‘ಅಂಹಿಸೆ, ತ್ಯಾಗದ ದ್ಯೂತಕ ಭಗವಾನ್ ಮಾಹಾವೀರ: ಶಾಸಕ ಶಿವಣ್ಣನವರ

'Lord Mahavira is the embodiment of non-violence and sacrifice': MLA Shivannavara

ಬ್ಯಾಡಗಿ 12 :  ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಏರಿ​‍್ಡಸಿದ್ದ ಭಗವಾನ ಮಹಾವೀರ ಜಯಂತಿ ಸಮಾರಂಭದಲ್ಲಿ ಬಸವರಾಜ್ ಶಿವಣ್ಣನವರು ಮಹಾವೀರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮಾತನಾಡಿದರು.   ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿ ಈ ಕ್ಷೇತ್ರಗಳಿಗೆ ಭದ್ರ ಬುನಾದಿ ಹಾಕಿದವರು ಜೈನ ಸಮುದಾಯ’ ಮತ್ತು  ‘ಅಂಹಿಸಾವಾದಿಗಳಾಗಿರುವ ಜೈನ್ ಸಮುದಾಯ ತ್ಯಾಗ, ಪ್ರೀತಿ, ಮಮತಾಮಯಿ ಗುಣ ಹೊಂದಿರುವರು’ ಎಂದು ಹೇಳಿದರು.

ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಮಾತನಾಡಿ ಮಹಾವೀರರು ಸತ್ಯ ಸಾಕ್ಷಾತ್ಕಾರ ತ್ಯಾಗ ಸಂಯಮ ಅವಿರತ ಸಾಧನೆಯಿಂದ ಜೀವನದ ಪರಮೋನ್ನತ ಸ್ಥಿತಿ ಹೊಂದಲು ಸಾಧ್ಯ ಮಹಾವೀರರ ಬೋಧನೆಗಳಾದ ಅಹಿಂಸೆ ಸತ್ಯಮಾರ್ಗ ಆಸ್ತಿಯ ಬ್ರಹ್ಮಚಾರ್ಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನದ ಜೊತೆಗೆ ಮುಕ್ತಿ ಗುರಿಯನ್ನು ಕೂಡ ತಲುಪಲು ಸಾಧ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ಜೈನ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶಿವ ರಾಯಪ್ಪ ಅಪ್ಪಣ್ಣನವರ್‌. ಹೈಕೋರ್ಟ್‌ ವಕೀಲರಾದ ನಾಗರಾಜ ಅಪ್ಪಣ್ಣನವರ್‌. ಮುಖಂಡರಾದ ನಾಗರಾಜ ಆನ್ವೆರಿ, ದುರ್ಗೇಶ್ ಗೋಣೆಮ್ಮನವರ. ಬಾಹುಬಲಿ ಜೈನ್‌. ಜಯಪ್ಪ ಕಡೂರ.ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಸಮಾಜದ ಉಪಸ್ಥಿತರಿದ್ದರು.