ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಬಂಧಿಗಳ ಆರೋಗ್ಯ ತಪಾಸಣೆ

ಧಾರವಾಡ.10: ಯಾವುದೋ ಕೆಟ್ಟ ಘಳಿಗೆಯಲ್ಲಿ ಎಸಗಿದ ಅಪರಾಧಗಳಿಂದ ಬಂಧಿಯಾಗಿರುವ ಮಹಿಳೆಯರು   ಮಾನಸಿಕವಾಗಿ ಕುಗ್ಗಬಾರದು. ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರದೇ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈಶಪ್ಪ ಕೆ ಭೂತೆ ಹೇಳಿದರು.

    ಕೇಂದ್ರ ಕಾರಾಗೃಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎನ್.ಸಿ.ಡಿ ಘಟಕ) ಹಾಗೂ ಜಿಲ್ಲಾ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹದ   ಮಹಿಳಾ ಬಂಧಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಇಂದು ಬೆಳಿಗ್ಗೆ (ಬುಧವಾರದಂದು) ಮುಂಜಾನೆ 10 ಗಂಟೆಗೆ ಮಹಿಳಾ ವಿಭಾಗದಲ್ಲಿ ಜರುಗಿತು.

    ಮಹಿಳಾ ಬಂಧಿಗಳು ತಮ್ಮ ಯಾವುದೇ ಆರೋಗ್ಯದ ಸಮಸ್ಯೆಗಳ ಬಗ್ಗೆ ಹಿಂಜರಿಯದೆ ಸ್ತ್ರೀ ರೋಗ ವೈದ್ಯರೊಂದಿಗೆ ಚಚರ್ಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ಗಿರಿಧರ ಕುಕನೂರ್ ಮಾತನಾಡಿ, ಮಹಿಳಾ ಬಂಧಿಗಳು ಶಿಬಿರದಲ್ಲಿ ಯಾವುದೇ ಸಂಕೋಚವಿಲ್ಲದೆ ತಮ್ಮಲ್ಲಿರುವ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು. 

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧೀಕ್ಷಕರಾದ ಡಾ. ಅನಿತಾ. ಆರ್. ಮಾತನಾಡಿ,  ಸಂಸ್ಥೆಯ ಬಂಧಿಗಳ ಆರೋಗ್ಯವನ್ನು ನೋಡಿಕೊಳ್ಳುವುದು ಕಾರಾಗೃಹದ ಪ್ರಮುಖ ಕರ್ತವ್ಯಗಳಲ್ಲಿ ಒಂದು. ಆ ಕಾರಣಕ್ಕಾಗಿ ನಿಯಮಿತವಾಗಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆರೋಗ್ಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

  ಮಹಿಳಾ ಬಂಧಿಗಳಿಗಾಗಿ ಏರ್ಪಡಿಸಿರುವ ಸಂಪೂರ್ಣ ಆರೋಗ್ಯ ತಪಾಸಣೆಯ ಕಾರ್ಯಕ್ರಮದಲ್ಲಿ ಮಹಿಳಾ ಬಂಧಿಗಳು ತಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ     ಪರಿಹಾರ ಕಂಡುಕೊಳ್ಳಲು,  ತಜ್ಞ ಸ್ತ್ರೀ ವೈದ್ಯರೊಂದಿಗೆ ಮುಕ್ತವಾಗಿ ಚಚರ್ಿಸಲು ಸಹಕಾರಿಯಾಗಿದೆ ಎಂದರು.  

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್ ಚಿನ್ನಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಆರ್.ಎಂ ದೊಡ್ಡಮನಿ, ವೈದ್ಯಾಧಿಕಾರಿಗಳಾದ ಡಾ|| ಸುಜಾತ ಹಸವಿಮಠ, ಡಾ|| ವಾಸಂತಿ ಜೀರಗಲ್, ಡಾ|| ಭಾಗ್ಯರೇಖಾ ಸೇರಿದಂತೆ ಸ್ತ್ರೀ ರೋಗ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಂಸ್ಥೆಯ ಶಿಕ್ಷಕ ಪಿ.ಬಿ ಕುರಬೇಟ್ ಸ್ವಾಗತಿಸಿದರು. ವೈಶಾಲಿ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.