ಲೋಕದರ್ಶನ ವರದಿ
28ರಿಂದ ಮೇ 5ರ ವರೆಗೆ ವಿವಿದ ಕಾರ್ಯಕ್ರಮಗಳು
ಸಂಬರಗಿ, 29 : ಜಂಬಗಿ ಗ್ರಾಮದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮೂದಾಹಿಕ ಅಖಂಡ ಪಾರಾಯನ ಕಾರ್ಯಕ್ರಮ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಎಪ್ರೀಲ್. 28ರಿಂದ ಮೇ 5ರ ವರೆಗೆ ನಡೆಯಲಾಗುವುದ.
ದಿನ ನಿತ್ಯ ಬೆಳಗ್ಗಿನ ಜಾವಾ ಆರತಿ, ಜ್ಞಾನೇಶ್ವರಿ ಪ್ರಾರ್ಥನೆ, ಸಾಯಂಕಾಲ ಭಜನೆಗಳು, ರಾತ್ರಿ ಅವಧಿ 9ರಿಂದ 11ರ ವರೆಗೆ ಕೀರ್ತನ ಕಾರ್ಯಕ್ರಮ ನಡೆಯುತ್ತದೆ. ದಿನ ನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ಖ್ಯಾತ ಸಂತರಿಂದ ಪ್ರವಚನ ಕೀರ್ತನ ನಡೆಯಲಾಗುವುದು. ಗ್ರಾಮದ ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಭಕ್ತರಿಗೆ ಸತತ 7 ದಿನಗಳ ಕಾಲ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.