಗಬೇಕು. ಸಮಾಜದಲ್ಲಿನ ಘಾತುಕ ಶಕ್ತಿಗಳ ಕುರಿತು ತಂದೆ-ತಾಯಿಗಳು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಹೆಚ್.ರೇಣುಕಾದೇವಿ ಅವರು ಹೇಳಿದರು.

ನಗರದ ದೇವರಾಜ ಅರಸು ಭವನದಲ್ಲಿ ಶುಕ್ರವಾರ ನವದೆಹಲಿ ಕೈಲಾಶ್ ಸತ್ಯಾಥರ್ಿ ಚಿಲ್ಡ್ರನ್ ಫೌಂಡೇಶನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಹಾಗೂ ಸ್ಪಂದನಾ ಸಂಸ್ಥೆ ಬೆಳಗಾವಿ ಇವರುಗಳ ಸಹಯೋಗದಲ್ಲಿ ಜರುಗಿದ ಸಾಗಾಣಿಕೆಯಿಂದ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಾಗಾಣಿಕೆ ಮಹಿಳೆ ಮತ್ತು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ, ಪುರುಷರ ಸಾಗಾಣಿಕೆ ಸಹ ನಡೆಯುತ್ತಿದೆ. ಹಾಗಾಗಿ ಮಕ್ಕಳು ಅಪರಿತ ವ್ಯಕ್ತಿಗಳೊಂದಿಗೆ ಹೋಗುವದು, ಇತರೆ ಆಮಿಷಗಳಿಗೆ ಬಲಿಯಾಗುವುದು ಮಾಡಬಾರದು. ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ. ಮೊಬೈಲ್ನಲ್ಲಿ ಒಳ್ಳೆಯದು ಹಾಗೂ ಕಟ್ಟದ್ದು ಇದೆ. ಅದರಲ್ಲಿ ಒಳ್ಳೆಯದನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು.  ಮಕ್ಕಳು ಓದುವ ಸಮಯದಲ್ಲಿ ಓದಿನ ಕಡೆ ಮಾತ್ರ ಗಮನ ಹರಿಸಿ ಉತ್ತಮ ಅಂಕಪಡೆದರೆ ದೊಡ್ಡವಿಜ್ಞಾನಿ, ಉನ್ನತ ಅಧಿಕಾರಿ ಹೀಗೆ ನೀವು ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಹೇಳಿದರು.

ತಂದೆ-ತಾಯಿಗಳು ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದರೆ ಅವರ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಒಂದು ಅಥವಾ ಎರಡು ಮಕ್ಕಳಿದ್ದರೆ ಮಕ್ಕಳ ಬಗ್ಗೆ ಕಾಳಜಿ ವಹಿಸಬಹುದು. ಮಿತ ಕುಟುಂಬಹೊಂದಿದ್ದಲ್ಲಿ ಸಕರ್ಾರದ ಸೌಲಭ್ಯ ಬಯಸದೇ ನಾವೇ ಉದ್ಧಾರವಾಗಬಹುದು ಎಂದು ಹೇಳಿದರು.

 ಮುಖ್ಯ ಆತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರು ಮಾತನಾಡಿ, ಮಾನವ ಸಾಗಾಣಿಕ ಸಾಮಾಜಿಕ ಪಿಡುಗಾಗಿದೆ ಹಾಗೂ ಪ್ರಪಂಚದ ಎರಡನೇ ಅತೀ ದೊಡ್ಡ ಉದ್ಯಮವಾಗಿದೆ. ಮಕ್ಕಳು, ಮಹಿಳೆ, ಬಾಲಕರು ಎನ್ನುವ ವಯಸ್ಸಿನ ತಾರತಮಯ್ಯವಿಲ್ಲ. ಅಂಗಾಂಗ ಕಸಿ, ಜೀತ ಹಾಗೂ ಬಾಡಿಗೆ ತಾಯ್ತನ ಹೀಗೆ ಹಲವಾರು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಸಾಗಾಣಿಕೆಯಲ್ಲಿ ನುರಿತ ಜಾಲವಿದ್ದು, ಅನಕ್ಷರಸ್ಥರು, ಆಥರ್ಿಕವಾಗಿ ಹಿಂದುಳಿದವರು ಹಾಗೂ ಮಾನಸಿಕ ಅಸ್ವಸ್ಥರು ಸಾಗಾಣಿಕೆಗೆ ಒಳಗಾಗುತ್ತಾರೆ ಎಂದು ಹೇಳಿದರು.

