ಗ್ರಾಮೀಣ ಯುವಜನತೆಗೆ 'ಆಗೇ ಬಡ್ನೆಕಾ ಸ್ಮಾರ್ಟ್ ಸೌಧ' ಅಭಿಯಾನ

ಬೆಂಗಳೂರು, ಫೆ.11, ಅತಿದೊಡ್ಡ ಡಿಜಿಟಲ್ ಬ್ರೋಕಿಂಗ್ ಸಂಸ್ಥೆಯಾದ 'ಏಂಜಲ್ ಬ್ರೋಕಿಂಗ್' ಗ್ರಾಮೀಣ ಭಾಗದ ಯುವಜನತೆಗೆ ಸ್ಟಾಕ್ ಬ್ರೋಕಿಂಗ್ ಬಗ್ಗೆ ಉಚಿತ ಸಲಹೆ ಒದಗಿಸುತ್ತದೆ. ಇದಕ್ಕಾಗಿ 'ಏಂಜಲ್ ಐಟ್ರೇಡ್' ಎನ್ನುವ ಸೇವೆಯನ್ನು ಪರಿಚಯಿಸಲಾಗಿದ್ದು ಇದರ ಪ್ರಚಾರಕ್ಕಾಗಿ ಸಂಸ್ಥೆಯು 'ಆಗೇ ಬಡ್ನೆಕಾ ಸ್ಮಾರ್ಟ್ ಸೌಧ' ಎನ್ನುವ ಕ್ಯಾಂಪೇನ್ ಗೆ ಚಾಲನೆ ನೀಡಿದೆ.  ಸಾಮಾಜಿಕ ಜಾಲತಾಣ ಸೇರಿದಂತೆ ಟಿಕ್ ಟಾಕ್, ಯುಟ್ಯೂಬ್ ಮತ್ತು ಇತರೆ ವೇದಿಕೆಗಳಲ್ಲಿ ಸಂಸ್ಥೆಯು ಇದರ ಪ್ರಚಾರ ಸಾಮಗ್ರಿಗಳನ್ನು ಹಂಚಿಕೊಳ್ಳುತ್ತಿದೆ. ಇದರಿಂದ ಶ್ರೇಣಿ 2 ಮತ್ತು ಶ್ರೇಣಿ 3 ಪ್ರದೇಶಗಳಿಗೆ ಅನಕೂಲವಾಗಲಿದೆ. ‘ಸ್ಮಾರ್ಟ್‌ ಸೌಧ’ ಅಭಿಯಾನವನ್ನು ಪ್ರಾರಂಭಿಸುವುದರೊಂದಿಗೆ ಕೈಗೆಟುಕುವ ಬೆಲೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬ್ರೋಕಿಂಗ್ ಸೇವೆಗಳನ್ನು ಸಂಯೋಜಿಸುವ ಐಟ್ರೇಡ್ ಪ್ರೈಮ್ ಅನ್ನು ಉತ್ತೇಜಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಹೀಗಾಗಿ ಗ್ರಾಹಕರಿಗೆ ‘ಅಚ್ಚುಕಟ್ಟಾಗಿ’ ವ್ಯಾಪಾರ ಮಾಡಲು ಅಧಿಕಾರ ನೀಡುತ್ತದೆ. ಬ್ರೋಕರೇಜ್ ಶುಲ್ಕವನ್ನು ಶೂನ್ಯಕ್ಕೆ ಕಡಿತಗೊಳಿಸುವ ಮೂಲಕ ದೀರ್ಘಾವಧಿಯ ಬೆಳವಣಿಗೆಯ ಆಸ್ತಿ ವರ್ಗವನ್ನು ಅನುಸರಿಸುವ ಚಿಲ್ಲರೆ ಹೂಡಿಕೆದಾರರಿಗೆ ಈಕ್ವಿಟಿ ಹೂಡಿಕೆಗಳನ್ನು ಆದ್ಯತೆಯ ಮಾರ್ಗವಾಗಿ ಉತ್ತೇಜಿಸಲು ನಾವು ಉದ್ದೇಶಿಸಿದ್ದೇವೆ. ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ಸಿಇಒ ವಿನಯ್ ಅಗ್ರವಾಲ್ ತಿಳಿಸಿದ್ದಾರೆ.