ಅನ್ನದಾಸೋಹದ ಜೋತೆಗೆ ಅಕ್ಷರ ದಾಸೋಹ ಪ್ರಾರಂಭಿಸಿ: ಚನ್ನವೀರ ಮಹಾಸ್ವಾಮಿ

Start a letter drive along with anna dasahoha: Channaveera Mahaswamy

ಬಂಕಾಪುರ : ಅನ್ನದಾಸೋಹದ ಜೋತೆಗೆ ಅಕ್ಷರ ದಾಸೋಹವನ್ನು ಪ್ರಾರಂಭಿಸಿ, ಸಾಧನೆಗೈದ ವಿದ್ಯಾರ್ಥಿಗಳ ತುಲಾಭಾರ ಮಾಡುತ್ತಿರುವ ದೇಸಾಯಿಮಠದ ಮಹಾಂತ ಸ್ವಾಮಿಗಳವರ ಕಾರ್ಯ ಅತ್ಯೆಂತ ಸ್ಮರಣೀಯ ಕಾರ್ಯಗಳಲ್ಲೋಂದಾಗಿದೆ ಎಂದು ಹೂವಿನಶಿಗ್ಲಿ ವೀರಕ್ತಮಠದ ಚನ್ನವೀರ ಮಹಾಸ್ವಾಮಿಗಳು ನುಡಿದರು. 

ಪಟ್ಟಣದ ಶ್ರೀ ದೇಸಾಯಿಮಠದಲ್ಲಿ ನಡೆದ, ಶಿವಾನುಭವ ಗೋಷ್ಠಿ ಹಾಗೂ ಎಸ್‌.ಎಸ್‌.ಎಲ್‌.ಸಿ.ಪರೀಕ್ಷೆಯಲ್ಲಿ ಹೆಚ್ಚುಅಂಕಗಳಿಸಿದ ಶಿಗ್ಗಾವಿ, ಸವಣೂರ ತಾಲೂಕಿನ ವಿದ್ಯಾರ್ಥಿಗಳಿಗೆ ತುಲಾಭಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಹಾಂತಸ್ವಾಮಿಗಳು ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಭಕ್ತ ಸಮೂಹವನ್ನು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. ವಿಶೇಷ ಭೋಜನ ಸವಿಯಲು, ವಿಶೇಷ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕಾದರೆ, ದೇಸಾಯಿಮಠದಲ್ಲಿ ನಡೆಯುವ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ಭಕ್ತಸಮೂಹಕ್ಕೆ ಕರೆ ನೀಡಿದರು. 

ಹೂವಿನಶಿಗ್ಲಿ ಗುರುಕುಲದ ಕೆ.ಎಸ್‌.ಇಟಗಿಮಠ ಶರಣರ ವಚನಗಳ ಭಾವ ಸಂದೇಶದ ಬಗ್ಗೆ ಉಪನ್ಯಾಸ ನೀಡಿದ ಅವರು, ಭಕ್ತಿ ಬಂಢಾರಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯನವರು, 12 ನೇ ಶತಮಾನದ ಪೀತಾಮಹರಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರಾಗಿದ್ದರು. ಹೆಣ್ಣು,ಹೊನ್ನೂ,ಮಣ್ಣಿನ ಹಿಂದೆ ಹೋಗಿ ನಶ್ವರ ಬದುಕು ಸಾಗಿಸದೇ ಸಂತ, ಸ್ವಾಮಿಜಿ, ಶಿವ, ಶರಣರು ಹಾಕಿಕೊಟ್ಟ ಸನ್ಮಾರ್ಗದಲಿ ನಡೆದಾಗ ಸಾರ್ಥಕ ಬದುಕು ನಿಮ್ಮದಾಗಲಿದೆ. 12 ನೇ ಶತಮಾನದ ಶರಣರು, ವಚನ ಸಾಹಿತ್ಯವನ್ನು ರಚಿಸಿ, ಸಮಾಜಕ್ಕೆ ಧಾರೆ ಎರೆಯುವಮೂಲಕ ಸಮಾದ ಅಂಕು ಡೊಂಕುಗಳನ್ನು ತಿದ್ದಲು ತಮ್ಮನ್ನು ತಾವು ಸಮಾಜದ ವಳಿತಿಗಾಗಿಯೇ ಸಮರ​‍್ಿಸಿಕೊಂಡವರಾಗಿದ್ದರು. ನುಡಿದಂತೆ, ನಡೆದವರು, ನಡೆದಂತೆ ನುಡಿಯುವರಾಗಿದ್ದರು. ಅವರ ವಚನ ಸಾಹಿತ್ಯ ಸೂರ್ಯ ಚಂದ್ರಾದಿಗಳಿರುವ ವರೆಗೂ ಪ್ರಸ್ತುತ ವಾಗಿರಲಿವೆ ಎಂದು ಹೇಳಿದರು. 

