ಲೋಕದರ್ಶನ ವರದಿ
ಬೆಳಗಾವಿ, 12: ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆಯು ಜನರ ಸಹಭಾಗಿತ್ವ ಅವಲಂಬಿಸಿದೆ. ಸಂವಿಧಾನದ ಉದ್ಧೇಶಗಳು ಮತ್ತು ತತ್ವಗಳು ಯಶಸ್ವಿಯಾಗಿ ಜಾರಿಯಾಗಬೇಕಾದರೆ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ದಕ್ಷತೆ ಅತ್ಯಂತ ಅವಶ್ಯ, ಜನರ ಸಹಭಾಗಿತ್ವದಿಂದ ಮಹಾನಗರ ಪಾಲಿಕೆಗಳಲ್ಲಿ ವಾರ್ಡ ಸಮಿತಿಗಳ ರಚನೆ ಅಗತ್ಯವಾಗಿದೆ ಎಂದು ಬೆಂಗಳೂರಿನ ಸಿವಿಕ್ ಸಂಸ್ಥೆಯ ಎಕ್ಸಿಕ್ಯೂಟಿವ್ ಟ್ರಸ್ಟಿ ಕಾತ್ಯಾಯನಿ ಕಾಮರಾಜ ಅಭಿಪ್ರಾಯಪಟ್ಟರು.
ಸಿವಿಕ್ ಸಂಸ್ಥೆ, ಬೆಂಗಳೂರು, ನಾಗರಿಕ ಶಕ್ತಿ ಬೆಂಗಳೂರು, ಜನಪರ ಸೇವಾ ಸಂಘಟನೆ ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಬೆಳಗಾವಿ ಸಹಯೋಗದೊಂದಿಗೆ ರವಿವಾರ ನಗರದ ಮಹಿಳಾ ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಡ ಸಮಿತಿ ಮುಖಾಂತರ ನಗರದ ಆಳಿಕೆಯಲ್ಲಿ ನಾಗರಿಕರ ಪಾತ್ರ ಕಾರ್ಯಗಾರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ನಾಗರಿಕ ಸಂಘಟನೆ ಬೆಂಗಳೂರಿನ ನರೇಂದ್ರಕುಮಾರ ಮಾತನಾಡಿ ಸಂವಿಧಾನದ ಆಶಯಗಳ ಮಹತ್ವ ಮತ್ತು ಕನರ್ಾಟಕ ಮುನ್ಸಿಪಲ್ ಕಾಪರ್ೋರೇಷನ ಕಾಯ್ದೆ 1977 ರ ಪ್ರಮುಖ ಲಕ್ಷಣಗಳನ್ನು ಹಾಗೂ ಇತ್ತೀಚಿನ ಕಾನೂನಾತ್ಮಕ ತಿದ್ದುಪಡಿಗಳು ಮತ್ತು ಶಾಸನಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ವಿವರಿಸಿದರು. ನಗರದ ಅಭಿವೃದ್ಧಿಯಲ್ಲಿ ವಾರ್ಡ ಸಮಿತಿ ಪ್ರಮುಖ ಪ್ರಾತ ವಹಿಸಲಿದ್ದು, ಪಾಲಿಕೆ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯಥರ್ಿಗಳಿಗೆ ವಾರ್ಡ ಸಮಿತಿ ರಚನೆಯ ಕುರಿತು ನಿಲುವು ತಿಳಿಸಲು ಆಗ್ರಹಿಸಬೇಕೆಂದರು.
ವಕೀಲರಾದ ಅಶೋಕ ಹಲಗಲಿ ಮಾತನಾಡಿ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಮತ್ತು ಎಲ್ಲ ಅಧಿಕಾರಿ ವರ್ಗದವರು ಯಾವುದೇ ನಿಹಿತ ಹಿತಾಸಕ್ತಿಗಳಿಗೆ ಅವಕಾಶ ಕೊಡದೆ ವಾರ್ಡ ಸಮಿತಿಗಳನ್ನು ರಚಿಸಿ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕಗಾಗಿ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಎಂ ಎಂ ಗಡಗಲಿ ಮಾತನಾಡಿದರು. ಸಾಹಿತಿ ಎಸ್. ಆರ್ ಸುಳಕೂಡೆ, ಎಂ ಎಸ್ ಚೌಗಲಾ, ರಾಷ್ಟ್ರೀಯ ಬಸವದಳದ ಕೆ ಬಸವರಾಜು, ರಹವಾಸಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಕನರ್ಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ನಿರೂಪಿಸಿದರು, ಮಲ್ಲಪ್ಪ ಮಾನಗಾಂವಿ ವಂದಿಸಿದರು.