ತಾಳಿಕೋಟಿ 22: ಆಪರೇಷನ್ ಸಿಂಧೂರ ಕಾರ್ಯಾಚರಣೆ ಸ್ಮರಣೀಯವಾಗಿರಿಸಿ ದೇಶದ ಸೈನಿಕರ ಮನೋಬಲ ಹೆಚ್ಚಿಸಲು ಮೇ 26ರಂದು ಪಟ್ಟಣದಲ್ಲಿ ಸಮಸ್ತ ನಾಗರಿಕರ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ದೇಶ ಸೇವೆಯಲ್ಲಿರುವ ಹಾಗೂ ಯುದ್ಧ, ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮ ರಾಗಿರುವ ಸೈನಿಕರ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸುವ ವಿಶೇಷ ಕಾರ್ಯಕ್ರಮ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಬುಧವಾರ ಪಟ್ಟಣದ ವಿಠಲ ಮಂದಿರದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಬಳಿ ಹೋಗಿ ಅವರನ್ನು ಅಭಿನಂದಸಲು ಸಾಧ್ಯವಾಗುವುದಿಲ್ಲ ಅದರ ಬದಲು ಅವರ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಮೂಲಕ ಸಾಧ್ಯವಾಗುತ್ತದೆ ಅಂದು ನಡೆಯುವ ಈ ಕಾರ್ಯಕ್ರಮ ಸಂಪೂರ್ಣ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿರುವುದು ರಾಷ್ಟ್ರೀಯತೆ ಜಾಗೃತಿಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿರುವುದು. ಇದರಲ್ಲಿ ಎಲ್ಲ ದೇಶಭಕ್ತರು ಭಾಗವಹಿಸಬೇಕಾಗಿದೆ ಎಂದರು.
ನಂತರ ಸಭಿಕರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಕಾರ್ಯಕ್ರಮದ ಯಶಸ್ವಿಗಾಗಿ ಹತ್ತು ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಮೇ 26ರಂದು ಮಧ್ಯಾಹ್ನ 3 ಗಂಟೆಗೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಬೃಹತ್ ತಿರಂಗಾ ರಾ್ಯಲಿ ಪಟ್ಟಣದ ಶಿವಾಜಿ ಸರ್ಕಲ್ ದಿಂದ ಆರಂಭವಾಗಿ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕತ್ರಿ ಬಜಾರ್ ಮಾರ್ಗವಾಗಿ ವಿಠಲ ಮಂದಿರ ಹತ್ತಿರ ಮುಕ್ತಾಯಗೊಳ್ಳುವುದು ನಂತರ ಅಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗುವುದು ಎಂದು ನಿರ್ಣಯಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಗಣ್ಯರಾದ ಕಾಶಿನಾಥ ಮುರಾಳ, ದತ್ತು ಹೆಬಸೂರ, ಎಂ,ಎಸ್. ಸರಶೆಟ್ಟಿ, ವಾಸುದೇವ ಹೆಬಸೂರ, ಗಂಗಾಧರ ಕಸ್ತೂರಿ, ರಾಜು ಹಂಚಾಟೆ, ಶ್ರೀಕಾಂತ ಪತ್ತಾರ, ಜೈ ಸಿಂಗ್ ಮೂಲಿಮನಿ, ಪರಶುರಾಮ ಕಟ್ಟಿಮನಿ, ಸಾಹೇಬಗೌಡ ಬಿರಾದಾರ, ಬಸನಗೌಡ ವಣಿಕಿಹಾಳ, ಮುದುಕಪ್ಪ ಬಡಿಗೇರ, ನಿಂಗಣ್ಣ ಕುಂಟೋಜಿ, ಸುವರ್ಣ ಬಿರಾದಾರ, ಈಶ್ವರ ಹೂಗಾರ, ರಾಘು ಮಾನೆ, ಶಿವಶಂಕರ ಹಿರೇಮಠ, ರಾಘು ಬಿಜಾಪುರ, ರಾಜು ಸೊಂಡೂರ, ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತಿತರರು ಇದ್ದರು.