  ಎಲ್ಲ ಕಾನೂನುಗಳು ಮಹಿಳೆಯರ ಪರವಾಗಿವೆ. ಆದರೆ ಅವರಿಗೆ ಕಾನೂನುಗಳ ಅರಿವಿಲ್ಲ ಹಾಗೂ ಸ್ವಾತಂತ್ರ್ಯವಿಲ್ಲ. ಮೊದಲು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಮಕ್ಕಳಿಗೆ ಬೇಕಾದ ಸಾಮಥ್ರ್ಯ ತುಂಬಬೇಕು.  ಅದೇ ರೀತಿ ಮಕ್ಕಳಿಗೆ ಆಯ್ಕೆ, ನಿಧರ್ಾರ ಹಾಗೂ ಭಾಗವಹಿಸುವ ಸ್ವಾತಂತ್ರ್ಯ ನೀಡಬೇಕು. ಮಕ್ಕಳ ಅನಿಸಿಕೆಗಳನ್ನು ಕೇಳಿಸಿಕೊಳ್ಳಬೇಕು.  ನಾವು ಮಕ್ಕಳ ಮಾತಿಗೆ ಗಮನ ನೀಡಿದ ಸಂದರ್ಭದಲ್ಲಿ ಕೊರಗಿ ಮಕ್ಕಳಿಂದ  ಅಪರಾಧವಾಗಲು ಕಾರಣವಾಗುತ್ತದೆ. ಮಾನವ ಸಾಗಾಣಿಕೆ ವಿರುದ್ಧ ಕಾಯರ್ಾಚರಣೆ ನಡೆಸಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ.  ಈ ಕಾರ್ಯಕ್ಕೆ ಜಿಲ್ಲೆಯಲ್ಲಿ  ವಿಶೇಷ ಪಡೆ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಸಮಸ್ಯೆಗಳಿಗೆ ಹಾಗೂ ಮಕ್ಕಳ ಸಮಸ್ಯೆಗಳಿಗೆ  ಎಲ್ಲ ಪೊಲೀಸ್ ಠಾಣೆಗಳಲ್ಲಿ ವಿಶೇಷ ತರಬೇತಿ ಪಡೆದ ಪೊಲೀಸ್ರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

 ಜನಸ್ನೇಹಿ ಪೊಲೀಸ್ ಠಾಣೆಗಳಿದ್ದು, ಯಾವುದೇ ಭಯವಿಲ್ಲದೆ ಮಕ್ಕಳು ಹಾಗೂ ಮಹಿಳೆಯರು ನೇರವಾಗಿ ಪೊಲೀಸ್ ಠಾಣೆ ಬಂದು ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಶಿಕ್ಷಕರೊಂದಿಗೆ ಮಕ್ಕಳು ಒಮ್ಮೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿಯ ಕಾರ್ಯವೈಖರಿ ಕುರಿತು ತಿದುಕೊಳ್ಳಬಹುದು. ಜಿಲ್ಲೆಯ ಸಾರ್ವಜನಿಕ ರಕ್ಷಣೆಗೆ ದಿನದ 24 ಗಂಟೆ ಪೊಲೀಸ್ ಇಲಾಖೆ ಬದ್ಧವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಬೆಳಗಾವಿ ಸ್ಪಂದನಾ ಸಂಸ್ಥೆ ನಿದರ್ೆಶಕರಾದ ಸುಶೀಲ  ವಿ ಅವರು  ಮಾನವ ಸಾಗಾಣಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಕೆ.ಶ್ರೀವಿದ್ಯಾ,  ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಸಿ.ಪಾವಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಪಿ.ಎಂ.ಬೆನ್ನೂರ, ಸಕರ್ಾರಿ ಅಭಿಯೋಜಕರಾದ ಎಸ್.ಎಂ.ಗೆಜ್ಜಿಹಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಎಸ್.ಹೆಚ್.ಮಜೀದ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿದರ್ೇಶಕರಾದ ಪಿ.ವಾಯ್.ಶೆಟ್ಟಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಟೀಲ ಇತರರು ಉಪಸ್ಥಿತರಿದ್ದರು