ಹಾವೇರಿ: ನಗರದ ಹೈಸ್ಕೂಲ್ ಮೈದಾನದಲ್ಲಿ ವಿವಿಧ ಶಾಲೆಯ ವಿದ್ಯಾಥರ್ಿಗಳು ಕಂಕಣ ಸೂರ್ಯಗ್ರಹಣದ ಅಪರೂಪದ ಕೌತುಕಮಯ ದೃಶ್ಯಗಳನ್ನು ವಿವಿಧ ಸುರಕ್ಷತಾ ಸಾಧನಗಳನ್ನು ಬಳಿಸಿ ವಿಕ್ಷೀಸಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಭೋಮಂಡಲದಲ್ಲಿ ನಡೆದ ಕಂಕಣ ಸೂರ್ಯಗ್ರಹಣದ ಅತ್ಯದ್ಭುತವಾದ ಸೂರ್ಯ, ಚಂದ್ರ ಹಾಗೂ ಭೂಮಿಗಳ ನೆರಳು ಬೆಳಕಿನ ಆಟದ ನೈಸರ್ಗಿಕ ಕೌತೂಕ ದೃಶ್ಯವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವೀಕ್ಷಣೆಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ವ್ಯವಸ್ಥೆ ಮಾಡಲಾಗಿತ್ತು.
ಸೌರಸೂಸಕ (ಸೋಲಾರ್ ಫಿಲ್ಟರ್) ಮೌಂಟ್ ಬಾಲ್, ನೀರಿನ ಪ್ರತಿಬಿಂಬ, ಸೂಜಿರಂಧ್ರ ಪೇಪರ್ಗಳ ಸಾಧಕದಿಂದ ಆಗಾಸದಲ್ಲಿ ಸೂರ್ಯಗ್ರಹಣದ ವಿವಿಧ ಕೌತುಕ ಕ್ಷಣಗಳನ್ನು ವಿಕ್ಷೀಸುತ್ತ ಸಹಸ್ರಾರು ವಿದ್ಯಾಥರ್ಿಗಳು ಸಂಭ್ರಮಿಸಿದರು.
ಸೂರ್ಯಗ್ರಹಣದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬಾರದು, ಉಪಹಾರ-ಊಟ, ಪಾನೀಯಗಳನ್ನು ಸೇವಿಸಬರಾದು ಎಂಬ ಮೂಢನಂಬಿಕೆ ಪ್ರೇರಿತ ಪ್ರಚಾರಗಳನ್ನು ದಿಕ್ಕರಿಸಿದ ಸಹಸ್ರಾರು ವಿದ್ಯಾಥರ್ಿಗಳು ವೈಜ್ಞಾನಿಕ ಪ್ರಾಕೃತಿಕ ಅಪರೂಪದ ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳಲು ಬೆಳಗಿನ ಸಮಯ 7-30ರಿಂದಲೇ ಹೈಸ್ಕೂಲ್ ಮೈದಾನದಲ್ಲಿ ಜಮಾವಣೆಗೊಂಡರು.
ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸೋಲಾರ್ ಫಿಲ್ಟರ್ ಮೂಲಕ ಸೂರ್ಯಗ್ರಹಣವನ್ನು ವೀಕ್ಷಣೆಮಾಡಲು ಹಾಗೂ ಮೌಂಟ್ ಬಾಲ್ ಮೂಲಕ ವೃತ್ತಾಕಾರದ ಕನ್ನಡಿಯನ್ನ ಸೂರ್ಯನಿಗೆ ಮುಖಮಾಡಿ ಅದರ ಪ್ರತಿಫಲನ ಗೋಡೆಯ ಮೇಲೆ ಕಾಣಿಸುವಂತೆಮಾಡಿ ಸೂರ್ಯಗ್ರಹಣದ ಕ್ಷಣ ಕ್ಷಣದ ರೂಪವನ್ನು ಸಾರ್ವಜನಿಕರಿಗೆ ಪ್ರಸ್ತುತ ಪಡಿಸಿದರು.
ಇದೇ ಸಂದರ್ಭದಲ್ಲಿ ವೃತ್ತಾಕಾರದ ಅಲೂಮಿನಿಯಂ ತಾಟಗಳಲ್ಲಿ ನೀರನ್ನು ಸುರಿದು ಈ ನೀರಿನ ಮೂಲಕ ಸೂರ್ಯಗ್ರಹಣದ ಬಿಂಬಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದರು. ಇದರೊಂದಿಗೆ ಬಿಳಿ ಕಾಗದದ ಮಧ್ಯ ಸೂಜಿರಂಧ್ರಮಾಡಿ ಸೂರ್ಯನ ಬಿಂಬ ರಂಧ್ರದ ಮೂಲಕ ಅಂಗೈನಲ್ಲಿ ಬಿಳುವಂತೆಮಾಡಿ ಗ್ರಹಣ ಹಿಡಿದ ಸೂರ್ಯನ ಕ್ಷಣಕ್ಷಣದ ರೂಪ ಬದಲಾವಣೆಯನ್ನು ಅಂಗೈನಲ್ಲೇ ವೀಕ್ಷಿಸಿದ ವಿದ್ಯಾಥರ್ಿಗಳು ಕೌತೂಕದೊಂದಿಗೆ ಸಂಭ್ರಮಿಸಿದ ಕ್ಷಣಗಳು ಸಾರ್ವಜನಿಕರ ಗಮನಸೆಳೆಯಿತು.
