ಬಾಗಲಕೋಟ 1: ದಿ: 30/04/2025ರಂದು ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ ಭಾಗವಾಗಿ, ರೀಚ್ ಸಂಸ್ಥೆ ಮತ್ತು ವಿವಿಧ ಧರ್ಮಗಳ ಧರ್ಮಗುರುಗಳು ಬಾಲ್ಯವಿವಾಹವನ್ನು ತಡೆಯುವ ಉದ್ದೇಶದಿಂದ ಸಮೂಹ ಜಾಗೃತಿಯ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ಮೂಲಕ ಮುಂಬರುವ ಮದುವೆ ಕಾಲವಾದ ಅಕ್ಷಯ ತೃತೀಯ ದಿನದಂದು ಯಾವುದೇ ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಲಾಗುತ್ತದೆ.
ಧರ್ಮಗುರುಗಳು ಮತ್ತು ರೀಚ್ ಸಂಸ್ಥೆ ತಮ್ಮ ಜಂಟಿ ಘೋಷಣೆಯಲ್ಲಿ, ಬಾಲ್ಯವಿವಾಹ ಗಂಭೀರ ಅಪರಾಧವಾಗಿದ್ದು, ವಿವಾಹ ನಡೆಸುವುದು ಅಥವಾ ಸಹಾಯ ಮಾಡುವವರು ಕಾನೂನು ಬಾಹಿರ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮ ಗುರುಗಳಿಂದ ದೊರೆತ ಭಾರೀ ಬೆಂಬಲದಿಂದ ಈ ಅಕ್ಷಯ ತೃತೀಯದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹವಾಗದಂತೆ ಮಾಡಲು ಸಾಧ್ಯವೆಂದು ನೀರೀಕ್ಷಿಸಲಾಗಿದೆ. ಇದರಿಂದ ಮಕ್ಕಳ ಹಕ್ಕುಗಳನ್ನು ರಕ್ಷಿಸುವತ್ತ ಸಮುದಾಯದ ಬದ್ಧತೆಯೂ ಪೋರಕವಾಗಿದೆ.
ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (ಎಖಅ) ನೇತೃತ್ವದ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ ಭಾಗವಾಗಿ ದೇಶದಾದ್ಯಂತ 416 ಜಿಲ್ಲೆಗಳಲ್ಲಿ 250ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಕ್ಷಯ ತೃತೀಯ ಹಾಗೂ ಮದುವೆ ಕಾಲಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲಾ ಧರ್ಮಗಳ ಧರ್ಮಗುರುಗಳು, ರೀಚ್ ಸಂಸ್ಥೆ ನೇತೃತ್ವದ ಜಾಗೃತಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಯಾವುದೇ ದೇವಾಲಯ, ಮಸೀದಿ, ಚರ್ಚ್ ಅಥವಾ ಗುರ್ದ್ವಾರಾದಲ್ಲಿ ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಲಾಗುತ್ತದೆ.
ಅಭಿಯಾನದ ಭಾಗವಾಗಿ, ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. “ಇಲ್ಲಿ ಯಾವುದೇ ಕಾರಣಕ್ಕೂ 18 ವರ್ಷದೊಳಗಿನ ಹೆಣ್ಣು ಮಕ್ಕಳ ಮತ್ತು 21 ವರ್ಷದೊಳಗಿನ ಗಂಡು ಮಕ್ಕಳ ಮದುವೆಗೆ ಅಥವಾ "ಬಾಲ್ಯವಿವಾಹಕ್ಕೆ” ಅವಕಾಶವಿಲ್ಲ, ಕಾನೂನಿನಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.” ಎಂಬ ಸ್ಪಷ್ಟ ಸಂದೇಶವಿರುವ ಪೋಸ್ಟರ್ಗಳು ಹಾಗೂ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಎಖಅ ಬೆಂಬಲಿತ ಅಒಈಋ ಅಭಿಯಾನವು 2030ರೊಳಗೆ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಕಾನೂನು ಹಸ್ತಕ್ಷೇಪ, ಜನಜಾಗೃತಿ ಮತ್ತು ಸಮುದಾಯದ ಸಕ್ರಿಯತೆಯಿಂದ ಕಾರ್ಯನಿರ್ವಹಿಸುತ್ತಿದೆ.
