ಕಾರಂಜಿಮಠದಲ್ಲಿ 283ನೇ ಶಿವಾನುಭವ

283rd Shiva experience at Karanji Math

ಕಾರಂಜಿಮಠದಲ್ಲಿ 283ನೇ ಶಿವಾನುಭವ 

ಬೆಳಗಾವಿ  30 : ಶಿವಬಸವನಗರ   ಕಾರಂಜಿ ಮಠದ  ಶಿವಾನುಭವ  ಮಂಟಪದಲ್ಲಿ  283ನೇ ಶಿವಾನುಭವ  ಕಾರ್ಯಕ್ರಮವು  ಸೋಮವಾರ  ದಿನಾಂಕ 3  ಫೆಬ್ರುವರಿ  2025ರಂದು ಸಾಯಂಕಾಲ 6  ಗಂಟೆಗೆ  ಜರುಗುವುದು.  ಕಾರ್ಯಕ್ರಮದ  ಸಾನ್ನಿಧ್ಯವನ್ನು  ಪೂಜ್ಯ  ಮ.ನಿ.ಪ್ರ.  ಗುರುಸಿದ್ಧ ಮಹಾ ಸ್ವಾಮಿಗಳು  ವಹಿಸಲಿದ್ದು,  ಡಾ.  ಗುರುದೇವಿ  ಹುಲೆಪ್ಪನವರಮಠ  ಕಾರ್ಯಕ್ರಮದ  ಅಧ್ಯಕ್ಷತೆ ವಹಿಸುವರು.  ಜಿಲ್ಲಾ  ವಯಸ್ಕರ  ಶಿಕ್ಷಣ  ಇಲಾಖೆಯ  ಮುಖ್ಯಸ್ಥರಾದ  ಜಯಶ್ರೀ  ಎ .ಎಂ. "ಶರಣರ  ಆರ್ಥಿಕ  ಚಿಂತನೆಗಳು"  ಎಂಬ  ವಿಷಯ  ಕುರಿತು  ಉಪನ್ಯಾಸ  ನೀಡುವರು.  ಇದೇ ಸಂದರ್ಭದಲ್ಲಿ  ನಿವೃತ್ತ  ಪ್ರಾಧ್ಯಾಪಕರಾದ    ಮಕ್ಕಳಿಂದ  ಪ್ರಾರ್ಥನೆ  ಜರುಗುವುದು  ಎಂದು ಮಠದ ಪ್ರಕಟಣೆಯಲ್ಲಿ  ತಿಳಿಸಲಾಗಿದೆ.