ಕೊಪ್ಪಳ ಮೇ 24: ರಾಜ್ಯ ಸರ್ಕಾರದ ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ರವರ ಸಿದ್ದಾರ್ಥ್ ಶಿಕ್ಷಣ ಸಂಸ್ಥೆ ಕಳೆದ ಸುಮಾರು ಆರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವುದರ ಜೊತೆಗೆ ಬಡ ನಿರ್ಗತಿಕ ಮಕ್ಕಳ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸಿ ಅವರ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಅವರ ಇಂತಹ ಉತ್ತಮ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ, ಅನಿಲ್ ಕುಮಾರ್ ಬೇಗಾರ್ ತೀವ್ರ ವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಡಾ, ಜಿ ಪರಮೇಶ್ವರ್ ಅವರ ಮೇಲೆ ಮಾಡಿರುವ ಈಡಿ ದಾಳಿ ರಾಜಕೀಯ ಪ್ರೇರಿತವಾಗಿದೆ ದ್ವೇಷ ಮನೋಭಾವನೆ ದಿಂದ ಕೂಡಿದ ದಾಳಿ ಇದಾಗಿದೆ. ಡಾ ಜಿ ಪರಮೇಶ್ವರ್ ಅವರು ಒಬ್ಬ ಸಜ್ಜನ ರಾಜಕಾರಣಿಯಾಗಿದ್ದು ಅವರ ಆಡಳಿತ ಕಾರ್ಯವೈಖರಿ ಸಹಿಸದೆ ಕೆಲವರ ಕುತಂತ್ರದಿಂದ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಪಕ್ಷದ ಅಸುವೆ ಮನೋಭಾವದಿಂದ ಕೂಡಿರುವ ಈ ದಾಳಿ ತೀವ್ರವಾಗಿ ಖಂಡಿಸುವದಾಗಿ ಅವರು ತಿಳಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ತನಗೆ ಮನಬಂದಂತೆ ಬಳಕೆ ಮಾಡಿಕೊಂಡು ನಿಷ್ಠಾವಂತ ಪ್ರಾಮಾಣಿಕರ, ಅದರಲ್ಲೂ ವಿಶೇಷವಾಗಿ ದಲಿತ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಈ ರೀತಿ ದಾಳಿ ಮಾಡುವುದು ಸಮಂಜಸವಲ್ಲ ಕೂಡಲೇ ಇಂತಹ ಕೃತ್ಯವನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ, ಅನಿಲ್ ಕುಮಾರ್ ಬೇಗಾರ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಅವರೊಂದಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹ ಪಾಲ್ಗೊಂಡು ಈಡಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.