ಕನಕದಾಸ ಬಡಾವಣೆ ನಾಗರಿಕರಿಂದ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ
ವಿಜಯಪುರ 03 : ನಗರದ ಸಿದ್ಧೇಶ್ವರ ವೃತ್ತದಲ್ಲಿ ದಿನಾಂಕ: 02-01-2025 ರಂದು ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಕನಕದಾಸ ಬಡಾವಣೆಯ ನಾಗರಿಕರು ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮದ್ ಶ್ರೀಶೈಲ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲಂ ಮಹಾಪೀಠ ಇವರ ದಿವ್ಯ ಸಾನ್ನಿಧ್ಯದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರು, ಯುವಕರು ಸೇರಿದಂತೆ ನೂರಾರು ಜನ ಭಕ್ತವೃಂದದವರು ಉಪಸ್ಥಿತರಿದ್ದರು.