ಲೋಕದರ್ಶನ ವರದಿ
ಗುಳೇದಗುಡ್ಡ; ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಗುರುಗಳನ್ನು ದೇವರೆಂದು ಬಗೆಯಲಾಗಿತ್ತು. ಆದರೆ ಇಂದು ಗುರು ಭಕ್ತಿ ಮರೆಯಾಗುತ್ತಿದೆ ಎಂದು ಇಲ್ಲಿನ ಮುರಘಾಮಠದ ಕಾಶೀನಾಥ ಶ್ರೀಗಳು ತಮ್ಮ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಕಲಿತ 1993-94 ನೇ ಸಾಲಿನ 7 ನೇ ತರಗತಿಯ ಹಳೆಯ ವಿದ್ಯಾಥರ್ಿಗಳ ಸ್ನೇಹ ಸಮ್ಮೀಲನ ಹಾಗೂ ಗುರುವಂದನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ,ಗುರುಪರಂಪರೆ ಮುಂದುವರೆಯಬೇಕಿದೆ. ಗುರುಗಳನ್ನು ಭಯ ಭಕ್ತಿಯಿಂದ ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ ಆಧುನಿಕ ದಿನಗಳಲ್ಲಿ ಗುರು ಭಕ್ತಿ ಕಡಿಮೆಯಾಗಿ ವಿದ್ಯಾಥರ್ಿಗಳಲ್ಲಿ ಶಿಸ್ತುಬದ್ಧ ಜೀವನ ಮರೆಯಾಗುತ್ತಿದೆ. ಪ್ರತಿಯೊಬ್ಬರೂ ಗುರುಗಳನ್ನು ಸ್ಮರಿಸುವ ಕಾಲ ಮತ್ತೇ ಬರಬೇಕೆಂದರು.
ಆರ್ಎಸ್ಎಸ್ ನ ಕನರ್ಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ವಕ್ತಾರ ಶ್ರೀನಿವಾಸ್ ನಾಡಿಗೇರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗುರುಗಳನ್ನು ನೆನಪಿಸಿಕೊಳ್ಳುವ ಈ ಸಂಸ್ಕೃತಿ ಬೆಳೆಯಬೇಕು. ಕಲಿತ ಶಾಲೆ ಹಾಗೂ ಗುರುಗಳನ್ನು ಕಾಣುವ ಈ ಬಗೆಯ ಪರಂಪರೆಯಿಂದ ಗುರುಭಕ್ತಿ ಹೆಚ್ಚುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಘನಶಾಂದಸ್ ರಾಠಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಶಿಕ್ಷಕ ಕೆ.ಹೆಚ್.ಮರಳಿ ಮಾತನಾಡಿದರು.
ಸಭೆಯ ಆಕರ್ಷಣೆಯಾಗಿದ್ದ ಗುರುಗಳಾದ ಸುಮತಿ ಹೆಗಡೆ, ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಭಾರತಿ ತಾಂಡೂರ್, ಜಮುನಾ ಮಾದರ್, ರಾಜೇಶ್ವರಿ ಕವಡಿಮಟ್ಟಿ, ಪಿ.ಎನ್.ಪವಾರ್ ನಾಗಪ್ಪ ವಡ್ಡರ್, ಶಂಕರ್ ರೂಡಗಿ ಸೇರಿದಂತೆ ಇನ್ನೂ ಹಲವು ಹಳೆಯ ವಿದ್ಯಾಥರ್ಿಗಳು ಗುರುಗಳಿಗೆ ಸತ್ಕರಿಸಿ ಗುರುವಂದನಾ ಸಲ್ಲಿಸಿ ಗೌರವಿಸಿದರು.