ಮಾಂಜರಿ 06: ಜೀವನದಲ್ಲಿ ಕೇವಲ ಅಂಕಗಳೇ ನಿರ್ಣಾಯಕವಲ್ಲ. ಎಷ್ಟೇ ಅಂಕ ಪಡೆದರೂ ಜೀವನದಲ್ಲಿ ಗುರಿ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಯಶಸ್ಸು ಸಾಧಿಸಲು ಮುಂದಾಗುವಂತೆ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಹೇಳಿದರು.
ಅವರು ಮಂಗಳವಾರದಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲೆಯಲ್ಲಿ ನಡೆದ ಎಸ್ಎಸ್ಎಲ್ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶೇ. 90 ಅಂಕಗಳಿಗಷ್ಟೇ ಮೀಸಲಾಗದೇ ಮುಂದಿನ ವ್ಯಾಸಂಗದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಗುರಿಗೆ ಅನುಗುಣವಾಗಿನಿರಂತರ ಅಭ್ಯಾಸ ಮಾಡಬೇಕು. ಕಲಿತ ಸಂಸ್ಥೆಗೆ, ತಂದೆ ತಾಯಿಗಳಿಗೆ, ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು. ಕೆಎಲ್ಇ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು. ಸಂಸ್ಕಾರ, ಸಂಸ್ಕೃತಿಯೊಂದಿಗೆ ಪಡೆದ ಶಿಕ್ಷಣದೊಂದಿಗೆಉನ್ನತ ಗುರಿ ಶೋಧಿಸಿ ಸಮಾಜಮುಖಿ ಕೆಲಸ ಮಾಡುವಂತೆ ಕರೆ ನೀಡಿದರು.
ಸನ್ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಂಕಲಿಯಲ್ಲಿ ಇರುವ ಕೆಎಲ್ಇ ಸಂಸ್ಥೆಯ ಶ್ರೀಮತಿ ಶಾರದಾ ಕೋರೆ ಪ್ರೌಢ ಶಾಲೆ ಅಂಕಲಿ ವಿದ್ಯಾರ್ಥಿಗಳಾದ ಕುಮಾರಿ. ಅಕ್ಷತಾ ಈಶ್ವರ ಹಿಂಗ್ಲಜೆ ಇವಳು ಶೇ. 98.72 ಅಂಕ ಪಡೆದು ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗೂ ಕುಮಾರ ಸಿದ್ದಾರ್ಥ ರಾವಸಾಹೇಬ ಪಾಟೀಲ ಇವನು ಶೇ. 98.40 ಅಂಕ ಪಡೆದು ದ್ವಿತಿಯ ಸ್ಥಾನ ಹಾಗೂ ನಿಶಾ ಮಹೇಶ ಕೋಳಿ ಶೇ. 97.60 ಅಂಕ ಪಡೆದು ಕೇಂದ್ರಕ್ಕೆ ತೃತಿಯ ಸ್ಥಾನ ಪಡೆದು ಶಾಲೆಯ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಎಂದು ಡಾ ಪ್ರಭಾಕರ್ ಕೋರೆ ಹೇಳಿದರು.
ಇಂದು ನಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಉಪ ಪ್ರಾಚಾರ್ಯ ಜ್ಯೋತಿ ತಮಗೊಂಡ ಶಿಕ್ಷಕರಾದ ಬಿ ಎಸ್ ಅಂಬಿ, ಅಕ್ಷತಾ ಮಾನೆ, ವಿನಾಯಕ್ ಪಾಟೀಲ್, ಅಜಿತ್ ಶಿರಗಾವಿ, ಬಿ ಎಸ್ ಮಾನೆ, ಸಚಿನ್ ಬಾಬರ್, ಎಂ ಎಸ್ ಸಾಲೊಂಕೆ, ಕೆ ಬಿ ಶಿಂಧೆ, ವಿಜಯ್ ನಾಯಕ್, ವಿಕಾಸ್ ಡಿಗ್ಗೇವಾಡಿ, ಎ ಡಿ ಜಾಧವ್, ಎಂ ಆರ್ ನಾಗರಾಜ್, ಎಸ್ ಎಸ್ ನಿಡುಗುಂದೆ, ಸಿ ಬಿ ಚೌಗುಲಾ, ಎಸ್ ಕೆ ಕಾಂಬಳೆ ಹಾಗೂ ಇನ್ನಿತರರು ಹಾಜರಿದ್ದರು.
ಶೇ. 90 ಅಂಕಗಳಿಗಷ್ಟೇ ಮೀಸಲಾಗದೇ ಮುಂದಿನ ವ್ಯಾಸಂಗದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಗುರಿಗೆ ಅನುಗುಣವಾಗಿ ನಿರಂತರ ಅಭ್ಯಾಸ ಮಾಡಬೇಕು.
ಡಾ ಪ್ರಭಾಕರ್ ಕೋರೆ
ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