ಲೋಕದರ್ಶನ ವರದಿ
‘ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಲು ಅಂಬೇಡ್ಕರರವರ ದೂರದೃಷ್ಟಿ ಕಾರಣ’
ಮುದ್ದೇಬಿಹಾಳ 14: ಸಾಮಾಜಿಕ ಸೇವೆಗಾಗಿ ಸಮಾಜದಲ್ಲಿ ಸಮಾನತೆ ತರಲು ತಮ್ಮ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ಬೇರೆಯವರ ಜೀವನದಲ್ಲಿ ಬದಲಾವಣೆ ತರಲು ತಮ್ಮ ಜೀವನವನ್ನು ತ್ಯಾಗಮಾಡಿದ ಮಹಾನ ವ್ಯಕ್ತಿ ಸಂವಿಧಾನ ಶಿಲ್ಪಿ ಡಾ. ಬಾಬ ಸಾಹೇಬ ಅಂಬೇಡ್ಕರ ರವರನ್ನು ಒಂದು ಜಾತಿಗೆ ಸೀಮೀತಗೊಳಿಸದೇ ಅವರ ತತ್ಪಾದರ್ಶ ಗುಣಗಳನ್ನು ಪ್ರತಿಯೊಬ್ಬ ಭಾರತಿಯನು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕಗೊಳ್ಳುತ್ತದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಸೋಮವಾರ ತಾಲೂಕು ಆಡಳಿತ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಡಾ, ಬಿ ಆರ್ ಅಂಬೇಡ್ಕರವರ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ-ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರರವರ 134 ನೇ ಜಯಂತ್ಯೋತ್ಸವ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ ರವರ ಪ್ರತಿಮೆಗೆ ಗೌರವ ಪೂಜೆ ಸಲ್ಲಿಸಿ ಮಾಲಾರೆ್ಣ ಮಾಡಿ ಕಾರ್ಯಕ್ರಮ ಉದ್ಪಾಟಿಸಿ ಮಾತನಾಡಿದರು.
ದೇಶದ ಮೂಲೆ ಮೂಲೆಗೆ ಸಂಚರಿಸಿ ಇಡಿ ವಿಶ್ವದ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ಶ್ರೇಷ್ಠ ಸಂವಿಧಾನ ರಚಿಸಿದರು. ದೇಶ ಸ್ವಾತಂತ್ರ್ಯ ಪಡೆದ 75 ವರ್ಷಗಳ ನಂತರ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಲು ಅಂಬೇಡ್ಕರ ರವರ ಮುಂದಾಲೋಚನೆ ಮತ್ತು ದೂರದೃಷ್ಟಿ ಕಾರಣವಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತ ಸಮಾಜಗಳ ಧ್ವನಿಯಾಗಿ ನಿಂತು ಅವರಿಗೆ ಎಲ್ಲರಿಗೂ ಸಮಾನತೆಯ ಸ್ವಾಭಿಮಾನದ ಬದಕು ದೊರಕುವಂತೆ ಮೂಡನಂಬಿಕೆಗಳಂತಹ ಅನಿಷ್ಟ ಪದ್ಧತಿ ಅನಾಚಾರಗಳನ್ನು ಬುಡ ಸಮೇತ ಕಿತ್ತೆಸೆಯಲು ಟೊಂಕಕಟ್ಟಿ ನಿಲ್ಲುವ ಮೂಲಕ ಸ್ವಾಭಿಮಾನದ ಸಂಕೇತವಾಗಿ ಹೋರಾಡಿದರು. ಸ್ವಾತಂತ್ರ ನಂತರ ನಮ್ಮ ದೇಶ ಯಾವ ತಳಹದಿಯ ಸಿದ್ಧಾಂತ ಮೇಲೆ ಕಾನೂನುಗಳನ್ನು ಮಾಡಿ ದೇಶವನ್ನು ಮುನ್ನಡಿಸಬೇಕೆಂದು ಯೋಚಿಸಿ ಸಂವಿಧಾನವನ್ನು ರಚಿಸುವ ಮೂಲಕ ಇಡಿ ವಿಶ್ವಕ್ಕೆ ಮಾದರಿಯಾದ ಸಂವಿದಾನ ರಚಿಸಿದ ಮಹಾನ ನಾಯಕರು.