ದಿಶಾ ಇಂಟರ್ ನ್ಯಾಶನಲ್ ಸ್ಕೂಲಿನ  ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಮಾತನಾಡಿ, ಭಕ್ತರ ಬೇಡಿಕೆ, ಇಷ್ಠಾರ್ಥಗಳು ಸಿದ್ಧಿಸಿದಾಗ ಸ್ವಾಮಿಜಿಯವರ ತುಲಾಭಾರ ಸೇವೆಯನ್ನು ಮಾಡಿರುವುದನ್ನು ನೋಡಿದ್ದೇವೆ. ಆದರೆ ದೇಸಾಯಿಮಠದ ಸ್ವಾಮಿಗಳು, ಸಾಧನೆಗೈದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ತುಲಾಭಾರ ಮಾಡುತ್ತಿರುವ ಕಾರ್ಯ ಸಮಾಜಕ್ಕೆ ಪ್ರೇರಣಾದಾಯಕವಾಗಿದೆ. ಅವರ ಈ ಕಾರ್ಯ ನನ್ನ ಮೇಲು ಪ್ರಬಾವ ಬೀರಿದ್ದು, ಶ್ರೀಗಳು ಹೇಳಿದ 3 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಪ್ರವೇಶ ನೀಡುವುದಾಗಿ ಹೇಳಿದರು. 

ಎಸ್‌.ಎಸ್‌.ಎಲ್‌.ಸಿ, ಪರೀಕ್ಷೆಯಲ್ಲಿ ಶಿಗ್ಗಾವಿ, ಸವಣೂರ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂಕಗಳಿಸಿದ ಜಲ್ಲಾಪುರ ಗ್ರಾಮದ ಎಸ್‌.ಬಿ.ಬಿ.ಕೆ. ಶಾಲೆಯ ವಿದ್ಯಾರ್ಥಿನಿ ತೃಪ್ತಿ ಪ್ರಕಾಶ ಘೋರೆ​‍್ಡ ಯವರ ತುಲಾಭಾರ ನಡೆಯಿತು. 

ನಂದಾ ಪಾಟೀಲ, ಅಭಿಷೇಕ ಮತ್ತೂರ, ಸ್ವಾತಿ ಅಂಗಡಿ, ನವೀನ ಅಳಗವಾಡಿ, ಸಿದ್ದು ಮಹರಾಜಪೇಟ, ಗಾಯತ್ರಿ ಪೋಲಿಸಗೌಡ್ರ, ನಾಗರತ್ನ ಇಂದೂರ, ವೀಣಾ ಗೊರ​‍್ಪನವರ, ಕಾರ್ತಿಕ ಹಿರೇಮಠ, ಲಕ್ಷ್ಮೀ ಮೇಟಿ, ಭೂಮಿಕಾ ಶಿಗ್ಗಾಂವ, ದೀಪಕ್ ಅಡವಿ, ಮಾಲಾ ಹರಿಜನ, ಶಿವರಾಜ ಕರಡಿ, ದೀಪಾ ಕರಡಿ, ಸ್ಫೂರ್ತಿ ಉಂಕಿ, ಮೇಘಾ ಕುರಿ, ಅಕ್ಷತಾ ಕುರಿ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯಿತು. ಗುರು ಚಲವಾದಿ ಯವರಿಂದ ಸಂಗೀತ ಸೇವೆ ನಡೆಯಿತು. 

ದೇಸಾಯಿಮಠದ ಶ್ರೀ ಮಹಾಂತಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಗ್ಗಾವಿ ಸಂಗನಬಸವ ಸ್ವಾಮಿಜಿ, ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿ ಸಾನಿಧ್ಯವಹಿಸಿದ್ದರು.