ಲೋಕದರ್ಶನ ವರದಿ
ಕೊಪ್ಪಳ 08: ನಗರದ ಜೆಸ್ಕಾಂ ಕಛೇರಿ ರಸ್ತೆಯಲ್ಲಿರುವ ಖಾಸ್ಗಿ ಕಟ್ಟಡ್ಡಯೊಂದರಲ್ಲಿ ಬಡ ನಿರ್ಗತಿಕರ ಮತ್ತು ಆನಾಥ ಮಕ್ಕಳಿಗಾಗಿ ಏರ್ಪಡಿಸಿರುವ ಬಸೇರಾ ಯತೀಮ್ ಖಾನಾ ಅನಾಥಶ್ರಮಕ್ಕೆ ಮೈಸೂರು ಭಾವೈಕ್ಯಪೀಠದ ಪೀಠಾಧಿಪತಿ ಬಸವಲಿಂಗಮೂತರ್ಿ ಶರಣರು ಭೇಟಿ ಮಾಡಿ ಅನಾಥಾಶ್ರಮದ ಮಕ್ಕಳೊಂದಿಗೆ ಸಂವಾದ ನೆಡೆಸಿದರು.
ನಂತರ ಮಾತನಾಡಿದ ಶ್ರೀಗಳು ಇಂತಹ ಕಾರ್ಯಕ್ಕೆ ಸಹಕಾರ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಅನಾಥ ಮಕ್ಕಳ ಸೇವೆ ಮಾಡಿ ಪುಣ್ಯಗಳಿಸಿಕೊಳ್ಳವಲ್ಲಿ ಮುಂದಾಗಿ ಎಂದರು ಸಂಸ್ಥೆಯ ಮುಖ್ಯಸ್ಥ ಎಂ.ಡಿ.ಯುಸುಫ್ ಖಾನ್ ನೆತೃತ್ವದ ಬಳಗದ ಕಾರ್ಯಕ್ಕೆ ಶ್ಲ್ಯಾಘಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ ಸಾದಿಕ ಅಲಿ, ಟ್ರಸ್ಟನ್ ಸದಸ್ಯ ಶಬ್ಬೀರ್, ತಾಜುದ್ದಿನ್, ಶರ್ಮಸ್ ಅಲಿ, ಮೊಯಿನುದ್ದಿನ್ ನಿಯಾಜಿ ಸೇರಿದಂತೆ ಬಸೇರಾ ಯತೀಮ್ ಖಾನಾದ ಮೇಲ್ವಿಚಾರಕಿ ಸಾಬೀರಾ ಬೇಗಂ ಸೇರಿದಂತೆ ಅನಾಥಶ್ರಮದ ಮಕ್ಕಳ ಪಾಲ್ಗೊಂಡಿದ್ದರು.