ಎಣ ಖರ ಜಿಠ ಅಟಜಡಿಜಟಿ (ಎಖಅ) ಎಂಬುದು ಮಕ್ಕಳ ರಕ್ಷಣೆಗೆ ವಿಶ್ವದ ಅತಿದೊಡ್ಡ ಜಾಲವಾಗಿದ್ದು, ಈ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಮತ್ತು 5 ಕೋಟಿ ಜನರು ಬಾಲ್ಯವಿವಾಹದ ವಿರುದ್ಧ ಪಣ ತೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ರೀಚ್ ಸಂಸ್ಥೆ, ಜಿಲ್ಲಾಡಳಿತ, ಧರ್ಮಗುರುಗಳು ಹಾಗೂ ಸಮುದಾಯದೊಂದಿಗೆ ಕಾರ್ಯನಿರ್ವಹಿಸಿ ಬಾಲ್ಯವಿವಾಹಗಳನ್ನು ತಡೆಯಲು ಸಾಧ್ಯವಾಗಿದೆ.
ಎಲ್ಲಾ ಸಹಭಾಗಿತ್ವದ ಸ್ವಯಂ ಸೇವಾ ಸಂಸ್ಥೆಗಳು ಎಖಅ ಸ್ಥಾಪಕ ಭುವನ್ ರಿಭು ಅವರ 2023ರ ಪುಸ್ತಕ ತಂತ್ರಾಧಾರಿತ ಮಾರ್ಗಸೂಚಿಯಂತೆ ಕೆಲಸ ಮಾಡುತ್ತಿವೆ. ಈ ಮಾರ್ಗಸೂಚಿಗಳು 2024ರ ಭಾರತೀಯ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನೂ ಅನುಸರಿಸುತ್ತವೆ.
“ಇದು ಬಾಲ್ಯವಿವಾಹ ಎಂಬ ಅಘಾತಕಾರಿ ಅಪರಾಧದ ವಿರುದ್ಧದ ನಮ್ಮ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ರೀಚ್ ಸಂಸ್ಥೆಯ ಸಂಯೋಜಕರು ಕುಮಾರರವರು ಧರ್ಮಗುರುಗಳಿಂದ ಬಂದ ಭಾರೀ ಬೆಂಬಲವನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ದೇಶದಲ್ಲಿ ಬಾಲ್ಯವಿವಾಹ ವಿರೋಧಿ ಅಗತ್ಯ ಜಾಗೃತಿ ಕೊರತೆಯಾಗಿದೆ. ಬಹುತೇಕ ಜನರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ (ಪಿಸಿಎಂಎ), 2006ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧವೆಂಬ ಅರಿವು ಇಲ್ಲ. ಇದರಲ್ಲಿ ಭಾಗವಹಿಸುವ ಅಥವಾ ಸೇವೆ ನೀಡುವ ಎಲ್ಲರಿಗೂ 2 ವರ್ಷದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ಅಥವಾ ಎರಡೂ ವಿಧಿಸಲಾಗುತ್ತದೆ. ಬಾಲ್ಯವಿವಾಹವಾದ ಗಂಡಿನ ಮೇಲೆ ಪೋಕ್ಸೋ ಅಡಿ ಪೋಲೀಸ್ ದೂರು ದಾಖಲಾಗುತ್ತದೆ.
