ಧಾರವಾಡ 08: ಡಾ. ಪಂಚಾಕ್ಷರಿ ಹಿರೇಮಠರ ಸಾಹಿತ್ಯದ ಮೂಲ ತಿರುಳೇ ಆದರ್ಶ ಪ್ರೇಮ ಹಾಗೂ ಮಾನವೀಯತೆಯಾಗಿದೆ.ಅವರೊಬ್ಬ ಶ್ರೇಷ್ಠ ಅನುವಾದಕರು.ಅನುವಾದಕಾರ್ಯವನ್ನುಅವರುಎಂದೂ ಹಣ ಸಂಪಾದನೆಗಾಗಿ ಮಾಡಲಿಲ್ಲ ಎಂದು ಬಿಸಲಹಳ್ಳಿಯ ಪವನಕುಮಾರ ಪ್ರಭುದೇವ ಕಮ್ಮಾರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ವಿದ್ಯಾವಾಚಸ್ಪತಿಡಾ. ಪಂಚಾಕ್ಷರಿ ಹಿರೇಮಠದತ್ತಿ ಅಂಗವಾಗಿ 92ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಉಪನ್ಯಾಸದಲ್ಲಿಡಾ. ಪಂಚಾಕ್ಷರಿ ಹಿರೇಮಠಅವರ ‘ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ’ ವಿಷಯಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಡಾ.ಪಂಚಾಕ್ಷರಿ ಹಿರೇಮಠ ಒಬ್ಬ ಬರಹಗಾರ, ಕಾದಂಬರಿಕಾರ, ವಿಮರ್ಶಕ, ನಾಟಕಕಾರ, ಪ್ರಬಂಧಕರಾಗಿ ಅಪ್ಪಟ ಸ್ವಾತಂತ್ರ್ಯ ಪ್ರಿಯರೂಕೂಡಾಆಗಿದ್ದಾರೆ. ಅವರ ಈ ಬಹುಮುಖ ವ್ಯಕ್ತಿತ್ವಕ್ಕೆ ಬಾಲ್ಯದಲ್ಲಿ ತಾಯಿ ನೀಡಿದ ಸಂಸ್ಕಾರವೇ ಮುಖ್ಯ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರ ಆಳ್ವಿಕೆಗೆ ಒಳಪಟ್ಟ ಕೊಪ್ಪಳದಲ್ಲಿ ನಿಜಾಮನ ದಬ್ಬಾಳಿಕೆ ಇತ್ತು.ಸ್ವಾಮಿರಮಾನಂದತೀರ್ಥರ ಮುಂದಾಳತ್ವದಲ್ಲಿ ಹೈದ್ರಾಬಾದ ವಿಮೋಚನಾ ಚಳುವಳಿ ಉಗ್ರ ಸ್ವರೂಪ ಪಡೆದಿತ್ತು. ಬಾಲಕರಾಗಿದ್ದ ಡಾ.ಪಂಚಾಕ್ಷರಿ ಹಿರೇಮಠ ದಬ್ಬಾಳಿಕೆ ವಿರೋಧಿಸಿ ಕೊಪ್ಪಳ ಕೋಟೆಯ ಮೇಲೆ ಧ್ವಜ ಹಾರಿಸಿ ರಾಷ್ಟ್ರೇ್ರಮ ದೇಶಭಕ್ತಿ ತೋರಿದರು.
ಇವರು ವಿಮೋಚನಾ ಹೋರಾಟಕ್ಕೆ ಶಿವಮೂರ್ತಿ ಸ್ವಾಮಿ ಅಳವಂಡಿ ಬಸರಿಗಿಡದ ವೀರ್ಪನವರುಉದಾರ ಸಹಾಯ ನೀಡಿ ಸಾರ್ಥರೆನಿಸಿದರು. ಸುಭಾಷಚಂದ್ರ ಬೋಸರಾರಆಯ್.ಎನ್.ವಿ ಸೇನೆಯಿಂದ ವಿಮೋಚನಾ ಹೋರಾಟದ ತರಬೇತಿ ಪಡೆದರು. ಗಾಂಧಿ ಚಿತಾಭಸ್ಮ ತಂದು ಬಿಸರಹಳ್ಳಿಯಲ್ಲಿ ಸ್ಮಾರಕ ನಿರ್ಮಿಸಿದರು. ಉರ್ದು ಹಾಗೂ ಹಿಂದಿಯಲ್ಲೂ ಪಾಂಡಿತ್ಯ ಪಡೆದಅವರು ಕೃತಿಗಳನ್ನು ರಚಿಸಿದ್ದಾರೆ.ಮುಕ್ತಕಗಳನ್ನು ರಚಿಸಿದ ಮೊದಲಿಗರಾಗಿದ್ದಾರೆ.ಅವರಿಗೆ ಹೆಚ್ಚು ಕೀರ್ತಿತಂದಕ್ಷೇತ್ರವೆಅನುವಾದ ಸಾಹಿತ್ಯವಾಗಿದೆ. ಅವರು ಬರೆದಂತೆ ಬದುಕಿದ ಮಹಾನುಭಾವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಡಾ.ಪಂಚಾಕ್ಷರಿ ಹಿರೇಮಠಕನ್ನಡ ಸಾಹಿತ್ಯಅನುವಾದದ ಪ್ರಕಾಂಡ ಪಂಡಿತರು. ಮಾನವೀಯತೆ ಕರುಣೆಯ ಸಾಕಾರ ಮೂರ್ತಿಗಳು. ಅವರ ಸಾಕ್ಷಚಿತ್ರವು ಅದ್ಭುತವಾಗಿ ರಚನೆಯಾಗಿದೆ. ಅವರ ಸ್ವಾತಂತ್ರ್ಯ ಪ್ರೇಮವು ದಿ.ಬಸವರಾಜ ಕಟ್ಟಿಮನಿ ಅವರ ಮಾಡಿ ಮಡಿದವರು ಎಂಬ ಕಾದಂಬರಿ ನೆನಪಿಸುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿದತ್ತಿದಾನಿ ಜಯದೇವ ಹಿರೇಮಠ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಸಿದ್ದರು, ಶಂಕರ ಕುಂಬಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿಡಾ. ಲಿಂಗರಾಜ ಅಂಗಡಿ, ಎಂ.ಎಸ್. ನರೇಗಲ್, ವಿ.ಬಿ. ಸಂತೋಜಿ, ಶ್ರೀನಿವಾಸ ವಾಡಪ್ಪಿ, ಬಿ.ಎಸ್. ಶಿರೋಳ ಸೇರಿದಂತೆ ಮುಂತಾದವರಿದ್ದರು.