ಮಾ.06ರಂದು ಪ್ರಧಾನಿ ಮೋದಿಯವರಿಂದ ಸ್ಪೇಶಾಲಿಟಿ ಆಸ್ಪತ್ರೆ ಉದ್ಘಾಟನೆ

ಲೋಕದರ್ಶನವರದಿ

ಹುಬ್ಬಳ್ಳಿ03 : ಬಹುದಿನಗಳ ನಿರೀಕ್ಷಿತ ಭಾರತ ಸರಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ-3 ರ ಅಡಿ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ನಿಮರ್ಿತವಾದ 200 ಹಾಸಿಗೆಗಳ ಸರ್ವಸುಸಜ್ಜಿತ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯನ್ನು ಇದೇ ಫೆ.06 ರಂದು ಪ್ರಧಾನಿ ನರೇಂದ್ರ ಮೋದಿರವರು ಕಲಬುಗರ್ಿಯಿಂದ ಉದ್ಘಾಟಿಸಲಿದ್ದಾರೆಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಒಟ್ಟು 150 ಕೋಟಿ ವೆಚ್ಚದಲ್ಲಿ ನಿಮರ್ಿತವಾದ ಈ ಆಸ್ಪತ್ರೆ ಕೇಂದ್ರದ 80% ಹಾಗೂ ರಾಜ್ಯ ಸರಕಾರದ 20% ಅನುಪಾದದ ವೆಚ್ಚದಲ್ಲಿ ರೂ 120 ಕೋಟಿ ಕೇಂದ್ರ ಸರಕಾರ ನೀಡಿದ್ದರೆ ರಾಜ್ಯ ಸರಕಾರ ರೂ 30 ಕೋಟಿ ಪಾಲುದಾರಿಕೆಯಲ್ಲಿ ನಿಮರ್ಿತವಾಗಿದ್ದು ಹಲವಾರು ವಿಶಿಷ್ಟತೆ ಹೊಂದಿದೆ.

 ಹೊಸ ಸೂಪರ್ ಸ್ಪೇಶಾಲಿಟಿ ವಿಭಾಗಗಳಾದ ನೆಫ್ರಾಲಜಿ, ಮೂತ್ರರೋಗ, ನರರೋಗ, ನರಶಸ್ತ್ರ ಚಿಕಿತ್ಸೆ, ಮಕ್ಕಳ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಗ್ಯಾಸ್ಟ್ರೋ ಎಂಟರೋಲಾಜಿ, ಸಜರ್ಿಕಲ್ ಗ್ಯಾಸ್ಟ್ರೋ ಎಂಟರೋಲಾಜಿ ವಿಭಾಗಗಳನ್ನೊಳಗೊಂಡ ಈ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಸಾಧನ ಸಲಕರಣೆಗಳಿಂದ ಸುಸಜ್ಜಿತವಾದ ವಾರ್ಡಗಳು ಇರಲಿವೆ. ಕೇಂದ್ರ ಆರೋಗ್ಯ ಸಚಿವರಾದ ನಡ್ಡಾರವರೊಂದಿಗಿನ ನನ್ನ ನಿರಂತರ ಸಂಪರ್ಕದಿಂದಾಗಿ ಮೋದಿ ಸರಕಾರದ ಅವಧಿಯಲ್ಲಿ ತ್ವರಿತಗತಿಯಲ್ಲಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಈ ಆಸ್ಪತ್ರೆ ಸಮಸ್ತ ಉತ್ತರ ಕನರ್ಾಟಕ ಭಾಗದ ಜನರಿಗೆ ಆರೋಗ್ಯ ಕ್ಷೇತ್ರದಲ್ಲಿ ಒಂದು ಹೆಮ್ಮೆಯ ಉತೃಷ್ಟ ವೈದ್ಯಕೀಯ ಕೇಂದ್ರವಾಗಲಿದೆಯೆಂದು ಸಂಸದ ಜೋಶಿ ತಿಳಿಸಿದ್ದಾರೆ.  ಫೆ.06 ರಂದು ಕಲಬುಗರ್ಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರು ಈ ಆಸ್ಪತ್ರೆಯನ್ನು ಉದ್ಘಾಟಿಸಲಿರುವುದು ವಿಶೇಷವಾಗಿದೆ.

   ರೂ 150 ಕೋಟಿ ವೆಚ್ಚದಲ್ಲಿ  ನಿಮರ್ಿಸಲಾಗ ಈ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಈ ಭಾಗಕ್ಕೆ  ಮೋಧಿ ಸರಕಾರ ನೀಡಿದ ಮತ್ತೊಂದು ಕೊಡುಗೆಯಾಗಿದೆಯೆಂದು ಸಂಸದ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.