ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುತ್ತಿರುವ ಜಾತ್ರ ಮಹೋತ್ಸವ ಹಿ ದಲಿತ ಮಿತ್ರ ಮೇಳ

The Dalit Mitra Mela is a festival where cold water is poured on the stomachs of the poor.

ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುತ್ತಿರುವ ಜಾತ್ರ ಮಹೋತ್ಸವ ಹಿ ದಲಿತ ಮಿತ್ರ ಮೇಳ 

ಗದಗ 29, ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಗರ ಸಭೆಗೆ ಒಳಪಡುವ ಸಾರ್ವಜನಿಕ ರಸ್ತೆಯಲ್ಲಿ ತಾತ್ಕಾಲಿಕವಾಗಿ ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಿಕೊಂಡು ಅನ್ಯ ರಾಜ್ಯದ ವ್ಯಾಪಾರಿಗಳು ವ್ಯವಹಾರ ಮಾಡುತ್ತಿದ್ದು ಸ್ಥಳೀಯರ ವ್ಯಾಪಾರ ಕಡಿಮೆಯಾಗಿ ಆರ್ಥಿಕ ಸಂಕಷ್ಠ ಸಿಲಿಕ್ಕಿದ ಅದರಲ್ಲೂ ನಮ್ಮ ಜನಾಂಗದಲ್ಲಿ ಅವಿಧ್ಯಾವಂತರು ಬಹಳ ಜನ ಇರುವುದರಿಂದ ರಸ್ತೆ ಬದಿ ಹಾಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿರುವುರ ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆಯನ್ನು ಹಾಕಿಕೊಂಡು ಬದುಕುವ ಪರಿಸ್ಥಿತಿ ಬಂದಿದೆ ಎಂದು ದಲಿತ ಮಿತ್ರ ಮೇಳ ಅಧ್ಯಕ್ಷ ಕುಮಾರ ನಡಗೇರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಕಳೆದ ವರ್ಷ ಸಾರ್ವಜನಿಕ ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಅಂಗಡಿಗಳಿಂದ ನಗರದ ವ್ಯಾಪಾರಸ್ಥರಿಗೆ ವ್ಯವವಹಾದಲ್ಲಿ ತೊಂದರೆಯಾಗುತ್ತಿದ್ದು ತಾತ್ಕಾಲಿಕ ಮಳಿಗೆಗಳನ್ನು ತೆರವುಗೊಳ್ಳಿಸುವ ಆಗ್ರಹಿಸಿ ತಮ್ಮ ಕಚೇರಿ ಮುಂದೆ ಧರಣಿ ಮಾಡಿದ ಹಾಗೇ ಈ ಬಾರಿ ಮತ್ತೆ ಹೋರಾಟಕ್ಕೆ ಅವಕಾಶ ನೀಡದೆ ಶೀಘ್ರವೇ ಅಂಗಡಿಗಳನ್ನು ತೆರವುಗೊಳ್ಳಿಸಲು ಆಗ್ರಹಿಸಿದರು ಇಲ್ಲವಾದಲ್ಲಿ ಈ ಬಾರಿ ಉಗ್ರವಾದ ಹೋರಾಟ ಮಾಡಲಾಗುವುದ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸದರು ಈ ಸಂದರ್ಭದಲ್ಲಿ ದಲಿತ ಮಿತ್ರ ಮೇಳ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ ಸದಸ್ಯರಾದ ರಮೇಶ ವಾಲ್ಮೀಕಿ. ಶಿವು ಬಂಗಾರಿ. ರಾಘವೇಂದ್ರ ಸೊರಟುರ. ಸಾಗರ ಹುಯಿಲಗೋಳ ಉಪಸ್ಥಿತರಿದರು.