ಯರಗಟ್ಟಿ, 01 : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಈ ಭಾಗದ ಬಡಜನರಿಗೆ ಅನುಕೂಲವಾಗಲೆಂದು ಡಯಾಲಿಸಿಸ್ ಕೇಂದ್ರವನ್ನು ಸರ್ಕಾರ ಮಂಜೂರು ಮಾಡಿದೆ. ಈ ಭಾಗದ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು' ಎಂದು ಹೇಳಿದರು.
'ಜನಸಂಖ್ಯೆಗೆ ಅನುಸಾರವಾಗಿ ಯರಗಟ್ಟಿಯ 30 ಹಾಸಿಗೆಯಿಂದ 100 ಹಾಸಿಗೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡುವೆ' ಎಂದು ಹೇಳಿದರು.
ಸವದತ್ತಿ ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬೀನೀಸ್ ಮಾತನಾಡಿ, 'ಡಯಾಲಿಸಿಸ್ ಇದು ಕೃತಕ ಮೂತ್ರ ಪಿಂಡದಂತೆ ಕಾರ್ಯನಿರ್ವಹಿಸುತ್ತದೆ. ಮೂತ್ರ ಪಿಂಡದ ವೈಫಲ್ಯವು ಶುಗರ್, ಬಿಪಿ ಇದ್ದವರಿಗೆ ಹೆಚ್ಚಾಗಿ ಕಂಡು ಬರುತ್ತದೆ. ವೈದ್ಯರ ಸಲಹೆ ಇಲ್ಲದೇ ಓಷಧ ಸೇವನೆ, ಚಟಗಳಿಂದ ಮೂತ್ರ ಪಿಂಡದ ಮೇಲೆ ಪರಿಣಾಮವಾಗಿ ಮೂತ್ರ ಪಿಂಡದ ಕಾರ್ಯ ಸ್ಥಗಿತಗೊಂಡಾಗ ಡಯಾಲಿಸಿಸ್ ಮಾಡಲಾಗುತ್ತದೆ' ಎಂದು ಹೇಳಿದರು
ಈವೇಳೆ ಡಾ.ಆರ್.ಬಿ. ಯರಝರ್ವಿ, ಡಾ.ಭುವನೇಶ್ವರಿ ಬಳ್ಳೂರ, ಕ್ಷೇತ್ರ ಆರೋಗ್ಯ ಅಧಿಕಾರಿ ಐ.ಆರ್. ಗಂಜಿ, ನೀಖಿಲ ಪಾಟೀಲ, ಮಂಜು ತಡಸಲೂರ, ಕೆ.ಎಂ.ಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಉಮೇಶ ಮಾಗುಂಡನ್ನವರ, ಬನಪ್ಪಗೌಡ ಪಾಟೀಲ, ಮಹಾಂತೇಶ ಉಪ್ಪಿನ, ಪ್ರಕಾಶ ವಾಲಿ, ಮಹಾಂತೇಶಹಿರೇಮಠ, ಮಹಾಂತೇಶ ಕತ್ತಿ, ಸುನಿಲ ಕಾಶನ್ನವರ ಇದ್ದರು.