ಕಾಶ್ಮೀರದ ಪಹಲ್ಗಾಮ್ ಘಟನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ

Tributes paid to those killed in Kashmir's Pahalgam incident

ಲೋಕದರ್ಶನ ವರದಿ 

ಕಾಶ್ಮೀರದ ಪಹಲ್ಗಾಮ್ ಘಟನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ  

 ಭಯೋತ್ಪಾದಕರ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರಕ್ಕೆ ಆಗ್ರಹ 

ಮಹಾಲಿಂಗಪುರ 24: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಕ್ಕೂ ಹೆಚ್ಚು ಅಸುನೀಗಿದ ದೇಶದ ಮತ್ತು ವಿದೇಶಿ ನಾಗರಿಕರಿಗೆ ಚೆನ್ನಮ್ಮ ವೃತ್ತದಲ್ಲಿ ಪಟ್ಟಣದ ಜನರು ಭಾವ ಪೂರ್ಣ ಶ್ರದ್ಧಾಂಜಲಿ ಅರ​‍್ಿಸಿದರು. 

ನಿವೃತ್ತ ಬಿ.ಎಸ್‌.ಎನ್‌.ಎಲ್ ಉದ್ಯೋಗಿ ಶ್ರೀಕಾಂತ್ ಮಾಗಿ ಮಾತನಾಡಿ, ಪಹಲ್ಗಾಮ್ ದಾಳಿ ನಿಜಕ್ಕೂ ಮಾನವೀಯತೆ ಮೇಲೆ ನಡೆದ ಭೀಕರ ದಾಳಿ. ಇದು ಅಕ್ಷಮ್ಯ ಅಪರಾಧ.ದಾಳಿಯಲ್ಲಿ ಪಾಲ್ಗೊಂಡ ಉಗ್ರರ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರಕ್ಕೆ ನಮ್ಮ ಆಗ್ರಹ. ಆಗ ಮೃತ ಪರ್ಯಟಕರ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು. 

ಘಟನೆ ನಡೆದ ಸ್ಥಳದಲ್ಲಿ ಇಸ್ಲಾಮಿಕ್ ಉಗ್ರರಿಂದ ದಾಳಿ ನಡೆದಿರಬಹುದು, ಆದರೆ ಅಲ್ಲಿರುವ ಸ್ಥಳೀಯ ಮುಸಲ್ಮಾನರು ಗಾಯಾಳುಗಳಿಗೆ ಅಪಾರವಾದ ಸಹಾಯ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದು ದೇಶ ವೈವಿಧ್ಯತೆಯಿಂದ ಕೂಡಿದರೂ ವಿಶ್ವಕ್ಕೆ ಮಾದರಿಯಾಗುವಂತ ಕಾರ್ಯವಾಗಿದೆ ಎಂದು ಹೇಳಿ, ಮೃತರಿಗೆ ಚಿರಶಾಂತಿ ಮತ್ತು ಪರಿವಾರಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. 

ಚೆನ್ನಮ್ಮ ವೃತ್ತದಲ್ಲಿ ಸೇರಿದ ಜನ ಮೊಂಬತ್ತಿ ಬೆಳಗಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಶೇಖರ ಅಂಗಡಿ, ಶ್ರೀಕಾಂತ್ ಮಾಗಿ, ರವಿ ಬಿದರಿ, ವಿನೋದ ಶಿಂಪಿ, ವಿಜಯ ಸಬಕಾಳೆ, ಪತ್ರಕರ್ತರಾದ ಮಹೇಶ್ ಮಣ್ಣಯ್ಯನವರಮಠ, ಮಹೇಶ್ ಆರಿ, ಮೀರಾ ತಟಗಾರ, ಅಬ್ಬು ಬೆಳಗಲಿ, ಸಂಜಯ್ಯ ಸಕ್ರಿ, ಬಸವರಾಜ ಸೋರಗಾವಿ ಮುಂತಾದವರಿದ್ದರು.