ಬಸವಣ್ಣವರು ಈ ಸಮಾಜದಲ್ಲಿನ ಅನಿಷ್ಟ ಮೂಡನಂಬಿಕೆಗಳ ವಿರುದ್ಧ ಹೋರಾಡಿ ಸಮಾನತೆಯ ಕನಸು ಕಂಡಿದ್ದರು ಅವರ ಆಸೆಯದಂತೆ ಡಾ, ಬಿ ಆರ್ ಅಂಬೇಡ್ಕರವರು ತಮ್ಮ ಬರವಣೆಗೆ ಮೂಲಕ ಸಂವಿದಾನದ ರಚಿಸಿ ಈದೇಶದಲ್ಲಿನ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಸಮಾನ ಹಕ್ಕು ನೀಡುವ ನೀಡುವ ಮೂಲಕ ಸರ್ವಶ್ರೇಷ್ಠರಲ್ಲಿ ಒಬ್ಬರಾದರು. ದೇವರು ಇಲ್ಲವೆಂದು ಯಾರೂ ಕೂಡ ಹೇಳಲಾಗದು ಅದೋಂದು ಶಕ್ತಿ ಅದನ್ನು ಡಾ, ಬಿ ಆರ್ ಅಂಬೇಡ್ಕರವರೂ ನಂಬಿದ್ದರೂ ಆದರೇ ದೇವರ ಹೆಸರಲ್ಲಿ ನಾವಿಂದು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದೇವೆ ಎಂಬುದು ಅವರ ವಾದವಾಗಿತ್ತು ಪ್ರಾಣಿ ಹತ್ಯೆ ಮಾಡುವ ಸಂಪ್ರದಾಯ ಕೈಬಿಡಬೇಕು ಎಂದರು.
ದಲಿತ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಅತ್ಯುನಮ್ನತಯ ಹುದ್ದೆಗಳನ್ನು ಅಲಂಕರಿಸುವಂತೆ ಮಾಡುವುದರೊಂದಿಗೆ ಶಿಕ್ಷಣವಂತ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಅಂದಾಗ ಮಾತ್ರ ಆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ
ಯಾವುದೇ ಸರ್ಕಾರ ಯಾವುದೇ ವ್ಯಕ್ತಿ ಅಧಿಕಾರದಲ್ಲಿದ್ದರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಚೌಕಟ್ಟಿನಲ್ಲಿ ಕೆಲಸವನ್ನು ಮಾಡಬೇಕು. ಸಮಾಜದಲ್ಲಿ ಉನ್ನತರ ಸ್ಥಾನದಲ್ಲಿದ್ದವರು ಪ್ರಮಾಣಿಕತೆ ನಿಸ್ವಾರ್ಥದಿಂದ ಸೇವೆಯನ್ನು ಮಾಡುವುದರ ಮುಖಾಂತರ ಅಂಬೇಡ್ಕರವರು ಕಂಡ ಪ್ರಬುದ್ಧ ಭಾರತದ ಕನಸನ್ನು ನಾವೆಲ್ಲರೂ ಒಗ್ಗೂಡಿ ನನಸಾಗಿಸೋಣ ಎಂದು ಹೇಳಿದರು.
