ಲೋಕದರ್ಶನವರದಿ
ರಾಣಿಬೆನ್ನೂರ: ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರಮಠದ ಆವರಣದಲ್ಲಿ ಜಗದ್ಗುರು ಪಂಡೀತಾರಾಧ್ಯ ಮಂಗಲಮೂತರ್ಿ ಕಾತರ್ಿಕೋತ್ಸವ ಹಾಗೂ ಹೊನ್ನಾಳಿ ಹಿರೇಕಲ್ಮಠದ ಲಿಂ.ಒಡೆಯರ ಚಂದ್ರಶೇಖರ ಮಹಾಸ್ವಾಮಿಗಳವರ ಸಂಸ್ಮರಣೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭವು ನಡೆಯಿತು. ಭಾಗವಹಿಸಿ ಮಾತನಾಡಿದ ಹೊನ್ನಾಳಿ ಹಿರೇಕಲ್ಮಠದ ಡಾ|| ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳವರು ಭಾರತದ ಪರಂಪರೆಯಲ್ಲಿ ವೇದ-ಇತಿಹಾಸ ಕಾಲಗಳಿಂದಲೂ ಧರ್ಮದ ಆಚರಣೆಯಲ್ಲಿ ಸಾಗಿ ಬಂದವರಾಗಿದ್ದೇವೆ. ಅದರಿಂದಲೇ ಸದಾಕಾಲ ಮಾನವನ ಜೀವನ ಮತ್ತು ಬದುಕು ಸಾರ್ಥಕತೆ ಪಡೆಯುತ್ತಲಿದ್ದೇವೆ. ಹಿಂದಿನ ಜನ್ಮದ ಪುಣ್ಯದ ಫಲವೇ ಇಂದು ನಾವೆಲ್ಲರೂ ಸಂತೋಷವಾಗಿ ಬಾಳಿಬದುಕಲು ಸಾಧ್ಯವಾಗುತ್ತಿಲಿದೆ. ಅದಕ್ಕೆ ಗುರುಗಳ ಕೃಪಾಕಟಾಕ್ಷ ಬೇಕಾಗುತ್ತದೆ ಎಂದರು.
ಲಿಂ. ಜಗದ್ಗುರು ಪಂಡಿತಾರಾಧ್ಯರು ಹೊನ್ನಾಳಿಯ ಲಿಂ. ಚಂದ್ರಶೇಖರ ಶಿವಾಚಾರ್ಯರು ತಮ್ಮ ಬದುಕಿನುದ್ದಕ್ಕೂ ಭಕ್ತರ ಏಳ್ಗೆಯನ್ನೇ ಬಯಸಿದವರು.
ಅಂತಹ ಗುರುಪರಂಪರೆಯ ವಿಚಾರಧಾರೆಗಳು ಇಂದಿಗೂ ಶಾಶ್ವತವಾಗಿ ನಿತ್ಯ-ನಿರಂತರವಾಗಿ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹಿತ ಸದಾಕಾಲವೂ ಅವರು ಮಾಡಿದ ಸೇವೆ ಭಕ್ತರ ಉದ್ಧಾರ ಸ್ಮರಣೀಯವಾಗಿದೆ ಎಂದು ಉಭಯ ಜಗದ್ಗುರುಗಳ ಜೀವನ, ಬದುಕು, ಸಾಧನೆ ಕುರಿತು ಮಾತನಾಡಿದರು.
ಜಗದ್ಗುರುಗಳವರ ಸೇವಾ ಕಾರ್ಯಗಳು ಮತ್ತು ಭಕ್ತರ ಉದ್ಧಾರ ಕುರಿತು ಹೂವಿನಹಡಗಲಿ ಪ್ರಾಧ್ಯಾಪಕ ಡಾ|| ಶಾಂತಮೂತರ್ಿಕುಲಕರ್ಣಿವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಸಾವಯವ ಕೃಷಿಕ ಶಿವಪುತ್ರಪ್ಪ ಕೊಂಬಳಿ, ಪಿ.ಬಿ.ಮಣಿಕಟ್ಟಿ, ನಿಂಗಪ್ಪ ಸೂರಣಗಿ, ವಿದ್ಯಾ ಭೋಸ್ಲೆ ಸೇರಿದಂತೆ ಮತ್ತಿತರ ಗಣ್ಯರನ್ನು ಗುರುರಕ್ಷೆ ನೀಡಿ ಗೌರವಿಸಲಾಯಿತು. ಚನ್ನವೀರಗೌಡ ಪಾಟೀಲ ಮತ್ತು ಪರಿವಾರದವರು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ ಚಾಲನೆ ನೀಡಿದರು.
ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಭರತನಾಟ್ಯ ಬಾಲಕಲಾವಿದೆ ಚಿನ್ಮಯಿ ಕುಲಕಣರ್ಿ ಅವರು ಭರತನಾಟ್ಯ ಪ್ರದಶರ್ಿಸಿ ಭಕ್ತರ ಗಮನ ಸೆಳೆದರು. ಸಂಸ್ಕೃತಿ ಪ್ರಸಾರ ಪರಿಷತ್ತಿನ ಕಾರ್ಯದಶರ್ಿ ಅ.ಸಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಹಿ.ವ್ಹಿ.ಹರಪನಹಳ್ಳಿ ಸ್ವಾಗತಿಸಿದರು. ಕಸ್ತೂತಿ ಪಾಟೀಲ ನಿರೂಪಿಸಿ, ಗಾಯತ್ರಮ್ಮ ಕುರವತ್ತಿ ವಂದಿಸಿದರು.