ಲೋಕದರ್ಶನ ವರದಿ
ಮಹಾತ್ಮರ ಜಯಂತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು :
ಎಂ.ಆರ್.ಷಣ್ಮುಖಪ್ಪ. ಕಂಪ್ಲಿ 29: ಮಹಾತ್ಮರ, ಮಹನೀಯರ, ಸಂತರ ಜಯಂತಿಗಳನ್ನು ಪ್ರತಿಯೊಬ್ಬರೂ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ಗ್ರೇಡ್-2 ತಹಸಿಲ್ದಾರ್ ಎಂ.ಆರ್.ಷಣ್ಮುಖಪ್ಪ ಹೇಳಿದರು. ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಮೇ.2ರಂದು ಆಚರಣೆ ಮಾಡಲಿರುವ ಶ್ರೀ ಶಂಕರಚಾರ್ಯರ ಜಯಂತಿ ಹಾಗೂ ಮೇ.4ರಂದು ಆಚರಿಸಲಿರುವ ಶ್ರೀ ಭಗಿರಥಿ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ನಾಡಿನಲ್ಲಿ ಅನೇಕ ಮಹಾಂತರು, ಮಹಾನೀಯರು, ಸಾಧು,ಸಂತರು ತಮ್ಮ ಅಪಾರವಾದ ಜ್ಞಾನ, ಆದರ್ಶ,ತತ್ವಗಳನ್ನು ನಮಗಾಗಿ ಬಿಟ್ಟುಹೋಗಿದ್ದಾರೆ. ಅಂತವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಅವರಿಗೆ ನಮ್ಮ ಗೌರವಗಳನ್ನು ಸಲ್ಲಿಸಬೇಕು ಹಾಗೂ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು. ಮೇ.2ರಂದು ಬೆಳಿಗ್ಗೆ 10-30ಕ್ಕೆ ಮತ್ತು ಮೇ.4ರಂದು ಬೆಳಿಗ್ಗೆ 10-30ಕ್ಕೆ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದ್ದು, ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಜಯಂತಿಯನ್ನು ಆಚರಣೆ ಮಾಡಿ ತಹಸಿಲ್ದಾರ್ ಕಚೇರಿಗೆ ಆಗಮಿಸಬೇಕು ಮತ್ತು ಎಲ್ಲಾ ಸಮುದಾಯಗಳ ಮುಖಂಡರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್. ಶಿರಸ್ತೆದಾರ ಎಸ್.ಕೆ.ರಮೇಶ್, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಉಪ್ಪಾರ ಸಮಾಜದ ಯು.ರಾಮದಾಸ್,ಯು ರುದ್ರ್ಪ ಸೇರಿದಂತೆ ಇತರರು ಇದ್ದರು.