ಲೋಕದರ್ಶನ ವರದಿ
ವಿಜಯಪುರ 03:ನಗರದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ, 2018-19ನೇ ಸಾಲಿನ "ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾಥರ್ಿಗಳಿಗೆ ಬೀಳ್ಕೊಡುವ ಸಮಾರಂಭವು" ಕಾಲೇಜಿನ ಗಜಾನನ ಹಾಲ್ನಲ್ಲಿ ಜರುಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯಪುರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಮಾನ್ಯ ಶ್ರೀ ಎಸ್. ವಾಯ್. ಅಮಾತೆಯವರು ಮಾತನಾಡಿ ವಿದ್ಯಾಥರ್ಿಗಳು ಶ್ರದ್ಧೆಯಿಂದ ಸತತ ಅಭ್ಯಾಸ ಮಾಡಿ, ಉತ್ತಮ ಫಲಿತಾಂಶ ಪಡೆದು ಸತ್ಪ್ರಜೆಗಳಾಗಿ, ಪ್ರಾಮಾಣಿಕ ಜೀವನ ನಡೆಸಬೇಕೆಂದರು. ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದಶರ್ಿಗಳಾದ ಮಾನ್ಯ ಶ್ರೀ ಸೋಮನಗೌಡ ಬಿ. ಪಾಟೀಲ (ಸಾಸನೂರ) ರವರು ಮಾತನಾಡಿ ಸಮಯ ಸದ್ಬಳಕೆ ಮಾಡಿಕೊಂಡು ಅಭ್ಯಾಸ ಮಾಡಿ, ವಿದ್ಯಾಥರ್ಿಗಳು ಉನ್ನತ ಸಾಧನೆ ಮಾಡಬೇಕೆಂದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ ಡಿ. ದರಬಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಥರ್ಿಗಳು ಉತ್ತಮ ಫಲಿತಾಂಶ ಪಡೆದು ಗುರುಗಳಿಗೆ, ಪಾಲಕರಿಗೆ ಹಾಗೂ ವಿದ್ಯಾಲಯಕ್ಕೆ ಕೀತರ್ಿ ತರಬೇಕೆಂದರು. ವಿದ್ಯಾವರ್ಧಕ ಸಂಘದ ಸಮನ್ವಯಾಧಿಕಾರಿಗಳಾದ ಡಾ|| ವ್ಹಿ. ಬಿ. ಗ್ರಾಮಪುರೋಹಿತ ರವರು ಮಾತನಾಡಿ ವಿದ್ಯಾಥರ್ಿಗಳ ಕೀಳರಿಮೆಯಿಂದ ಹೊರಬಂದು ಸಾಂಪ್ರದಾಯಿಕ ಕೋಸರ್ುಗಳಲ್ಲದೆ ಹೊಸ ಕೋಸರ್ುಗಳ ಕಡೆಗೆ ಗಮನ ಹರಿಸಿ ಉತ್ತಮ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು.
ಕುವೆಂಪು ಜನ್ಮ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಅಂಗವಾಗಿ ನಡೆಸಿದ ಭಾಷಣ ಸ್ಪಧರ್ೆಯಲ್ಲಿ ವಿಜೇತರಾದ ಕುಮಾರಿ ಗೀತಾ ವೈದ್ಯ ಹಾಗೂ ಕುಮಾರಿ ಅನ್ನಪೂರ್ಣ ಯರನಾಳ ಇವರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಸಾಧನೆಗೈದ ವಿದ್ಯಾಥರ್ಿಗಳಿಗೂ ಬಹುಮಾನ ವಿತರಿಸಲಾಯಿತು. ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ಪ್ರಾಚಾರ್ಯರಾದ ಶ್ರೀ ಟಿ. ಆರ್. ಕುಲಕಣರ್ಿ (ಜಾಲವಾದ) ರವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ನಾಗರಾಜ ಎ. ಮತ್ತು ಶ್ರೀ ಸಿ. ಎಸ್. ಸಜ್ಜನರ ಅತಿಥಿ ಗಣ್ಯರನ್ನು ಪರಿಚಯಿಸಿದರು. ಶ್ರೀಮತಿ ಎ. ಎಸ್. ಕುಲಕಣರ್ಿಯವರು ವಾಷರ್ಿಕ ವರದಿ ವಾಚಿಸಿದರು. ಶ್ರೀಮತಿ ಆರ್. ವಿ. ಪಾವಸೆ ಕ್ರೀಡಾ ಸಾಧಕರ ವಿವರ ನೀಡಿದರು. ವಿದ್ಯಾಥರ್ಿ ಪ್ರತಿನಿಧಿ ಕುಮಾರಿ ಪೂಜಾ ಎಸ್. ಪಾಟೀಲ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾಥರ್ಿಗಳು ಈ ವಿದ್ಯಾಲಯದಿಂದ ಉತ್ತಮ ಶಿಕ್ಷಣ ಪಡೆದೆವು ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಪನ್ಯಾಸಕರಾದ ಶ್ರೀ ಎ. ಕೆ. ಸಣ್ಣಿಂಗಮ್ಮನವರ ರವರು ವಂದಿಸಿದರು. ಶ್ರೀ ಬಿ. ಎಚ್. ಕುಲಕಣರ್ಿ ನಿರೂಪಿಸಿದರು. ಆಹ್ವಾನಿತರು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿ/ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.