ಹಿರಿಯ ಪತ್ರಕರ್ತ ದಲಿತ ಸಾಹಿತಿ ಪರುಶುರಾಮ ಕೊಣ್ಣೂರ ಹಾಗೂ ದಲಿತ ಹಿರಿಯ ಮುಖಂಡ ಹರೀಶ ನಾಟಿಕಾರ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನ. ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು, ಸದಾ ಅನುಸರಿಸಬೇಕಾಗಿದೆ. ಅಂತಹ ಅವರ ಹಲವು ಸಂದೇಶಗಳನ್ನು ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಇವರು. ಇಡೀ ವಿಶ್ವದಲ್ಲಿಯೇ ಬಹುತೇಕ ರಾಷ್ಟ್ರಗಳು ಆಗಾಗ ಸಂವಿಧಾನವನ್ನು ಬದಲಾಯಿಸುತ್ತಾ ಬಂದಿವೆ ಆದರೇ ಭಾರತ ಸಂವಿಧಾನ 75 ವರ್ಷಗಳ ಗತಿಸಿದರು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ನ್ಯಾಯ ಅನ್ನುವ ನಾಲ್ಕು ಕಂಬಗಳ ನಿಂತು ಕೊಂಡಿದ್ದಲ್ಲದೇ ವಿಶ್ವವಿಖ್ಯಾತ ಸಂವಿಧಾನ ಕೊಡುಗೆ ನೀಡಿದ ಡಾ, ಬಿ ಆರ್ ಅಂಬೇಡ್ಕರವರ ಸಾಧನೆಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಎಂಜಿವಿಸಿ ಕಾಲೇಜಿನ ಪ್ರಾದ್ಯಾಪಕ ಆರ್ ಎಚ್ ಸಜ್ಜನ ಅವರು ವಿಶೇಷ ಉಪನ್ಯಾಯ ನೀಡಿದರು. ತಹಶಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ಧೇಶಕಿ ಬಸಂತಿ ಜಿ ಮಠ, ಸಿಪಿಐ ಮೊಹಮ್ಮದ ಫಸಿವುದ್ಧಿನ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯ-ಕ್ಷೇ ಪ್ರೀತಿ ದೇಗಿನಾಳ, ಶಾಂತಗೌಡ ಪಾಟೀಲ(ನಡಹಳ್ಳಿ) ಚಲವಾದಿ ಸಮಾಜದ ಅಧ್ಯಕ್ಷ ರೇವಣೇಪ್ಪ ಚಲವಾದಿ, ಬಲಭೀಮ ನಾಯಕಮಕ್ಕಳ, ಭಗವಂತ ಕಬಾಡೆ, ವಾಯ್ ಎಚ್ ವಿಜಯಕರ, ಶ್ರೀಕಾಂತ ಚಲವಾದಿ, ನಾಗೇಶ ಭಜಂತ್ರಿ, ಸತೀಶ ಓಸ್ವಾಲ, ಅಶೋಕ ಇರಕಲ್ಲ, ನಾನಪ್ಪ ನಾಯಕ, ಸಿ ಎಸ್ ಬಿರಾದಾರ, ಡಿ ಬಿ ಮೂದೂರ, ದಲಿತ ಯುವ ಮುಖಂಡರಾದ ದೇವರಾಜ ಹಂಗರಗಿ, ಪ್ರಶಾಂತ ಕಾಳೆ, ಶೇಖು ಆಲೂರ, ತಿಪ್ಪಣ್ಣ ದೊಡಮನಿ, ಪ್ರಕಾಶ ಸರೂರ, ಶಿವಪುತ್ರ ಅಜಮನಿ, ಶಿವು ಶಿವಪುರೆ ಸೇರಿದಂತೆ ಹಲವರು ಇದ್ದರು. ಹಿರಿಯ ಪತ್ರಕರ್ತ ಪರುಶುರಾಮ ಕೊಣ್ಣೂರ ನಿರೂಪಿಸಿ ವಂದಿಸಿದರು, ವೈ ಎಚ್ ವಿಜಯಕರ ಸ್ವಾಗತಿಸಿದರು.
ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ ವೃತ್ತದಲ್ಲಿ ಗೌತಮ ಬುದ್ಧ ಟ್ರಸ್ಟ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು, ಸಂಜೆ 4 ಗಂಟೆಗೆ ಡಾ, ಬಿ ಆರ್ ಅಂಬೇಡ್ಕರವರ ಭಾವಚಿತ್ರ ಹೊತ್ತು ಅದ್ದೂರಿ ಮೆರವಣಿಗೆ ನಡೆಸಲಾಯಿತು.