ಬೆಳಗಾವಿ : ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಸುರಿದ ಭಾರಿ ಮಳೆಯ ಅವಾಂತರದಿಂದ ವ್ಯಕ್ತಿ ಯೋರ್ವ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಚರಂಡಿ ಕೊಚ್ವಿಕೊಂಡು ಹೋಗಿದ್ದು, ಇನ್ನೊಂದು ಕಡೆ ಎರಡು ಎಮ್ಮೆಗಳು ಸಿಡಿಲು ಹೊಡೆದು ಮೃತಪಟ್ಟಿರುವ ಘಟನೆ ವರದಿಯಾಗಿವೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ
ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ವ್ಯಕ್ತಿ ಯೋರ್ವ ಕೊಚ್ಚಿಕೊಂಡು ಹೋಗಿದ್ದಾರೆ.
ಧಾರಾಕಾರ ಮಳೆಯ ಕಾರಣಕ್ಕೆ ತುಂಬಿ ಹರಿಯುತ್ತಿರುವ ಚರಂಡಿಯಲ್ಲಿ
ಕಾಲು ಜಾರಿ ಚರಂಡಿಗೆ ಬಿದ್ದ ಗೊಲ್ಲರ ಓಣಿ ನಿವಾಸಿ ಕಾಶಪ್ಪ ಶಿರಟ್ಟಿ (52) ಕೊಚ್ಚಿ ಹೋಗಿರುವ ವ್ಯಕ್ತಿ ಆಗಿದ್ದಾರೆ.
ಚರಂಡಿಯಲ್ಲಿ ಕೊಚ್ಚಿಹೋದ ಕಾಶಪ್ಪ ಶಿರಟ್ಟಿಯನ್ನು ನಗರಸಭೆ ಅಧಿಕಾರಿಗಳು ಹುಡುಕಾಟ ನಡೆಸಿದ್ದು, ನಗರಸಭೆ ಅಧಿಕಾರಿಗಳಿಗೆ ಗೋಕಾಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದಾರೆ.
ಜೆಸಿಬಿ ಯಂತ್ರದಿಂದ ನಗರಸಭೆ ಅಧಿಕಾರಿಗಳು ಪುಟಪಾತ ತೆರವುಗೊಳಿಸುತ್ತಿದ್ದಾರೆ. ಗೋಕಾಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅದೇ ರೀತಿಯಾಗಿ ವರ್ಷದ ಮೊದಲ ಮಳೆಗೆ ಚಿಕ್ಕೋಡಿಯಲ್ಲಿ ಸಿಡಿಲಿನ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆ ಮೃತಪಟ್ಟಿರುವ ಘಟನೆ ನಡೆದಿದೆ.
ಮಹಾದೇವ ಕಲ್ಲಪ್ಪ ಕುರಂದವಾಡ ಎಂಬುವರಿಗೆ ಸೇರಿದ ಈ ಎಮ್ಮೆಗಳು ಸಂಜೆ ಹೊತ್ತಿಗೆ ಸಿಡಿಲು ಜೊತೆಗೆ ಮಳೆ ಗಾಳಿ ಅಬ್ಬರದಿಂದ ಮರದ ಕೆಳಗೆ ಕಟ್ಟಿರುವ ಎಮ್ಮೆಗಳಿಗೆ ಸಿಡಿಲು ಹೊಡೆದಿದೆ.
ಅಂದಾಜು ಎರಡು ಲಕ್ಷ ರೂಪಾಯಿ ನಷ್ಟಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ. ಬಿ ಅವರು ಬೇಟಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
.