19ರಂದು ಪುಸ್ತಕ ಬಿಡುಗಡೆ, ಕಾವ್ಯ ಸಂವಾದ ಕಾರ್ಯಕ್ರಮ

ಲೋಕದರ್ಶನ ವರದಿ

ಕೊಪ್ಪಳ 14: ಕುಕನೂರುನ ತಾಯಿ ಪ್ರಕಾಶನ 25ನೇ ರಜತೋತ್ಸವ ಪೂರೈಸುತ್ತಿರುವ ನಿಮಿತ್ಯ ಇದೇ ಮೇ ದಿ.19 ರಂದು ರವಿವಾರ ಬೆಳಿಗ್ಗೆ 11-30ಕ್ಕೆ ನಗರದ ಹಿಂದಿ ಬಿಎಡ್ ಕಾಲೇಜ ಭವನದಲ್ಲಿ ಪುಸ್ತಕ ಬಿಡುಗಡೆ ಮತ್ತು ಕಾವ್ಯ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಕನೂರುನ ತಾಯಿ ಪ್ರಕಾಶನದ ಮುಖ್ಯಸ್ಥರಾದ ಡಾ.ಕೆ.ಬಿ.ಬ್ಯಾಳಿ ಹೇಳಿದರು.

ಅವರು ಮಂಗಳವಾರದಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಪುಸ್ತಕ ಬಿಡುಗಡೆ ಮತ್ತು ಕಾವ್ಯ ಸಂವಾದ ಕಾರ್ಯಕ್ರಮಕ್ಕೆ ಬಳ್ಳಾರಿ ವಲಯದ ಐಜಿಪಿ ಹಾಗೂ ಇತಿಹಾಸ ಮತ್ತು ಭಾಷಾ ತಜ್ಞರಾದ ಎಂ.ನಂಜುಂಡಸ್ವಾಮಿ ಚಾಲನೆ ನೀಡುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಶೋಧಕರಾದ ಹನುಮಾಕ್ಷಿ ಗೋಗಿ ವಹಿಸುವರು. ಡಾ.ಕೆ.ಬಿ. ಬ್ಯಾಳಿಯವರ ಉಮರನ ಆಧ್ಯಾತ್ಮದಂಗಡಿಯ ರುಬಾಯಿಗಳು(ಅನುವಾದ) ಭಾರತದ ಮೂಲ ನಿವಾಸಿಗಳು ಹಾಗೂ ಮುನಿಯಪ್ಪ ಹುಬ್ಬಳ್ಳಿಯವರ ಹಾಯಿಕುಗಳು,ಪ್ರೋ.ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಆಕಳವಾಡಿಯವರ ರೈತರ ಆತ್ಮಹತ್ಯೆಗಳು, ನಾಗರಿಕತೆಗೊಂದು ಕಳಂಕ ಎಂಬ ಕೃತಿಗಳನ್ನು ಹಂಪಿ ವಿ.ವಿ.ಬುಡಕಟ್ಟು ಅಧ್ಯಯನ ವಿಭಾಗ ಕನ್ನಡ ಡಾ.ಕೆ.ಎಂ.ಮೇತ್ರಿ ಹಾಗೂ ಕರ್ನಾಟಕ್ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ)  ಬಿಡುಗಡೆಗೊಳಿಸುವರು.

ನಂತರ ಮಧ್ಯಾಹ್ನ ಡಾ.ಕೆ.ಬಿ. ಬ್ಯಾಳಿಯವರ ಮಧು ಮಂದಿರ ಕೃತಿಯ ಕಾವ್ಯ ಸಂವಾದ ಕಾರ್ಯಕ್ರಮದ ಸಾನಿಧ್ಯವನ್ನು ಕುಕನೂರುನ ಪೂಜ್ಯ ಮಹಾದೇವ ದೇವರು ವಹಿಸುವರು. ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಚಾಲನೆ ನೀಡುವರು, ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಸಂವಾದ ನಡೆಸಿಕೊಡುವರು, ಪ್ರೋ.ಗುರುಸ್ವಾಮಿ ಕೊಟ್ಟೂರು, ಪ್ರೋ.ವಿಜಯ್ ವೈದ್ಯ, ಪ್ರೋ.ಶಿ.ಕಾ.ಬಡಿಗೇರ, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಸಂವಾದದಲ್ಲಿ ಇರುತ್ತಾರೆ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಾದ ರುದ್ರಪ್ಪ ಭಂಡಾರಿ, ಸಾಹಿತಿ ಹನುಮಂತಪ್ಪ ಅಂಡಗಿ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ ಮತ್ತು ಕಾವ್ಯ ಸಂವಾದ ಕಾರ್ಯಕ್ರಮಕ್ಕೆ ಸಾಹಿತಿಗಳು, ಲೇಖಕರು, ಶಿಕ್ಷಕರು, ಉಪನ್ಯಾಸಕರು ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವೀಗೊಳಿಸುವಂತೆ ಮನವಿ ಮಾಡಿದರು.