ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಪಾಪಿಗಳಿಗೆ ಮೊದಲು ಗುಂಡು ಹೊಡೆಯಬೇಕಾಗಿದೆ:
ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಸವದತ್ತಿ 21: ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಪಾಪಿಗಳಿಗೆ ಮೊದಲು ಗುಂಡು ಹೊಡೆಯಬೇಕಾಗಿದೆ ಎಂದು ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಗುಡುಗಿದರು. ಆಪರೇಷನ್ ಸಿಂಧೂರ್ ಕಾರ್ಯಾಚರ ಣೆಯ ನಂತರ ದೇಶದ ಸೈನಿಕರ ಆತ್ಮಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸವದತ್ತಿ ನಗರದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷರು ವಿರೂಪಾಕ್ಷ ಮಾಮನಿ ನೇತೃತ್ವದಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮೊಂಡ, ಲಂಡ ಮತ್ತು ಭಂಡ ದೇಶ ಪಾಕಿಸ್ತಾನ. ಅದಕ್ಕೆ ಇನ್ನೂ ಬುದ್ದಿ ಬಂದಿಲ್ಲ. ದೇಶದ ಸೈನಿಕರಿಗೆ ಶಕ್ತಿಯಿದೆ. ಪಾಕಿಸ್ತಾನ ನಾಶಕ್ಕೆ ಅವರು ಸನ್ನದ್ದರಾಗಿದ್ದಾರೆ ಎಂದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಯ ಸಂಘದ ಅಧ್ಯಕ್ಷ ಕುಮಾರ ಹಿರೇಮಠ ಮಾತನಾಡಿ, 1970ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರನ್ನು. ಅಂದು ಗೆದ್ದಿದ್ದ ಪ್ರದೇಶವನ್ನು ಇಂದಿರಾ ಗಾಂಧಿ ಸರ್ಕಾರ ವಾಪಸು ಕೊಡಬಾರದಿತ್ತು. ನೀರು ಹರಿದಂತೆ ನಮ್ಮ ಸೈನಿಕರ ರಕ್ತ ಅಂದಿನ ಯುದ್ಧದಲ್ಲಿ ಹರಿದಿತ್ತು ಎಂದು ನೆನಪಿಸಿದರು ಇಲ್ಲಿಯ ಎಪಿಎಂಸಿ ಬಾಗಿಲಿನಿಂದ ಆರಂಭವಾದ ಯಾತ್ರೆ ಕಡಕೋಳ ಬ್ಯಾಂಕ್, ಆನಿ ಅಗಸಿ, ಸಂಗೋಳ್ಳಿ ವೃತ್ತದ ಮೂಲಕ ಮಾಮನಿ ಕಲ್ಯಾಣ ಮಂಟಪ ತಲುಪಿತು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಅಟೋರಿಕ್ಷಾ ಚಾಲಕರ ಸಂಘಟನೆ, ವಕೀಲರ ಸಂಘ, ವೈದ್ಯರ ಸಂಘ, ಮಹಿಳಾ ಸಂಘ, ಹಾಗೂ ಬಿಜೆಪಿ ಕಾರ್ಯಕರ್ತರು ತಿರಂಗಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದರು. 200 ಮೀಟರ್ ಉದ್ದದ ರಾಷ್ಟ್ರ ಧ್ವಜ ವನ್ನು ನಾಗರಿಕರು, ವಿದ್ಯಾರ್ಥಿಗಳು ಹಿಡಿದು ಸಾಗಿದ್ದು ವಿಶೇಷವಾಗಿತ್ತು. ಈ ವೇಳೆ ಚಿದಂಬರೇಶ್ವರ ಮಠದ ನಟೇಶ ದೀಕ್ಷಿತ್, ಸಿಂದೋಗಿಯ ವೀರಯ್ಯ ಶಾಸ್ತ್ರಿ, ರತ್ನಾ ಮಾಮನಿ, ಡಾ ನಯನಾ ಭಸ್ಮ, ಜಗದೀಶ್ ಶಿಂತ್ರಿ, ಬಸವರಾಜ್ ಪುಟ್ಟಿ, ನರಸಿಂಹ ಕುಲಕರ್ಣಿ, ಈರಣ್ಣ ಚಂದರಗಿ, ಪಂಚನಗೌಡ ದ್ಯಾಮನಗೌಡರ, ಶಂಕರ ವನ್ನೂರ, ಎಪ್ ಎಸ್ ಸಿದ್ದನಗೌಡರ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಹಾದೇವಪ್ಪ ವೆಂಕನಕೊಪ್ಪ, ಬಸವರಾಜ ಕಾರದಗಿ, ಸಿ ವಿ ಸಂಬಯ್ಯನಮಠ ಸೇರಿದಂತೆ ಅನೇಕರು ಇದ್ದರು.ಹೇಳಿಕೆ:ಸಿಂಧೂರ ಬಗ್ಗೆ ನಮ್ಮ ದೇಶಕ್ಕೆ ಅಷ್ಟೇ ಗೊತ್ತಿತ್ತು.ಮೋದಿಯವರು ಜಗತ್ತಿಗೆ ಪರಿಚಯ ಮಾಡಿಸಿದರು. ನಮ್ಮದೇಶದ ಮಹಿಳೆಯರ ಸಿಂಧೂರ ಅಳಿಸಿದ ಪಾಕಿಸ್ತಾನ ನಮ್ಮ ಸೈನಿಕರು ಹಾಗೂ ನಾಯಕರು ತಕ್ಕ ಪಾಠ ಕಳಿಸುತ್ತಿದ್ದಾರೆ.ಶ್ರೀ ವಿರೂಪಾಕ್ಷ ಮಾಮನಿ, ಬಿಜೆಪಿ ಮಂಡಳ ಅಧ್ಯಕ್ಷರು, ಸವದತ್ತಿ