ಲೋಕದರ್ಶನ ವರದಿ
ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಯವರ ಕಾರ್ಯ ಅದ್ವಿತೀಯ; ಸುಮಾ ಕಿತ್ತೂರ
ಬೆಳಗಾವಿ 16: ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಯವರ ಕಾರ್ಯ ಅದ್ವಿತೀಯವಾಗಿದೆ, ಅವರನ್ನು ಇಷ್ಟು ಗೌರವಿಸಿದರೂ ಕಡಿಮೆಯೇ ಎಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಶ್ರೀಮತಿ ಸುಮಾ ಕಿತ್ತೂರು ಹೇಳಿದರು.
ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದಾದಿಗಳೆಂದು ಕರೆಯಲ್ಪಡುವ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಗಳು ಅತ್ಯಂತ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಸಲ್ಲಿಸುವ ಸೇವೆಯನ್ನು ತಾವು ಕಣ್ಣಾರೆ ಕಂಡೆ ಘಟನೆಗಳನ್ನು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಕಾಕದ ಹಿರಿಯ ಲೇಖಕಿ ಪುಷ್ಪ ಮುರುಗೋಡ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳು ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿ
ಇಡೀ ಬದುಕನ್ನು ಒಂದು ಬೊಗಸೆಯಲ್ಲಿ ಹಿಡಿದಿಡುವ ಅಪರೂಪದ ತಾಕತ್ತು ಹೊಂದಿದ ಕಥೆಗಾರ್ತಿಯರಿಂದ ಸಣ್ಣ ಕಥಾ ಪ್ರಪಂಚ ದಿನಕ್ಕೆ ಹೊಸ ರೂಪ ತಾಳಿ ಬೆಳೆಯುತ್ತಿದೆ ಎಂದು ಹೇಳಿದರು.
ದತ್ತಿ ದಾನಿಗಳಾದ ಸಂಗಿತಾ ಹಾಗೂ ಮುರುಗೇಶ ಶಿವಪೂಜಿ ಅವರು ತಮ್ಮ ತಾಯಿ ಸಾವಿತ್ರಿ ಶಿವಪೂಜಿ ಅವರ ಸ್ಮರಣಾರ್ಥ ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಸುರಕ್ಷಾಧಿಕಾರಿಗಳಾಗಿ ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಕ್ಕಾ ಲಂಗೋಟಿ, ಮಂಜುಳಾ ಎಸ್ ಎಸ್, ಮಹಾದೇವಿ ಸಂಬಯ್ಯನವರಮಠ, ಮಹಾದೇವಿ ಗಾಣಿ, ಶಶಿಕಲಾ ಅರಳಿಕಟ್ಟಿ ಅವರುಗಳನ್ನು ಸತ್ಕರಿಸಲಾಯಿತು.
ಇನ್ನೋರ್ವ ದತ್ತಿ ದಾನಿಗಳಾದ ದೀಪಿಕಾ ಚಾಟೆ ತಮ್ಮ ತಂದೆಯವರನ್ನು ಸ್ಮರಿಸಿ ಮಾತನಾಡಿದರು. ಲೇಖಕಿಯರ ಸಂಘದ ಸದಸ್ಯರಿಗಾಗಿ ಸ್ಥಳದಲ್ಲಿಯೆ ಕಥಾ ರಚನೆ ಸ್ಪರ್ಧೆ ಏರಿ್ಡಸಲಾಗಿತ್ತು. 10ಕ್ಕೂ ಹೆಚ್ಚು ಸದಸ್ಯೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೆದ ಅವರು ಸ್ವಾಗತ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾನಂದಾ ಪರುಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಸುನಂದಾ ಹಾಲಬಾವಿ ವಂದನಾರೆ್ಣ ಮಾಡಿದರು. ಡಾ.ಭವ್ಯಾ ಸಂಪಗಾರ ನಿರೂಪಣೆ ಮಾಡಿದರು.
ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ, ಭಾರತಿ ಮಠದ, ಹೇಮಾವತಿ ಸುನೋಳ್ಳಿ, ಜಯಶೀಲಾ ಬ್ಯಾಕೋಡ, ಅಕ್ಕಮಹಾದೇವಿ ತೆಗ್ಗಿ, ರಾಜೇಶ್ವರಿ ಹೀರೆಮಠ, ಲಲಿತಾ ಪರ್ವತರಾವ್, ರೇಣುಕಾ ಜಾಧವ, ರೇಣಿಕಾ ಚೌಗಲೆ, ರುದ್ರಾಂಬಿಕಾ ಯಾಳಗಿ, ಮೇಘಾ ಪಾಟೀಲ, ರೇಖಾ ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.