ಶಾಲಾ ಶಿಕ್ಷಕ-ಶಿಕ್ಷಕಿಯರ 10 ದಿನಗಳ ಇಂಡಕ್ಷನ್ ತರಬೇತಿ ಕಾರ್ಯಕ್ರಮ

ಲೋಕದರ್ಶನವರದಿ

ಧಾರವಾಡ22: ಬೋಧನಾ ಪೂರ್ವಸಿದ್ಧತೆ ಇಲ್ಲದೇ ತರಗತಿ ಪ್ರವೇಶಿಸಿದರೆ ಅದು ವಿದ್ಯಾಥರ್ಿಗಳ ಕಲಿಕೆಯಲ್ಲಿ ಬದಲಾವಣೆ ತರಲಾರದು. ತರಗತಿಗಳ ಪಠ್ಯವಸ್ತುವನ್ನು ಆಧರಿಸಿ ಬೋಧನೆ ಮಾಡಬೇಕಾದ ಸಂಗತಿಗಳಿಗೆ ಪೂರಕವಾಗಿ ಶಿಕ್ಷಕರು ನಿತ್ಯವೂ ತಪ್ಪದೇ ಹೋಂವರ್ಕ ಮಾಡಲೇಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಇಲ್ಲಿಯ ಡಯಟ್ ಆವರಣದಲ್ಲಿ ನೂತನವಾಗಿ ನೇಮಕಗೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ 10 ದಿನಗಳ ಇಂಡಕ್ಷನ್ ತರಬೇತಿ ಶಿಬಿರವನ್ನು ಉದ್ಘಾಟಿಸಿಲಾಗಿತು. 

ಅನಂತ ನಿರೀಕ್ಷೆಗಳನ್ನು ಹೊತ್ತುಕೊಂಡು ಶಾಲಾ ಹೊಸ್ತಿಲನ್ನು ತುಳಿದ ವಿದ್ಯಾಥರ್ಿಗಳಿಗೆ ಎಲ್ಲಿಯೂ ನಿರಾಸೆ ಕಾಯ್ದಿರಬಾರದು. ಅವರ ಎಲ್ಲ ಪ್ರಶ್ನೆ-ಪ್ರಮೇಯಗಳಿಗೆ ಶಾಲಾ ಅಂಗಳದಲ್ಲಿ ನಮ್ಮ ಶಿಕ್ಷಕ-ಶಿಕ್ಷಕಿಯರಿಂದ ಸೂಕ್ತ ಪರಿಹಾರ ಪ್ರಾಪ್ತವಾಗಬೇಕು. ಭಾಷಾ ಪ್ರೌಢಿಮೆ, ದೇಶದ ಘನತೆ, ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ ಸೇರಿದಂತೆ ಅನೇಕ ಕಲಿಕಾ ಸಂಗತಿಗಳಲ್ಲಿ ವಿದ್ಯಾಥರ್ಿಗಳ ಹತ್ತು-ಹಲವು ಕೊರತೆಗಳನ್ನು ಅನುಭವಿಸುತ್ತಿದ್ದಾರೆ ಎಂದೂ ಮೇಜರ್ ಹಿರೇಮಠ ಹೇಳಿದರು. 

ಮುಖ್ಯ ಅತಿಥಿಯಾಗಿದ್ದ ಸಿಸ್ಲೆಪ್-ಕನರ್ಾಟಕ ಸಂಸ್ಥೆಯ ನಿದರ್ೆಶಕ ಬಿ.ಎಸ್. ರಘುವೀರ ಮಾತನಾಡಿ, ಶಿಕ್ಷಕ-ಶಿಕ್ಷಕಿಯರಲ್ಲಿ ಆತ್ಮವಿಶ್ವಾಸ, ವಿಷಯ ಜ್ಞಾನಶಕ್ತಿ, ಬೋಧನಾ ಬದ್ಧತೆಗೆ ಎಂದೂ ಕೊರತೆ ಉಂಟಾಗಬಾರದು. ಉತ್ಕೃಷ್ಟ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಶಿಕ್ಷಕ ವೃತ್ತಿಯ ಘನತೆಗೆ ಎಲ್ಲೂ ಕುಂದುಂಟಾಗದಂತೆ ಸದಾ ಎಚ್ಚರಿಕೆ ವಹಿಸಬೇಕು ಎಂದರು. 

ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಮಾತನಾಡಿ, ಪ್ರಸ್ತುತ ಒಂದೇ ಶಾಲಾ ಆವರಣದಲ್ಲಿ 6 ರಿಂದ 12ನೆಯ ತರಗತಿಯವರೆಗೆ ಕನರ್ಾಟಕ ಪಬ್ಲಿಕ್ ಸ್ಕೂಲ್ ನೀತಿ ಅಳವಡಿಕೆ ಅನುಷ್ಠಾನಗೊಳ್ಳುತ್ತಿದ್ದು, ಶಿಕ್ಷಕರು ಅತಿ ಹೆಚ್ಚು ಕ್ರಿಯಾಶೀಲರಾಗಿ ಕಾಯರ್ೊನ್ಮುಖರಾಗುವ ಅಗತ್ಯವಿದೆ. ಕನರ್ಾಟಕ ಸಿವ್ಹಿಲ್ ಸೇವಾ ನಿಯಮಗಳನ್ನು ಅರಿತುಕೊಂಡು ಸರಕಾರದ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಡಯಟ್ ಹಿರಿಯ ಉಪನ್ಯಾಸಕಿ ಮಂಗಳಾ ಪಾಟೀಲ ಮಾತನಾಡಿದರು. ಹಿರಿಯ ಉಪನ್ಯಾಸಕ ವೈ.ಬಿ. ಬಾದವಾಡಗಿ, ಉಪನ್ಯಾಸಕಿ ವಿಜಯಲಕ್ಷ್ಮಿ ಹಂಚಿನಾಳ ಇದ್ದರು. 

ಡಯಟ್ ಉಪನ್ಯಾಸಕಿ ಡಾ. ರೇಣುಕಾ ಅಮಲಝರಿ ಸ್ವಾಗತಿಸಿದರು. 'ಜೀವನ ಶಿಕ್ಷಣ'  ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ವಂದಿಸಿದರು. ಚಿಕ್ಕೋಡಿ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನೂತನವಾಗಿ ನೇಮಕಗೊಂಡ 104 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಈ 10 ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.