ಇದರಲ್ಲಿ ಬಾಗವಹಿಸಿದವರಿಗೆ, ಅವಕಾಶ ನೀಡಿದವರು, ಅಡುಗೆ ಮಾಡುವವರು, ಅಲಂಕಾರಕಾರರು, ಮದುವೆ ಮಂಟಪದ ಮಾಲಿಕ, ಬ್ಯಾಂಡ್ ಮ್ಯೂಸಿಕ್ ನೀಡುವವರು, ಲಗ್ನ ಪತ್ರಿಕೆ ಮುದ್ರಣಕಾರರು ಹಾಗೂ ಮದುವೆ ನೆರವೇರಿಸುವ ಪಂಡಿತ್ ಅಥವಾ ಮೌಲವಿಯರೂ ಅಪರಾಧದಲ್ಲಿ ಭಾಗಿಯಾದವರಾಗುತ್ತಾರೆ. ಈ ಕಾರಣದಿಂದಲೇ ಪಂಡಿತ್, ಮೌಲಿವಿ, ಪುರೋಹಿತರ ನಡುವೆ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಯಿತು. ಬಾಲ್ಯವಿವಾಹ ಅಂದರೆ ಮಕ್ಕಳಿಗೆ ಬಲಾತ್ಕಾರ ಮಾಡಿದಂತೆ. 18 ವರ್ಷಕ್ಕೂ ಕಡಿಮೆ ವಯಸ್ಸಿನ ಹುಡುಗಿಯರೊಂದಿಗೆ ಮದುವೆಯಾದಲ್ಲಿ ಲೈಂಗಿಕ ಸಂಬಂಧ ಹೊಂದಿದರೆ, ಅದು ಪಾಕ್ಸೋ ಕಾಯ್ದೆಯಡಿ ಬಲಾತ್ಕಾರ ಎಂದು ಪರಿಗಣಿಸಲಾಗುತ್ತದೆ.
ಸಂತೋಷಕರ ಸಂಗತಿ ಎಂದರೆ ಇಂದು ಪಂಡಿತರು ಮತ್ತು ಮೌಲವಿಗಳು ಇದನ್ನು ಅರಿತಿದ್ದು, ಈ ಅಭಿಯಾನಕ್ಕೆ ಬೆಂಬಲ ನೀಡುತ್ತಾ ತಮ್ಮಿಂದಲೇ ಬಾಲ್ಯವಿವಾಹ ತಡೆಯಲು ಮುಂದೆ ಬರುತ್ತಿದ್ದಾರೆ. ಪುರೋಹಿತರೇ ಬಾಲ್ಯವಿವಾಹ ನೆರವೇರಿಸಲು ನಿರಾಕರಿಸಿದರೆ, ಈ ಅಪರಾಧವನ್ನು ದೇಶದಿಂದ ಪ್ರಾರಂಭದಿಂದಲೇ ನಿರ್ಮೂಲನೆ ಮಾಡಬಹುದು, “ಮುನಿಗಳು ಮತ್ತು ಧರ್ಮಗುರುಗಳಿಗೆ ನಾವು ತಿಳಿಸಿದ್ದೇವೆ, ಬಾಲ್ಯವಿವಾಹವು ಅತ್ಯಾಚಾರಕ್ಕೆ ದಾರಿ ಮಾಡಿಕೊಡುವ ಅಪರಾಧವಾಗಿದೆ. ಯಾವುದೇ ಧರ್ಮವೂ ಈ ಅಪರಾಧಕ್ಕೆ ಬೆಂಬಲ ನೀಡುವುದಿಲ್ಲ. ಅವರ ಬೆಂಬಲವಿಲ್ಲದೆ ಯಾವುದೇ ಸಮುದಾಯವೂ ಬಾಲ್ಯವಿವಾಹ ಮಾಡಲಾಗದು. ಆದ್ದರಿಂದ ಅವರ ಸ್ಪಷ್ಟ ಬೆಂಬಲದಿಂದ ಈ ವರ್ಷ ಜಿಲ್ಲೆಯಲ್ಲಿ ಅಕ್ಷಯ ತೃತೀಯದಂದು ಯಾವುದೇ ಬಾಲ್ಯವಿವಾಹವಿಲ್ಲದ ನಿಜವಾದ ಶುಭ ದಿನವಾಗಲಿದೆ.” ಎಂದು ನಾವು ನಂಬಿದ್ದೇವೆ.”
ಹಿ ಕುಮಾರ್, ಸಂಯೋಜಕರು, ರೀಚ್ ಸಂಸ್ಥೆ