ಕೋರವಾರ ಗ್ರಾಮದಲ್ಲಿ 68ನೇ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರನೆ

68th Dr. BR Ambedkar's Mahaparinirvana Day Celebration at Korawara Village

ಕೋರವಾರ ಗ್ರಾಮದಲ್ಲಿ 68ನೇ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರನೆ 

ದೇವರಹಿಪ್ಪರಗಿ 07 :ತಾಲೂಕಿನ ಕೋರವಾರ ಗ್ರಾಮದಲ್ಲಿ 68ನೇ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಪ್ರಮುಖರಾದ  ಅಪ್ಪುಗೌಡ ಪೊಲೀಸಪಾಟೀಲ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾಪಂ ಅಧ್ಯಕ್ಷರಾದ ರಾಜಶೇಖರ ಛಾಯಾಗೋಳ ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಅಶೋಕ ಕುಳೆ ಕುಮಟಗಿ, ಸಂಗಮೇಶ ಮ್ಯಾಗೇರಿ, ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಶ್ರೀಶೈಲ ತಾಳಿಕೋಟಿ, ನಿಸಾರ್ ಮೊಮಿನ್, ದಯಾನಂದ ಗುತ್ತರಗಿ ಮಠ, ಅರವಿಂದ ರಾಠೋಡ,ಯಾಸೀನ್ ಒಡಗೇರಿ, ಶಿವು ಜಂಬುಗೋಳ, ಚಿತ್ರಸೇನಾ ಆಲಗೂರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳಾದ ಅರುಣ ಕೊರವಾರ, ಮಲ್ಲಪ್ಪ ಮಸಬಿನಾಳ, ರಫೀಕ್ ಮೊಮೀನ, ಫಯಾಜ್ ಯಲಗೋಡ, ಮಲಿಕಸಾಬ ಪಟ್ಟಣ, ನಾಗೇಶ ಮ್ಯಾಗೇರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.ಫೋಟೋ 7ಡಿಎಚಪಿ1