ರಕ್ತ ದಪ್ಪದಾಗಿದ್ದರೆ ಅರೋಗ್ಯ ಸಮಸ್ಯ ಹೆಚ್ಚಳ: ಮಲ್ಲಿಕಾರ್ಜುನ ರಡ್ಡೇರ

Thick blood increases health problems: Mallikarjuna Raddera

ರಕ್ತ ದಪ್ಪದಾಗಿದ್ದರೆ ಅರೋಗ್ಯ ಸಮಸ್ಯ ಹೆಚ್ಚಳ: ಮಲ್ಲಿಕಾರ್ಜುನ ರಡ್ಡೇರ

ನೇಸರಗಿ, 29 : ಮಾನವನ ರಕ್ತವು ತಿಳುವಗಿದ್ದಾರೆ ಆರೋಗ್ಯಕ್ಕೆ ಯಾವುದೇ ಸಮಸ್ಯೆಗಳು ಬರುವದಿಲ್ಲ. ಆದರೆ ರಕ್ತದ ಗುಣಮಟ್ಟ ದಪ್ಪದಾದರೆ  ಮನುಷ್ಯನಿಗೆ ಪಿತ, ಕಪ್, ವಾತ ದಂತ ಅರೋಗ್ಯ ಸಮಸ್ಯೆಗಳು ಪ್ರಾರಂಭವಾಗಿ ಪಿತದಿಂದ 36 ರೋಗಗಳು, ಕಪದಿಂದ 36 ರೋಗಗಳು, ವಾತದಿಂದ  36 ರೋಗಗಳು ಮನುಷ್ಯನಿಗೆ  ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿ ರಕ್ತವನ್ನು ಚೆನ್ನಾಗಿ ಇಟ್ಟುಕೊಂಡು ಅರೋಗ್ಯ ರಕ್ಷಣೆ ಮಾಡಿಕೊಂಡು  ಮಂಡೇನೋವು, ಹೃದಯ ಕಾಯಿಲೆ, ಕಿಡ್ನಿ ಸಮಸ್ಯ ಇನ್ನೂ ಅನೇಕ ಕಾಯಿಲೆಗಳಿಂದ ಮುಕ್ತಾರಾಗಲು ಆರ್ಗ್ಯನಿಕ್  ವಸ್ತುಗಳನ್ನು, ಜವಾರಿ ಆಹಾರ ಪದಾರ್ಥಗಳನ್ನು ಬಳಕೆ ಮಾಡಿ, ದೇಶ ಆಕಳಿನ ತುಪ್ಪ ಸೇವಿಸಿ ಅರೋಗ್ಯ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂದು  ವರದಶ್ರೀ ಪೌಠೆಷನ್ ಅಧ್ಯಕ್ಷರಾದ  ಮಲ್ಲಿಕಾರ್ಜುನ ರೆಡ್ಡೇರ ಹೇಳಿದರು.  

    ಅವರು ಸೋಮವಾರದಂದು ಗ್ರಾಮದ ಶ್ರೀ ಚನ್ನವೃಬೇಂದ್ರ ದೇವರಕೊಂಡ ಅಜ್ಜನವರ ಲೀಲಾ ಮಠದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಗೆ ಕಣ್ಣಿನ ಪೊರೆ, ಕಣ್ಣು ಕೆಂಪಾಗುವದು, ದೃಷ್ಟಿದೋಷ, ಕಣ್ಣಲ್ಲಿ ನೀರು ಬರುವದು, ತಲೆನೋವು, ಅತಿಯಾದ ಕಂಪ್ಯೂಟರ್, ಮೊಬೈಲ್ ಬಳಕೆ ನಿವಾರಣೆಗೆ ಸಿದ್ದ ಕಣ್ಣಿನ ಹನಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.   ಬಸವರಾಜ ಹಿರೇಮಠ ಮಾತನಾಡಿ ಇಂಥಹ ಕಣ್ಣಿನ ಮತ್ತು ಆರೋಗ್ಯದ ಸಮಸ್ಯೆಗಳಿಗೆ ವರದಶ್ರೀ ಪೌಠೇಶನ್ ನಮ್ಮ ಗ್ರಾಮಕ್ಕೆ ಬಂದು ಅನೇಕ ಜನರ ಕಣ್ಣಿನ ಸಮಸ್ಯ ಕಡಿಮೆ ಮಾಡಿ ಜನುಪಯುಕ್ತ ಕೆಲಸ ಮಾಡುತ್ತಿದೆ ಎಂದರು.   

       ಕಾರ್ಯಕ್ರಮದಲ್ಲಿ ಹಿರಿಯರಾದ  ಮಲ್ಲಿಕಾರ್ಜುನ ಮದನಬಾವಿ, ಅಡಿವಪ್ಪ  ಮಾಳಣ್ಣವರ,ಶ್ರೀಶೈಲ ಹಿರೇಮಠ, ಯಲ್ಲಪ್ಪ ರೊಟ್ಟಿ, ಮಲ್ಲಿಕಾರ್ಜುನ ಕಲ್ಲೋಳಿ, ಬಸವರಾಜ ಬೆನಕನ್ನವರ, ಪ್ರಕಾಶ ಮುಂಗರವಾಡಿ, ಬಸವರಾಜ ಸಾಲಿಮಠ,ಮಲ್ಲಿಕಾರ್ಜುನ ದೋಣಿ, ಸೇರಿದಂತೆ ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಸಿದ್ದ ಕಣ್ಣಿನ ಹನಿ ಹಾಕಿಸಿಕೊಂಡು ಜವಾರಿ ಆಹಾರ ಪದಾರ್ಥ ಮತ್ತು ಆಯಾ ರೋಗಗಳಿಗೆ ಓಷದಿ ಪಡೆದುಕೊಂಡರು. ಕೆಲವೊಂದು ವೃದ್ಧರು 3 ವಾರದಿಂದ ಚಸ್ಮಾ ಬಳಕೆ ನಿಲ್ಲಿಸಿದ್ದೇನೆ ಅದಕ್ಕೆ ಕಾರಣ ವರದಶ್ರೀ ಪೌಠೇಶನ್ ನ ಸಿದ್ದ ಕಣ್ಣಿನ ಹನಿ ಹಾಕಿಸಿಕೊಂಡಿದ್ದು ಫಲ ನೀಡಿದೆ ಎಂದರು.