ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ : ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 11 : ಬೇಸಿಗೆ ಶಿಬಿರವು ಮಕ್ಕಳಿಗೆ ಹಲವು ರೀತಿಯ ಕಲೆ,ಕ್ರೀಡೆ,ಸಂಗೀತ,ನೃತ್ಯ ನಾಟಕಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿಯಾಗುತ್ತದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆ ಬನ್ನೂರ ವತಿಯಿಂದ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಉದ್ದೇಶಿಸಿ ಮಾತನಾಡಿದ ಶಿಬಿರದಿಂದ ಮಕ್ಕಳಲ್ಲಿನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.ಬೇರೆಯವರೊಡನೆ ಬೆರೆಯುವ ಮೂಲಕ ಮಕ್ಕಳ ಸಾಮಾಜಿಕ ಕೌಶಲ್ಯಗಳು ಅಭಿವೃದ್ದಿಯಾಗಿ ಶಿಸ್ತು ಮತ್ತು ಸಮಯ ಪಾಲನೆಯ ಮಹತ್ವವನ್ನು ಮಕ್ಕಳು ಕಲಿಯುತ್ತಾರೆ ಎಂದರು. ಶಿಬಿರ ಉದ್ಘಾಟಿಸಿ ವಿರಕ್ತಮಠದ ಸಂಗನಬಸವ ಶ್ರೀಗಳು ಮಾತನಾಡಿ ಭಾರತ ಸೇವಾ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಕೆರೆ ಹುಳು ಎತ್ತುವುದು,ಸಾಮೂಹಿಕ ವಿವಾಹ,ಸ್ಮಶಾನಗಳ ಸ್ವಚ್ಛತೆ,ಬೇಸಿಗೆ ಶಿಬಿರಗಳಂತಹ ಹತ್ತಾರು ಜನಪರ ಕೆಲಸಗಳನ್ನು ಸಂಸ್ಥೆ ಮಾಡುತ್ತಿರುವುದು ನಮ್ಮೆಲ್ಲರ ಮೆಚ್ಚುಗೆಗೆ ಸಂಸ್ಥೆ ಪಾತ್ರವಾಗಿದೆ ಎಂದರು. ಮಾಂಡೆಂಟ್ ನಾಗರಾಜ ಮೆಳ್ಳಾಗಟ್ಟಿ ಮಾತನಾಡಿ ಭಾರತ ಸೇವಾ ಸಂಸ್ಥೆಯು ಬಡ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಉಚಿತ ಬೇಸಿಗೆ ಶಿಬಿರವನ್ನು ನೀಡಿ ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಟಿವಿ ಮೊಬೈಲ್ ಬಳಕೆಯನ್ನು ಬಿಟ್ಟು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಲು ಉಪಯುಕ್ತಕಾರಿ ಕೆಲಸವನ್ನು ಮಾಡುತ್ತಾ ಬಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯಯವಾಗಿದೆ ಎಂದರು. ಈ ಸಂದರ್ಭದಲ್ಲಿ ನಜಿರಹ್ಮದ ಶೇಕಸನದಿ, ಭರತ ಕಳ್ಳಿಮನಿ, ಬಸವರಾಜ ಹೊಸಪೇಟೆ, ರವಿ ಮಡಿವಾಳರ,ವಿಜಯ ಬುಳ್ಳಕ್ಕನವರ, ಶಶಿಕಾಂತ ರಾಥೋಡ, ಶಂಕರ ಧಾರವಾಡ, ಸಾಧಿಕ ಸವಣೂರ,ದರ್ಶನ ಕರೂರ, ಮಾಲತೇಶ ಮಾದರ ಹಾಗೂ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.