ವಿದ್ಯಾರ್ಥಿಗಳ ಉತ್ಸಾಹಕ್ಕೆ ಮತ್ತಷ್ಟು ಸ್ಪೂತರ್ಿ ನೀಡಲು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಹೊಸಮಠದ ಬಸವಶಾಂತಲಿಂಗ ಶ್ರೀಗಳು , ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಕಂಕಣ ಸೂರ್ಯಗ್ರಹಣ ಕ್ಷಣಗಳನ್ನು ಸೋಲಾರ್ ಫಿಲ್ಟರ್ ಮೂಲಕ ವೀಕ್ಷಿಸಿ ಗ್ರಹಣದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಚಂದ್ರ ಸೂರ್ಯನಿಗೆ ಅಡ್ಡಬಂದು ಸೂರ್ಯ ಕಾಣದಂತೆ ಮಾಡುತ್ತಾನೆ. ಬರಿಗಣ್ಣಿನಲ್ಲಿ ಸೂರ್ಯನನ್ನು ಗ್ರಹಣದಲ್ಲಿ ಸಂದರ್ಭದಲ್ಲಿ ನೋಡಬಾರದು. ಈ ಸಂದರ್ಭದಲ್ಲಿ ಸೂರ್ಯನಿಂದ ಹೊರಸೂಸುವ ಕಿರಣಗಳು ಕಣ್ಣಿಗೆ ಅಪಾಯಕಾರಿಯಾಗಿವೆ.
ಈ ಕಾರಣಕ್ಕಾಗಿ ಸುರಕ್ಷತಾ ಸಾಧನೆಗಳನ್ನು ಬಳಸಿ ಸೂರ್ಯಗ್ರಹಣ ವೀಕ್ಷಿಸಿಲು ಅವಕಾಶಮಾಡಿಕೊಡಲಾಗಿದೆ. ಸೂರ್ಯಗ್ರಹಣ ನೋಡಬಾರದು ಎಂಬುದು ಮೂಢನಂಬಿಕೆ. ಇದನ್ನು ತೊಡೆದು ಹಾಕಲು ವಿಜ್ಞಾನ ಪರಿಷತ್ ಶಾಲಾ-ಕಾಲೇಜುಗಳಲ್ಲಿ ಸೂಯರ್ೋತ್ಸವ ಜಾಗೃತಿ ಶಿಬಿರ ನಡೆಸಿ ಸುರಕ್ಷಾ ಸಾಧನಗಳನ್ನು ವಿತರಿಸಲಾಗಿದೆ.
ಹಾವೇರಿಯಲ್ಲಿ ಶೇ.90 ರಷ್ಟು ಸೂರ್ಯಗ್ರಹಣವಾಗಿದೆ. ಮುಂದಿನ 2020ರ ಜೂನ್ನಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಕೇವಲ ಶೇ.20ರಷ್ಟು ಗ್ರಹಣ ಹಿಡಿಯಲಿದ್ದು, ಗೋಚರತೆ ಪ್ರಮಾಣ ಕ್ಷೀಣವಾಗಿದೆ. ನಾವು ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ನೋಡಲು 2064ನೇ ಇಸ್ವಿವರೆಗೆ ಕಾಯಬೇಕಾಗಿದೆ ಎಂದು ಕನರ್ಾಟಕ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಎಸ್.ಪಾಟೀಲ ಅವರು ವಿವರಿಸಿದರು.
ಗ್ರಹಣದ ಸಂರ್ಭದಲ್ಲಿ ಉಪಹಾರ ಸೇವಿಸುವುದರ ಮೂಲಕ ಮೂಢನಂಬಿಕೆಗಳನ್ನು ವಿದ್ಯಾಥರ್ಿಗಳಿಂದ ದೂರಮಾಡಲು ಪ್ರಯತ್ನಿಸಿದರು. ವಿವಿಧ ಶಾಲೆಗಳ ವಿದ್ಯಾಥರ್ಿಗಳು, ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ನ ಅಧ್ಯಕ್ಷರಾದ ಎಸ್.ಪಿ.ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ವಿಜ್ಞಾನ ಪರಿವೀಕ್ಷಕ ಬಿ.ಎಸ್.ಪಾಟೀಲ, ಸಾಹಿತಿ ಸತೀಶ ಕುಲಕಣರ್ಿ,ರೇಣುಕಾ ಗುಡಿಮನಿ, ಡಾ.ಚಿನ್ಮಯ ಕುಲಕಣರ್ಿ, ನಾಗರಾಜ ನೀಲಣ್ಣನವರ, ಶೋಭಾ ಜಾಗಟಗೇರಿ, ಗುರುಬಸಪ್ಪ ಹತ್ತಿಮತ್ತೂರ, ನಾಗರಾಜ ನಡುವಿನಮಠ, ಗುರುಬಸಯ್ಯ ಹತ್ತಿಮತ್ತೂರ, ಸನದಿ, ಸಿದ್ದರಾಜು, ಹರೀಶ ಕುಲಕಣರ್ಿ, ಕಬ್ಬಿಣಕಂತಿಮಠ, ಈರಪ್ಪ ಲಮಾಣಿ ಇತರರು ಉಪಸ್ಥಿತರಿದ್ದರು.