ವಿಜಯಪುರ: ಮಹಿಳಾ ದಿನಾಚರಣೆ: ಜಿಲ್ಲೆಯ ಶಕ್ತಿ ಕೇಂದ್ರಗಳ ಸಮಾವೇಶ

ಲೋಕದರ್ಶನ ವರದಿ

ವಿಜಯಪುರ 09: ಭಾರತೀಯ ಜನತಾ ಪಾರ್ಟಿ  ವಿಜಯಪುರ ಜಿಲ್ಲಾ ಮಹಿಳಾ ಮೋರ್ಚಾ  ವತಿಯಿಂದ ಜಿಲ್ಲೆಯ ಶಕ್ತಿ ಕೇಂದ್ರಗಳ ಸಮಾವೇಶ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಜಮಖಂಡಿ ರಸ್ತೆಯಲ್ಲಿರುವ ವಿಜುಗೌಡ ಎಸ್. ಪಾಟೀಲರವರ ಪಾಂಚಜನ್ಯ ಕಛೇರಿಯಲ್ಲಿ ಭಾರತ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿಯವರ ವಿಜಯಪುರ ಜಿಲ್ಲೆಯ ಪ್ರಗತಿಪಥ  ಜನಪರ ಕಾಯಕದ ನೇರ ನೋಟ ಪುಸ್ತಕ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಕೇಂದ್ರ ಸಚಿವರು ರಮೇಶ ಜಿಗಜಿಣಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಅಮೃತ ಯೋಜನೆಯಡಿಯಲ್ಲಿ 110 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ವಿಜಯಪುರ ಪಾಸ್ಪೋರ್ಟರ್  ಸೇವಾ ಕೇಂದ್ರ ಸ್ಥಾಪಿಸಲಾಯಿತು.

ಭಾರತೀಯ ಜನತಾ ಪಕ್ಷದ ರಾಜ್ಯ ಮಹಿಳಾ ಮೋಚರ್ಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಸುರಿಸಿಕೊಂಡು ಜನರಿಗೆ ಮರಳು ಮಾಡುತ್ತಿದ್ದಾರೆ. ನಮಗೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಬೇಡ ಕಣ್ಣೀರಿ ಒರೆಸುವ ಮುಖ್ಯಮಂತ್ರಿ ಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾಘಟದ ಅಧ್ಯಕ್ಷರಾದ ಚಂದ್ರಶೇಖರ ಕವಟಗಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ರೈತರಿಗೆ ಮತ್ತು ಸೈನಿಕರಿಗೆ ನೀಡುತ್ತಿರುವ ಗೌರವ ಶ್ಲ್ಯಾಘನೀಯ. ದೇಶದ ಭದ್ರತೆಗೋಸ್ಕರ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿಸುಟವ ನಿಟ್ಟಿನಲ್ಲಿ ಎಲ್ಲಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಎಸ್. ಪಾಟೀಲ, ಮಹಿಳಾ ಮೋಚರ್ಾ ಜಿಲ್ಲಾಧ್ಯಕ್ಷರಾದ ಮಲ್ಲಮ್ಮ ಜೋಗೂರ, ಕಲಾವತಿ, ಶಕುಂತಲಾ, ವಿಜಯಲಕ್ಷ್ಮೀ ಹಮೀದಖಾನೆ,  ಅನುರಾಧ ಕಲಾಲ, ಗೀತಾ ಕುಗನೂರ, ಭಾರತಿ ಭುಯ್ಯಾರ, ರಜನಿ ಸಂಬಣ್ಣಿ, ಶಾಂತಾ ಉತ್ಲಾಸ್ಕರ್, ಗುರುದೇವಿ, ಶಾರದಾ, ಪಾರ್ವತಿ, ಸಾವಿತ್ರಿ, ವಾಣಿ, ಕವಿತಾ, ರೇಣುಕಾ ಬಿಜೆಪಿಯ ಹಲವಾರು ಮಹಿಳಾ ಮೋಚರ್ಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಕಲ್ಪ ಪಾಟೀಲ ಸ್ವಾಗತಿಸಿದರು. ಸುಮಂಗಲಾ ಕೋಟಿ ನೀರೂಪಿಸಿದರು.