ಹೃದಯಘಾತ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ನೇರ ಪೋನ್‌-ಇನ್ ಜಾಗೃತಿ ಕಾರ್ಯಕ್ರಮ

A direct phone-in awareness program on heart attack causes, symptoms and treatment

ಹೃದಯಘಾತ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ನೇರ ಪೋನ್‌-ಇನ್ ಜಾಗೃತಿ ಕಾರ್ಯಕ್ರಮ 

ಬೆಳಗಾವಿ 30 : ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಗುರುವಾರ ದಿನಾಂಕ 30ನೆ ಜನವರಿ 2025 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ಹೃದಯಘಾತ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ನೇರ ಪೋನ್‌-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಾಧವ ಪ್ರಭು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೃದಯಘಾತಕ್ಕೆ ಕಾರಣಗಳು, ಲಕ್ಷಣಗಳು, ಹೃದಯಘಾತ ತಡೆಗಟ್ಟುವಿಕೆ, ಮುನ್ನೇಚ್ಚರಿಕೆ ಸಲಹೆಗಳು ಮತ್ತು ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಿದರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್‌. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.