ಕಂಪ್ಲಿ: ಮುಖ್ಯ ಶಿಕ್ಷಕ ವರ್ಗಾವಣೆಗೆ ಒತ್ತಾಯಿಸಿ ಗ್ರಾಮಸ್ಥರ ಮನವಿ

ಕಂಪ್ಲಿ 23: ವಿದ್ಯಾಥರ್ಿನಿಯರ ಜತೆ ಅಸಭ್ಯವಾಗಿ ವತರ್ಿಸುವ ಮುಖ್ಯ ಶಿಕ್ಷಕ ವರ್ಗಾವಣೆಗೆ ಒತ್ತಾಯಿಸಿ ಗ್ರಾಮಸ್ಥರು ಮನವಿ ನೀಡಿದ ಹಿನ್ನೆಲೆಯಲ್ಲಿ ಸುಗ್ಗೇನಹಳ್ಳಿ ಸಹಿಪ್ರಾ ಶಾಲೆಗೆ ಸೋಮವಾರ ಶಿಕ್ಷಣ ಇಲಾಖೆಯ ಹೊಸಪೇಟೆ  ಕ್ಷೇತ್ರ ಸಮನ್ವಯ ಅಧಿಕಾರಿ ಟಿ.ಗುರುರಾಜ್, ಶಿಕ್ಷಣ ಸಂಯೋಜಕ ಎಚ್.ಶಿವರಾಮಪ್ಪ ಭೇಟಿ ನೀಡಿ ಪರಿಶೀಲಿಸಿದರು. 

ಎಸ್ಡಿಎಂಸಿ ಸದಸ್ಯರು, ಪಾಲಕರು, ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಚಚರ್ಿಸಿದರು. ತಾಪಂ ಸದಸ್ಯೆ ಉಮಾದೇವಿ ಮಾತನಾಡಿ, ಮುಖ್ಯ ಶಿಕ್ಷಕ ಪಿ.ಸಿಕಂದರಬಾಷಾ ಶಾಲೆ ದುರಸ್ತಿಗೆ 2017-18ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಪಾಲಕರ ಜತೆ ಸರಿಯಾಗಿ ವರ್ತಿಸುವುದಿಲ್ಲ. ಕೂಡಲೇ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು. 

ಕ್ಷೇತ್ರ ಸಮನ್ವಯ ಅಧಿಕಾರಿ ಟಿ.ಗುರುರಾಜ್ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪಾಲಕರ ದೂರಿಗೂ ಮಕ್ಕಳ ಹೇಳಿಕೆಗೂ ತಾಳೆಯಾಗುತ್ತಿಲ್ಲ. ಮುಖ್ಯಶಿಕ್ಷಕ ಹೊಡೆದಿದ್ದಾಗಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು. ಗ್ರಾಪಂ ಸದಸ್ಯೆ ಸುವರ್ಣಪಾಟೀಲ್, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಯರ್ರಸ್ವಾಮಿ, ಪಾಲಕರಾದ ಎನ್.ಜಡೆಪ್ಪ, ವಿ.ಭೀಮಪ್ಪ, ಕೆ.ವೆಂಕಟನಾರಾಯಣ, ರಾಮಾಂಜನೇಯಲು, ಲಕ್ಷ್ಮಣ, ಎನ್.ಮಂಜುನಾಥ, ಷಣ್ಮುಖ,  ಕರ್ನಾಟಕ ಜನಶಕ್ತಿ ಸಂಘಟನೆ ಗ್ರಾಮ ಅಧ್ಯಕ್ಷ ಭೋವಿ ದೊಡ್ಡ ಬಸಪ್ಪ,  ಇತರರಿದ್ದರು.