ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ ರಿಂದ ವಿಶೇಷ ಆರೋಗ್ಯ ಮತ್ತು ಪರಿಸರ ಜಾಗೃತಿ ಚಿತ್ರ ರಚನೆ

A special health and environment awareness film by Kumari Ananya Raghavendra Palanakar on the occas

ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ ರಿಂದ ವಿಶೇಷ ಆರೋಗ್ಯ ಮತ್ತು ಪರಿಸರ ಜಾಗೃತಿ ಚಿತ್ರ ರಚನೆ 

ಗದಗ  04 : -ಜಾಗತಿಕ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಅವಳಿ ನಗರವಾದ ಗದಗ-ಬೆಟಗೇರಿಯ ಪ್ರತಿಷ್ಟಿತ ಶಾಲೆಯಾದ ಗದಗ ಶಹರದ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ  ಶಾಲೆಯಲ್ಲಿ  7 ನೇ  ತರಗತಿಯಲ್ಲಿ  ವ್ಯಾಸಂಗ  ಮಾಡುತ್ತಿರುವ  ಪ್ರತಿಭಾನ್ವಿತ  ವಿದ್ಯಾರ್ಥಿನಿ  ಕುಮಾರಿ  ಅನನ್ಯ  ರಾಘವೇಂದ್ರ ಪಾಲನಕರ ಇತಳು ಜಾಗತಿಕ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ವಿಶೇಷ  ಚಿತ್ರಕಲೆಯನ್ನು ರಚಿಸುವ ಮೂಲಕ ಜನಸಮೂದಾಯಕ್ಕೆ ದುಶ್ಚಟಗಳಾದ ತಂಬಾಕುಯುಕ್ತ ಎಲಿ ಅಡಿಕೆ, ಗುಟಾಖಾ, ಮಧ್ಯಪಾನ, ಮಾದಕ ದ್ರವ್ಯ ಸೇವನೆ, ಧೂಮಪಾನ ಇತ್ಯಾದಿಗಳ ದುಶ್ಚಟಗಳಿಂದ ಯುವ ಪೀಳಿಗೆಯು ದೊರವಿರಬೇಕು ಎಂಬ ಸಂದೇಶದೊಂದಿಗೆ ದುಶ್ಚಟಗಳಿಂದ ದೂರವಿದ್ದರೆ ಜನಸಾಮಾನ್ಯರ ಆರೋಗ್ಯ ಮತ್ತು ಸ್ವಚ್ಛಂದ ಪರಿಸರವನ್ನು  ಕಾಯ್ದುಕೊಳ್ಳುವ  ಕುರಿತು ವಿಶೇಷ ಆರೋಗ್ಯ  ಮತ್ತು  ಪರಿಸರ ಜಾಗೃತಿ ಚಿತ್ರಕಲೆಯನ್ನು ರಚಿಸುವ ಮೂಲಕ ಗಮನ ಸೆಳೆದಿರುತ್ತಾಳೆ. 

ಇಂದು ಜಾಗತಿಕವಾಗಿ ಆಚರಿಸಲ್ಪಡುವ ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ರಚಿಸಲಾದ ಚಿತ್ರಕಲೆಗೆ ಶಾಲೆಯ ಆಡಳಿತ ಮಂಡಳಿ ಶಿಕ್ಷಕ ವೃಂದ ಹಾಗೂ ತಾಯಿ ಸಹನಾ ರಾಘವೇಂದ್ರ ಪಾಲನಕರ, ಹಾಗೂ ಕುಟುಂಬ ವರ್ಗದವರು ಪ್ರಶಂಷೆಯನ್ನು ವ್ಯಕ್ತಪಡಿಸಿರುತ್ತಾರೆ.