'ಪ್ರತಿಯೊಬ್ಬರು ಕಲಿಸಿದ ಶಿಕ್ಷಕರ ಋಣ ತೀರಿಸುವ ಕಾರ್ಯ ಮಾಡಬೇಕು'

ಲೋಕದರ್ಶನ ವರದಿ

ಮಾಂಜರಿ  27: ಪ್ರತಿಯೊಬ್ಬರು ಸಂಸ್ಕಾರ ಹಾಗೂ ಸುಂಸ್ಕೃತರಾಗಿ ಸಮಾಜದ, ತಾಯಿಯ, ದೇಶದ, ಕಲಿಸಿದ ಶಿಕ್ಷಕರ ಋಣ ತೀರಿಸುವ ಕಾರ್ಯ ಎಲ್ಲರೂ ಮಾಡ ಬೇಕೆಂದು ನೇಜ ಗ್ರಾಮದ ಶಿಕ್ಷಕ ವಿರೇಶ ಪಾಟೀಲ ಹೇಳಿದರು.

ಅವರು ಯಕ್ಸಂಬಾ ಪಟ್ಟಣದ ಕರ್ಲಹೋಂಡಲಿಗೇಶ್ವರ ದೇವಸ್ಥಾನದ ಅಣ್ಣಪೂಣರ್ೇಶ್ವರಿ ಪ್ರಸಾದ ನಿಲಯದಲ್ಲಿ ಇಂದು ಚನಬಸಪ್ಪಾ ಕರಾಳೆ ಪ್ರೌಢಶಾಲೆಯ 1996-97 ನೇ ಸಾಲಿನ ಹತ್ತನೇ ತರಗತಿಯ ಸ್ನೇಹ ಬಳಗದಿಂದ ಗುರುವಂದನೆ ಹಾಗೂ ಸ್ನೇಹ ಸಂಗಮ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ನಿವೃತ್ತ ಶಿಕ್ಷಕ ಎಸ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಲ್ಲರೂ ಸಮಾಜಪರ ಚಿಂತನೆಯಲ್ಲಿ ಸದಾಭಾಗಿಯಾಗಿ ಪೂಜ್ಯರ ಹಾಗೂ ಸಮಾಜವನ್ನು ಗೌರವಿಸಬೇಕೆಂದು ಹೇಳಿದರು, ಮತ್ತು ಖ್ಯಾಸ್ಯ ಟಿವ್ಹಿ ಕಲಾವಿಧ ಎಸ್.ಪಿ.ಹೊಸಪೇಟೆ ಮತ್ತು ಮುಖ್ಯಾಧ್ಯಾಪಕ ಎಸ್.ಆರ್ ಡೋಂಗರೆ ನಗೆಹಬ್ಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಎಮ್.ಎ.ಚೌಗುಲಾ, ಎಸ್.ಟಿ.ಲಾಂಡೆ, ಎಮ್.ವ್ಹಿ.ಮುಕರೆ, ಎ.ಕೆ.ರೇಂದಾಳೆ, ಬಿ.ಎಮ್.ಸಂಗನಾಯಕರ, ಬಿ.ಎಸ್.ಮಜಗಾಂವೆ, ಐ.ಎಸ್.ಮಾಳಿ, ಬಿ.ಎ.ಮುತ್ನಾಳೆ, ಎಸ್.ಡಿ.ಕರಂಗಳೆ ಮತ್ತು ಕೆ.ವ್ಹಿ.ಮಾಳಗೆ ಯವರನ್ನು ಸನ್ಮಾನಿಸಿದರು, ನಂತರ ಶಿಕ್ಷಕರು ಮಾತನಾಡಿದರು, ನಂತರ ಪಾದಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. 

ಮಹೇಶ ಬಾಕಳೆ ಸ್ವಾಗತಿಸಿದರು, ಅಣ್ಣಾಸಾಹೇಬ ಸಾತ್ವರ ನಿರೂಪಿಸಿದರು, ಭರತ ವರೂಟೆ ವಂದಿಸಿದರು, ಸಂತೋಷ ದಡ್ಡಿಕರ ಹಾಗೂ ಸ್ನೇಹಿತರು ಭಕ್ತಿ ಗೀತೆಗಳನ್ನು ಹಾಡಿದರು, ಗುರು ಹಿರೇಮಠ ಧಾಮರ್ಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.